ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ನಿಲ್ಲಿಸಿ: ಬಿಜೆಪಿ ಶಾಸಕನ ಪತ್ರ

ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ ಘಾಜಿಯಾಬಾದ್ ಬಿಜೆಪಿ ಶಾಸಕ ನಂದ ಕಿಶೋರ್ ಗುಜ್ಜಾರ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಪತ್ರ ಬರೆದಿದ್ದಾರೆ. ಸಲ್ಮಾನ್ ಖಾನ್ ಅವರ ಈ ಶೋನಲ್ಲಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತಿದ್ದು, ಫ್ಯಾಮಿಲಿ ಕುಳಿತು ನೋಡುವಂತೆ ಇಲ್ಲ ಎಂದು ದೂರಿದ್ದಾರೆ.

ಇದು ನಮ್ಮ ದೇಶದ ಸಂಸ್ಕøತಿಗೆ ವಿರುದ್ಧವಾಗಿದ್ದು, ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗುತ್ತಿದೆ. ಎರಡು ಸಮುದಾಯದ ಯುವಕ, ಯುವತಿಯರು ಒಂದೇ ಬೆಡ್‍ನಲ್ಲಿ ಮಲಗೋದನ್ನು ಒಪ್ಪಲು ಸಾಧ್ಯವೇ ಇಲ್ಲ. ಒಂದು ಕಡೆ ಪ್ರಧಾನಿ ಮೋದಿಯವರು ದೇಶದ ವೈಭವವನ್ನು ವಾಪಸ್ ತರಲು ಯತ್ನಿಸುತ್ತಿದ್ರೆ, ಮತ್ತೊಂದ್ಕಡೆ ಈ ರೀತಿಯ ಶೋಗಳು ದೇಶದ ಸಂಸ್ಕøತಿಯನ್ನು ಮತ್ತಷ್ಟು ಹಾಳು ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ಅಪ್ರಾಪ್ತರು ಕೂಡ ಈ ಶೋ ನೋಡುತ್ತಾರೆ. ಹೀಗಾಗಿ ಕೆಲವೊಂದು ಸೀನ್ ಗಳಿಗೆ ಸೆನ್ಸಾರ್ ಮಾಡಬೇಕು ಎಂದಿದ್ದಾರೆ.

ಇನ್ನು ಹಿಂದೂ ಮಹಾಸಭಾ ಕೂಡ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ಈಗಿಂದೀಗಲೇ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದೆ.

Contact Us for Advertisement

Leave a Reply