ಉಪಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ..!

ಯಡಿಯೂರಪ್ಪ ಸರ್ಕಾರ 2023ರ ವರೆಗೂ ಇರುತ್ತಾ..? ಅಥವಾ ಉಪಚುನಾವಣೆ ಬಳಿಕ ಹೊಗೆ ಹಾಕಿಸಿಕೊಳ್ಳುತ್ತಾ..? ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುತ್ತೆ ಗೊತ್ತಾ? ಈ ರೋಚಕ ಮಾಹಿತಿಯನ್ನ ನಾವು ನಿಮ್ಗೆ ಹೇಳ್ತೀವಿ ನೋಡಿ..

ರಾಜ್ಯದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈ ಉಪಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 6 ಕ್ಷೇತ್ರಗಳಲ್ಲಿ ಗೆಲ್ಲಲೆಬೇಕು. ಆಗ ಮಾತ್ರ ಯಡಿಯೂರಪ್ಪ ಸರ್ಕಾರ ಸೇಫ್. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಅಡ್ಡ ಬೀಳುವ ಎಲ್ಲಾ ಸಾಧ್ಯತೆಗಳು ಇವೆ. ಹಾಗಾದ್ರೆ ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೆ ಅಂತ ಗೊತ್ತಾಗಬೇಕು ಅಂದ್ರೆ ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶವನ್ನ ಒಂದ್ ಸಾರಿ ನೋಡ್ಲೇಬೇಕು.

6 ಕ್ಷೇತ್ರಗಳಲ್ಲಿ ಕಮಲ ಅರಳುವುದು ಪಕ್ಕಾ..!
ಹೌದು ಫ್ರೆಂಡ್ಸ್ ನಾವು ಆಗಲೇ ಹೇಳಿದ ಹಾಗೆ ಬಿಜೆಪಿ ಸರ್ಕಾರ 2023ರ ವರೆಗೂ ಇರಬೇಕು ಅಂದ್ರೆ ಕನಿಷ್ಠ 6 ಕ್ಷೇತ್ರಗಳನ್ನ ಗೆಲ್ಲಬೇಕು. ಮಸ್ತ್ ಮಗಾ ಲೆಕ್ಕಾಚಾರದ ಪ್ರಕಾರ ಬಿಜೆಪಿ 6 ಕ್ಷೇತ್ರಗಳನ್ನ ಗೆದ್ದೇ ಗೆಲ್ಲುತ್ತೆ. ಹಾಗಾದ್ರೆ ಆ 6 ಕ್ಷೇತ್ರಗಳು ಯಾವುದು ಅಂತ ಹೇಳ್ತಾ ಹೋಗ್ತಿವಿ ನೋಡಿ.

ಹಿರೇಕೆರೂರು
ಬಿ.ಸಿ. ಪಾಟೀಲ್(ಕಾ) 72461
ಯು.ಬಿ. ಬಣಕರ್(ಬಿ) 71906
ಅಂತರ: 555

ಉಪಚುನಾವಣೆಯಲ್ಲಿ ಬಿಜೆಪಿ ಸಲೀಸಾಗಿ ಗೆಲ್ಲಬಹುದಾದ ಕ್ಷೇತ್ರವೆಂದರೆ ಅದು ಹಿರೇಕೆರೂರು. ಇಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ಬಿ. ಸಿ. ಪಾಟೀಲ್ ಕೇವಲ 555 ಮತಗಳಿಂದ ಗೆದ್ದಿದ್ರು. ಅವರ ವಿರುದ್ಧ ಬಿಜೆಪಿಯ ಯು.ಬಿ. ಬಣಕರ್ ಕೆಲವೇ ಮತಗಳ ಅಂತರದಿಂದ ಸೋತಿದ್ರು. ಹೀಗಾಗಿ ಹಿರೇಕೆರೂರು ಕ್ಷೇತ್ರದಲ್ಲಿ ಬಿಜೆಪಿ ಸ್ವಲ್ಪ ಎಫರ್ಟ್ ಹಾಕಿದ್ರು ಗೆಲ್ಲಬಹುದು.

ಯಲ್ಲಾಪುರ
ಶಿವರಾಮ್ ಹೆಬ್ಬಾರ್(ಕಾ) 66290
ಶಿವನಗೌಡ ಪಾಟೀಲ್(ಬಿ) 64807
ಅಂತರ 1483

ಕಳೆದ ಸಲ ಯಲ್ಲಾಪುರ ಕ್ಷೇತ್ರದಿಂದ ಕಾಂಗ್ರೆಸ್ ನಲ್ಲಿದ್ದ ಶಿವರಾಮ್ ಹೆಬ್ಬಾರ್ ಕೇವಲ 1483 ಮತಗಳಿಂದ ಜಯಭೇರಿ ಬಾರಿಸಿದ್ರು. ಬಿಜೆಪಿಯ ಶಿವನಗೌಡ ಪಾಟೀಲ್ ಸೋತಿದ್ದರು. ಹೀಗಾಗಿ ಬೈಎಲೆಕ್ಷನ್ನಲ್ಲಿ ಬಿಜೆಪಿ ಸ್ವಲ್ಪ ವರ್ಕೌಟ್ ಮಾಡಿದ್ರೆ ಯಲ್ಲಾಪುರದಲ್ಲಿ ಈ ಬಾರಿ ಕಮಲ ಅರಳಿಸಬಹುದು.

