ಮತ್ತೆ ಎರಡು ಭಾಗವಾಗಿ ಒಡೆದುಹೋಗುತ್ತಾ ಬಿಜೆಪಿ..?

ಫ್ರೆಂಡ್ಸ್.. ಬಿಜೆಪಿ ಮತ್ತೆ ಇಬ್ಭಾಗವಾಗುತ್ತಾ ಅನ್ನೋ ಪ್ರಶ್ನೆ ಮೂಡೋಕೆ ಕಂಡಿತ ಕಾರಣವಿದೆ. ರಾಜ್ಯ ರಾಜಕಾರಣ ಒಂದು ರೀತಿ ಹುಚ್ಚಾಸ್ಪತ್ರೆಯಂತೆ ಆಗಿಹೋಗಿದೆ. ಬಿಜೆಪಿ ಮನೆಯಲ್ಲೂ ಬೆಂಕಿಬಿದ್ದ ವಾತಾವರಣ. ಕಾಂಗ್ರೆಸ್ ಮನೆಯಲ್ಲೂ ಬೆಂಕಿಬಿದ್ದ ವಾತಾವರಣ. ಅದರಲ್ಲೂ ಸರ್ಕಾರ ರಚಿಸಿ ಅಧಿಕಾರದಲ್ಲಿದ್ದರೂ ಬಿಜೆಪಿಯ ಪರಿಸ್ಥಿತಿ ಕಲ್ಲು ಹೊಡೆಸಿಕೊಂಡ ಜೇನುಗೂಡಿನಂತೆ ಆಗಿಹೋಗಿದೆ. ಕೆಲವೊಂದು ಬೆಳವಣಿಗೆಗಳು ಬಿಜೆಪಿ ಮತ್ತೆ ಎರಡು ಭಾಗವಾಗಿ ಒಡೆದು ಹೋಗುತ್ತಿದೆಯಾ ಅನ್ನೊ ಅನುಮಾನ ಮೂಡಿಸುತ್ತಿದೆ.

ಯಡಿಯೂರಪ್ಪ ಒಂದು ತೀರ! ಪಕ್ಷ ಒಂದು ತೀರ!
ಹೌದು… ಒಂದು ಕಡೆ ಯಡಿಯೂರಪ್ಪ ಟೈಟಾಗಿ ಸರ್ಕಾರ ನಡೆಸೋಕೇನೋ ಪ್ರಯತ್ನ ಪಡುತ್ತಿದ್ದಾರೆ. ಆದರೆ ಅವರಿಗೆ ಈ ಬಾರಿ ಈ ಹಿಂದಿನಷ್ಟು ಸ್ವೇಚ್ಛಾಚಾರದ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಹಿಂದೆ ಸರ್ಕಾರದಲ್ಲಿ ಮತ್ತು ಪಕ್ಷದಲ್ಲಿ ಯಡಿಯೂರಪ್ಪ ಮಾತೆ ಫೈನಲ್ ಆಗಿರುತ್ತಿತ್ತು. ಸರ್ಕಾರ ಹಾಗೂ ಪಕ್ಷದ ಎಲ್ಲಾ ಆಯಕಟ್ಟಿನ ಜಾಗಗಳನ್ನು ತಮ್ಮ ಬೆಂಬಲಿಗರನ್ನು ತುಂಬಿಕೊಂಡು ಓಡಾಡುತ್ತಿದ್ದರು ಯಡಿಯೂರಪ್ಪ. ಆದರೆ ಈಗ ಕಥೆ ಬೇರೆ ರೀತಿ ಇದೆ. ಸರ್ಕಾರದ ವಿಚಾರದಲ್ಲಿ ಈಗಲೂ ಯಡಿಯೂರಪ್ಪ ಮಾತೇ ಫೈನಲ್. ಆದರೆ ಪಕ್ಷದ ನಿರ್ಧಾರಗಳ ವಿಚಾರದಲ್ಲಿ ಕಂಟ್ರೋಲ್ ಈಗ ಬೇರೆ ಕೈಗಳಲ್ಲಿ ಇದೆ. ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾದ ನಂತರ ಬಿ.ಎಲ್. ಸಂತೋಷ್ ಕಟೀಲ್ ಮೂಲಕ ನೇರವಾಗಿ ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದಾರೆ. ಇದರ ಪರಿಣಾಮ ಬಿಜೆಪಿ, ಪಕ್ಷ ನಿಷ್ಠರು ಮತ್ತು ಯಡಿಯೂರಪ್ಪ ನಿಷ್ಠರು ಅಂತಾ, ಮತ್ತೆ, ಕ್ಲಿಯರ್ ಕಟ್ ಆಗಿ, ಎರಡು ಭಾಗ ಆದಂತೆ ಕಾಣುತ್ತಿದೆ. ಯಡಿಯೂರಪ್ಪ ಮತ್ತು ಅವರ ಆಪ್ತರ ಗುಂಪು ಯಡಿಯೂರಪ್ಪ ಪರ ಗಟ್ಟಿಯಾಗಿ ನಿಂತಿದೆ. ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದರೆ ಸಾಮೂಹಿಕ ರಾಜೀನಾಮೆಯ ಬೆದರಿಕೆ ಹಾಕುತ್ತಿದೆ. ಆದರೆ ಪಕ್ಷ ನಿಷ್ಠರ ಗುಂಪು ಸಂತೋಷ್ ಜೀ ಮತ್ತು ನಳಿನ್ ಕುಮಾರ್ ಕಟೀಲ್ ಅಣತಿಯಂತೆ ನಡೆಯುತ್ತಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷದ ನಿರ್ಣಯವೇ ಅಂತಿಮ ಅಂತ ವಾದ ಮಾಡುತ್ತಿದೆ. ಅದಕ್ಕೆ ಈಶ್ವರಪ್ಪ ಕೊಟ್ಟಿರುವ ಈ ಹೇಳಿಕೆಯೇ ಸಾಕ್ಷಿ.

‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಪಕ್ಷವನ್ನ ಮೀರಿ ಬೆಳೆಯುತ್ತೇನೆ ಅಂತ ಹೋದವರು ಯಾರು ಉದ್ದಾರ ಆಗಿಲ್ಲ. ಈಗ ಯಡಿಯೂರಪ್ಪನವರನ್ನೇ ನೋಡಿ. ಸ್ವಂತ ಪಕ್ಷ ಕಟ್ಟಿದಾಗ ಮೂರು ಮತ್ತೊಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಹೀಗಾಗಿ ಪಕ್ಷವೇ ಎಲ್ಲಕ್ಕಿಂತ ಮುಖ್ಯ’
– ಕೆ.ಎಸ್.ಈಶ್ವರಪ್ಪ, ಸಚಿವ.

ಈ ಮಾತುಗಳನ್ನು ಹೇಳುವ ಮೂಲಕ ಕೆಎಸ್ ಈಶ್ವರಪ್ಪ, ಯಡಿಯೂರಪ್ಪರ ಹೆಸರು ಹೇಳಿಕೊಂಡು ಗಲಾಟೆ ಮಾಡುತ್ತಿರುವ ಅವರ ಬೆಂಬಲಿಗ ಪಡೆಗೆ ನೇರ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಆದರೆ ಈ ಕುಸ್ತಿ ಅಷ್ಟು ಸುಲಭ ಇಲ್ಲ. ಯಾಕಂದ್ರೆ ಯಡಿಯೂರಪ್ಪ ಕರ್ನಾಟಕ ಬಿಜೆಪಿಯ ಅತಿದೊಡ್ಡ ನಾಯಕ. ಪಕ್ಷದ ಚಟುವಟಿಕೆ ಬೇರೆ ಸರ್ಕಾರದ ಚಟುವಟಿಕೆ ಬೇರೆ, ನೀವು ನಿಮ್ಮ ಪಾಡಿಗೆ ಸರ್ಕಾರವನ್ನು ನಡೆಸಿಕೊಂಡು ಹೋಗಿ. ನಾವು ಪಕ್ಷ ನಡೆಸುತ್ತೇವೆ ಎನ್ನುವ ನಿಲುವಿಗೆ ಯಡಿಯೂರಪ್ಪ ಒಪ್ಪಿಕೊಂಡರೆ ಸರಿ. ಆಗ ಏನು ಸಮಸ್ಯೆ ಆಗುವುದಿಲ್ಲ. ಅದು ಬಿಟ್ಟು ಯಡಿಯೂರಪ್ಪ ಏನಾದರೂ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಂಡಾಯವನ್ನು ಸಾರಿದರೆ, ಆಗ ಪರಿಸ್ಥಿತಿ ಬಹಳ ಕಷ್ಟವಾಗುತ್ತದೆ. ಯಾಕಂದ್ರೆ ಯಡಿಯೂರಪ್ಪನವರ ಶಕ್ತಿ ಫಿಫ್ಟಿ ಪರ್ಸೆಂಟ್, ಬಿಜೆಪಿಯ ಶಕ್ತಿ ಫಿಫ್ಟಿ ಪರ್ಸೆಂಟ್. ಎರಡು ಸೇರಿದರೆ ಮಾತ್ರ ಬಿಜೆಪಿ ಹಂಡ್ರೆಡ್ ಪರ್ಸೆಂಟ್ ಆಗೋದು. ಯಡಿಯೂರಪ್ಪರನ್ನು ಮೈನಸ್ ಮಾಡಿದರೆ ಬಿಜೆಪಿಯ ಅರ್ಧ ಶಕ್ತಿ ಕುಸಿದುಹೋಗುತ್ತದೆ. ಅದೇ ರೀತಿ ಬಿಜೆಪಿಯನ್ನು ಮೈನಸ್ ಮಾಡಿದರೂ ಯಡಿಯೂರಪ್ಪನವರ ಅರ್ಧ ಶಕ್ತಿ ಕುಸಿದುಹೋಗುತ್ತದೆ. ಇದು ಈ ಹಿಂದೆಯೂ ಪ್ರೂವ್ ಆಗಿದೆ. ಸೋ, ಮೊದಲೇ ಮುಂಗೋಪಿ ಆಗಿರುವ ಯಡಿಯೂರಪ್ಪ ಮತ್ತೊಂದು ಬಾರಿ ರೊಚ್ಚಿಗೆದ್ದು ಬಂಡಾಯ ಸಾರಿದರೆ, ಅದನ್ನ ಸಮಾಧಾನಪಡಿಸಲು ಹೈಕಮಾಂಡ್ಗೆ ಸಾಧ್ಯವಾಗದಿದ್ದರೆ, ಬಿಜೆಪಿ ಮತ್ತೆ ಇಬ್ಭಾಗವಾಗುವತ್ತ ಸಾಗುವುದು ಖಚಿತ.

