ಹರಿಯಾಣ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ..ರಾಜ್ಯ ಸರ್ಕಾರದ ಉದ್ಯೋಗದಲ್ಲಿ ಶೇ.95 ಮೀಸಲಾತಿ

ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ದಲಿತರಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಘೋಷಿಸಿದೆ. ಜೊತೆಗೆ ಸಣ್ಣ ಮತ್ತು ಅತೀ ಸಣ್ಣ ರೈತರಿಗೂ ಇದೇ ರೀತಿಯ ಸಾಲ ಸೌಲಭ್ಯ ನೀಡೋದಾಗಿ ಘೋಷಿಸಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಅಂದ್ರೆ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಶೇ.95ರಷ್ಟು ರಾಜ್ಯದ ಜನತೆಗೆ ಮೀಸಲಿಡೋದಾಗಿ ತಿಳಿಸಿದೆ. ಹರಿಯಾಣ ನಮ್ಮ ಕನಸು ಎಂಬ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 15 ಚಾಪ್ಟರ್ ಮತ್ತು 248 ಪಾಯಿಂಟ್ಸ್​ಗಳನ್ನು ಹೊಂದಿದೆ. ಈ ಬಗ್ಗೆ ಮಾತನಾಡಿರುವ ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್​​, ರಾಮರಾಜ್ಯದ ನೀತಿಗಳನ್ನು ಆಧಾರವಾಗಿಟ್ಟುಕೊಂಡು ಈ ಪ್ರಣಾಳಿಕೆ ತಯಾರಿಸಲಾಗಿದೆ ಎಂದಿದ್ದಾರೆ. ಕಾಂಗ್ರೆಸ್​​ನಂತೆ ದೊಡ್ಡ ದೊಡ್ಡ ಯೋಜನೆ ಮತ್ತು ಸುಳ್ಳು ಸುಳ್ಳು ಭರವಸೆಗಳನ್ನು ಘೋಷಿಸೋದರಲ್ಲಿ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್​​ ನೀಡಿರುವ ಭರವಸೆಗಳನ್ನು ಈಡೇರಿಸಬೇಕಾದ್ರೆ 1.26 ಲಕ್ಷ ಕೋಟಿಯ ಬಜೆಟ್ ಬೇಕಾಗುತ್ತೆ. ಆದ್ರೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Contact Us for Advertisement

Leave a Reply