ಅಥಣಿ
ಮಹೇಶ್ ಕುಮಟಳ್ಳಿ(ಕಾ) 82,094
ಲಕ್ಷ್ಮಣ್ ಸವದಿ(ಬಿ) 79,763
ಅಂತರ 2,331

ಬೈಎಲೆಕ್ಷನ್ ನಲ್ಲಿ ಬಿಜೆಪಿ ತೆಕ್ಕೆಗೆ ಬೀಳಬಹುದಾದ ಮತ್ತೊಂದು ಕ್ಷೇತ್ರವೆಂದರೆ ಅದು ಅಥಣಿ. ಇಲ್ಲಿ ಕಳೆದ ಸಲ ಕಾಂಗ್ರೆಸ್ ನಲ್ಲಿದ್ದ ಮಹೇಶ್ ಕುಮಟಳ್ಳಿ 2331 ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಲಕ್ಷ್ಮಣ ಸವದಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.

ಹೊಸಕೋಟೆ
ಎಂಟಿಬಿ ನಾಗರಾಜ್(ಕಾ) 98824
ಶರತ್ ಬಚ್ಚೇಗೌಡ(ಬಿ) 91227
ಅಂತರ 7597

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಎಂಟಿಬಿ ನಾಗರಾಜ್ ಗೆದ್ದಿದ್ದು 7597 ಮತಗಳಿಂದ. ಅವರ ವಿರುದ್ಧ ತೊಡೆತಟ್ಟಿದ್ದ ಬಿಜೆಪಿಯ ಶರತ್ ಬಚ್ಚೇಗೌಡ ಸೋತಿದ್ದರು. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಸ್ವಲ್ಪ ಶ್ರಮ ಹಾಕಿದ್ರೆ ಹೊಸಕೋಟೆಯನ್ನ ವಶಪಡಿಸಿಕೊಳ್ಳಬಹುದು.

ವಿಜಯನಗರ
ಆನಂದ್ ಸಿಂಗ್(ಕಾ) 83214
ಹೆಚ್. ಆರ್. ಗವಿಯಪ್ಪ(ಬಿ) 74986
ಅಂತರ 8228

ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ 8228 ಮತಗಳಿಂದ ಬಿಜೆಪಿಯ ಹೆಚ್. ಆರ್.ಗವಿಯಪ್ಪರನ್ನ ಮಣಿಸಿದ್ದರು. 8000 ಮತಗಳ ಅಂತರವನ್ನ ದೂರ ಮಾಡಿ ಬೈ ಎಲೆಕ್ಷನ್ ನಲ್ಲಿ ಗೆಲ್ಲೋದು ಬಿಜೆಪಿಗೆ ದೊಡ್ಡ ವಿಚಾರವಲ್ಲ.

ಗೋಕಾಕ್
ರಮೇಶ್ ಜಾರಕಿಹೊಳಿ(ಕಾ) 90,249
ಅಶೋಕ್ ಪೂಜಾರಿ(ಬಿ) 75,969
ಅಂತರ – 14,280

ಬೆಳಗಾವಿಯ ಗೋಕಾಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಜಾರಕಿಹೊಳಿ ಬಿಜೆಪಿಯ ಅಶೋಕ್ ನಿಂಗಯ್ಯ ಸ್ವಾಮಿ ಪೂಜಾರಿಯನ್ನ 14280 ಮತಗಳಿಂದ ಸೋಲಿಸಿದ್ದರು. ಹೀಗಾಗಿ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಎಫರ್ಟ್ ಹಾಕಿದ್ರೆ ಜಯಭೇರಿ ಸಾಧಿಸಬಹುದು.

ಕಳೆದ ವಿಧಾನಸಭೆ ಚುನಾವಣೆ ಈ ಆರು ಕ್ಷೇತ್ರಗಳಲ್ಲೂ ಬಿಜೆಪಿ 2ನೇ ಸ್ಥಾನ ಪಡೆದಿತ್ತು. ಅಲ್ಲದೆ ಸೋಲಿನ ಅಂತರ ಕೂಡ ಕಮ್ಮಿ ಇತ್ತು. ಹೀಗಾಗಿ ಉಪಚುನಾವಣೆಯಲ್ಲಿ ಕಮಲ ನಾಯಕರು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಿದ್ರೆ ಆರಕ್ಕೆ ಆರು ಕ್ಷೇತ್ರಗಳನ್ನ ಗೆಲ್ಲಬಹುದು.

Contact Us for Advertisement

Leave a Reply