ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್​ ಖಾನ್​ಗೆ ಬಿಗ್ ರಿಲೀಫ್​!

masthmagaa.com:

1998ರಲ್ಲಿ ‘ಹಮ್​ ಸಾಥ್​ ಸಾಥ್ ಹೇ’ ಸಿನಿಮಾದ ಶೂಟಿಂಗ್ ವೇಳೆ ಎರಡು ಕೃಷ್ಣಮೃಗಗಳನ್ನ ಬೇಟೆಯಾಡಿದ ಪ್ರಕರಣದಲ್ಲಿ ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಬಿಗ್ ರಿಲೀಫ್ ಸಿಕ್ಕಿದೆ. ಗನ್ ಲೈಸೆನ್ಸ್​ಗೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​ ಕೋರ್ಟ್​ಗೆ ಸಲ್ಲಿಸಿದ್ದ ಅಫಿಡವಿಟ್​ ತಪ್ಪಾಗಿದೆ, ಇದು ದಾರಿತಪ್ಪಿಸುವ ಯತ್ನ ಅಂತ ರಾಜಸ್ಥಾನ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಜೋಧ್​ಪುರ್​ ಡಿಸ್ಟ್ರಿಕ್ಟ್​ ಮತ್ತು ಸೆಷನ್ಸ್​ ಕೋರ್ಟ್​ ವಜಾ ಮಾಡಿದೆ. ಅಂದ್ರೆ ಸಲ್ಮಾನ್ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾ ಆಗಿದೆ.

ಹಾಗಿದ್ರೆ ಏನಿದು ಕೇಸ್​ ಅಂತ ನೋಡೋದಾದ್ರೆ, 1998ರಲ್ಲಿ ರಾಜಸ್ಥಾನದ ಜೋಧ್​ಪುರ್​ನ ಕಂಕಣಿ ಎಂಬ ಗ್ರಾಮದಲ್ಲಿ ಸಿನಿಮಾ ಶೂಟಿಂಗ್​ಗೆ ಅಂತ ಬಂದಿದ್ದ ಸಲ್ಮಾನ್​ ಎರಡು ಕೃಷ್ಣಮೃಗಗಳನ್ನ ಬೇಟೆಯಾಡಿದ್ರು. ಬಳಿಕ ಅರೆಸ್ಟ್ ಆದ ಅವರು ಜಾಮೀನು ಪಡೆದು ಹೊರಬಂದ್ರು. ಈ ವೇಳೆ ತಾವು ಹೊಂದಿರುವ ಗನ್​ನ ಲೈಸೆನ್ಸ್​ ಅನ್ನು ಸಬ್​ಮಿಟ್​ ಮಾಡುವಂತೆ ಕೋರ್ಟ್​ ಹೇಳಿತ್ತು. 2003ರಲ್ಲಿ ಈ ಸಂಬಂಧ ಅಫಿಡವಿಟ್​ ಸಲ್ಲಿಸಿದ್ದ ಸಲ್ಮಾನ್​ ಖಾನ್​, ಲೈಸೆನ್ಸ್ ಕಳೆದುಹೋಗಿದೆ ಅಂತ ಹೇಳಿದ್ರು. ಆದ್ರೆ ಲೈಸೆನ್ಸ್​ ಕಳೆದುಹೋಗಿರಲಿಲ್ಲ. ಅದನ್ನ ರಿನೀವಲ್​ಗೆ ಕೊಡಲಾಗಿತ್ತು ಅನ್ನೋದು ನಂತ್ರದಲ್ಲಿ ಕೋರ್ಟ್​ಗೆ ಗೊತ್ತಾಯ್ತು. ಘಟನೆ ನಡೆದು 20 ವರ್ಷದ ಬಳಿಕ ಅಂದ್ರೆ 2018ರಲ್ಲಿ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್​ ಖಾನ್ ತಪ್ಪಿತಸ್ಥ ಅಂತ ತೀರ್ಪು ನೀಡಿದ ಕೋರ್ಟ್​ 5 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೊತೆಗೆ ಕೃಷ್ಣಮೃಗ ಬೇಟೆಯಾಡುವಾಗ ಸಲ್ಮಾನ್​ ಖಾನ್​ ಜೊತೆಗಿದ್ದ ‘ಹಮ್​ ಸಾಥ್​ ಸಾಥ್ ಹೇ’ ಚಿತ್ರದ ನಟ, ನಟಿಯರಾದ ಸೈಫ್ ಅಲಿ ಖಾನ್, ತಬು, ಸೋನಾಲಿ ಬೇಂದ್ರೆ ಮತ್ತು ನೀಲಂ ಅವರನ್ನ ಕೋರ್ಟ್​ ಖುಲಾಸೆಗೊಳಿಸ್ತು. ಈ ತೀರ್ಪನ್ನ ಪ್ರಶ್ನಿಸಿ ಸಲ್ಮಾನ್ ಖಾನ್​ ಸೆಷನ್ಸ್​ ಕೋರ್ಟ್​ಗೆ ಹೋದ್ರು. ಇದೆಲ್ಲಾ ಆದ ಬಳಿಕ ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಸಲ್ಮಾನ್ ವಿರುದ್ಧ ರಾಜಸ್ಥಾನ ಸರ್ಕಾರ ಕೋರ್ಟ್​ ಮೆಟ್ಟಿಲೇರ್ತು. ಈ ಅರ್ಜಿ ವಿಚಾರಣೆ ವೇಳೆ ನಟ ಸಲ್ಮಾನ್​ ಖಾನ್ ಮಂಗಳವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಕೋರ್ಟ್​ ಮುಂದೆ ಹಾಜರಾಗಿ, ಮಿಸ್ಸಾಗಿ ಅಫಿಡವಿಟ್​ ಸಲ್ಲಿಸಿದ್ದೆ, ನನ್ನನ್ನ ಕ್ಷಮಿಸಿ ಅಂತ ಕೇಳಿದ್ರು. ಇವತ್ತು ಮತ್ತೆ ವಿಚಾರಣೆ ನಡೆಸಿದ ಕೋರ್ಟ್ ರಾಜಸ್ಥಾನ​ ಸರ್ಕಾರದ ಎರಡೂ ಅರ್ಜಿಗಳನ್ನ ವಜಾ ಮಾಡಿದೆ.

-masthmagaa.com

Contact Us for Advertisement

Leave a Reply