ಈ ಹಿಂದೆ ಎರಡು ಭಾಗ ಆಗಿತ್ತು ಬಿಜೆಪಿ!
ಫ್ರೆಂಡ್ಸ್ ಈ ಹಿಂದೆಯೂ ಇದೇ ರೀತಿ ಸೀನ್ ಕ್ರಿಯೇಟ್ ಅಗಿತ್ತು. ಪಕ್ಷ ಮತ್ತು ತಮ್ಮ ನಡುವೆ ಸಂಘರ್ಷ ಮಿತಿಮೀರಿದಾಗ ಯಡಿಯೂರಪ್ಪ ಪಕ್ಷವನ್ನು ಬಿಟ್ಟು, ಬಿಜೆಪಿಯನ್ನು ಒಡೆದುಹಾಕಿ, 2012ರಲ್ಲಿ ಕೆಜೆಪಿಯನ್ನು ಕಟ್ಟಿದ್ದರು. ಅದರ ಪರಿಣಾಮ ಯಡಿಯೂರಪ್ಪ ಮತ್ತು ಬಿಜೆಪಿ ಇಬ್ಬರೂ ನಾಶವಾಗಿ ಹೋಗಿದ್ದರು. ಆಗ ಬಿಜೆಪಿ ಮತ್ತು ಯಡಿಯೂರಪ್ಪ ಒಬ್ಬರನ್ನು ಬಿಟ್ಟು ಮತ್ತೊಬ್ಬರಿಲ್ಲ ಅನ್ನೋದು ಸಾಬೀತಾಗಿತ್ತು.

ಲಾಭ ಪಡೆಯಬೇಕಿದ್ದ ಕಾಂಗ್ರೆಸ್ ತಾನೇ ಬುಡಕ್ಕೆ ಬೆಂಕಿ ಹಾಕಿಕೊಂಡಿದೆ!
ಹೌದು ಫ್ರೆಂಡ್ಸ್ ಬಿಜೆಪಿ ಒಳಗೆ ಮತ್ತು ಸರ್ಕಾರದಲ್ಲಿ ಇಷ್ಟೆಲ್ಲಾ ಗಲಾಟೆ ನಡೀತಾ ಇದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಅಟ್ಯಾಕ್ ಮಾಡಬೇಕಾಗಿತ್ತು. ನೆರೆ ಸಮಸ್ಯೆ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪದೋಷದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗಿತ್ತು. ಆದರೆ ಸಿದ್ದು ಪರ ಮತ್ತು ವಿರೋಧಿ ಗುಂಪುಗಳ ಬಡಿದಾಟ ದಲ್ಲಿ ಕಾಂಗ್ರೆಸ್ ಬಿಜಿಯಾಗಿದೆ.

ಇನ್ನು ಫ್ರೆಂಡ್ಸ್ ಈ ಬಗ್ಗೆ ನೀವೇನಂತೀರಿ. ಬಿಜೆಪಿ ಮತ್ತೆ 2 ಭಾಗ ಆಗುತ್ತಾ. ಅಥವಾ ಈ ಸಮಸ್ಯೆಗೆ ಪರಿಹಾರ ಕಂಡು ಹುಡುಕುವಲ್ಲಿ ಅಮಿತ್ ಶಾ ಯಶಸ್ವಿಯಾಗುತ್ತಾರಾ..?

Contact Us for Advertisement

Leave a Reply