ಮೊದಲ ದಿನವೇ ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿಎಂ ಬೊಮ್ಮಾಯಿ!

masthmagaa.com:

ರಾಜ್ಯದ 23ನೇ ಮುಖ್ಯಮಂತ್ರಿಯಾಗಿ, ವ್ಯಕ್ತಿಗತವಾಗಿ 23ನೇ ಸಲ, ಆದ್ರೆ ಕೆಲವರು ಒಂದಕ್ಕಿಂತ ಹೆಚ್ಚಿನ ಸಲ ಪ್ರಮಾಣ ವಚನ ಸ್ವೀಕರಿಸಿರ್ತತಾರೆ. ಅದನ್ನ ಸೆಪರೇಟಾಗಿ ಕೌಂಟ್ ಮಾಡಿದ್ರೆ 30ನೇ ಸಿಎಂ ಆಗಿ ಇವತ್ತು ಬಸವರಾಜ ಬೊಮ್ಮಾಯಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ರು. ಅವರಿಗೆ ರಾಜ್ಯಪಾಲರಾದ ಥಾವರ್​ಚಂದ್​ ಗೆಹ್ಲೋಟ್ ರಾಜಭವನದಲ್ಲಿ​ ಪ್ರಮಾಣವಚನ ಭೋದಿಸಿದ್ರು. ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಉನ್ನತ ಅಧಿಕಾರಿಗಳ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್​ ವಾರ್ನಿಂಗ್ ಕೊಟ್ರು. ಅಧಿಕಾರಿಗಳು ಏನೇ ಮಾಡಿದ್ರೂ ನಡೆಯುತ್ತೆ ಅಥವಾ ಚಲ್ತಾ ಹೇ ಅನ್ನೋ ಮನೋಭಾವವನ್ನ ಬಿಡಬೇಕು. ನಿಮ್ಮ ನಿಮ್ಮ ಕೆಲಸ ಸರಿಯಾಗಿ ಆಗ್ತಿದೆಯಾ ನೋಡ್ಬೇಕು. ಎಲ್ಲಾ ವಿಭಾಗಗಳ ನಡುವೆ ಸಹಕಾರ ಇರಬೇಕು. ಎಲ್ಲರೂ ಒಂದು ಟೀಂ ರೀತಿ ಕೆಲಸ ಮಾಡ್ಬೇಕು. ತಾನು ಕೂಡ ಒಬ್ಬ ಟೀಂ ಸದಸ್ಯ. ಯಾವುದೇ ಕೆಲಸ ಲೇಟ್​ ಆಗ್ಬಾರ್ದು. ಲೇಟ್​ ಆದ್ರೆ ಖರ್ಚು ಮತ್ತು ಭ್ರಷ್ಟಾಚಾರ ಎರಡೂ ಹೆಚ್ಚಾಗುತ್ತೆ. ಅಲ್ಲದೆ ಶೀಘ್ರದಲ್ಲೇ ಕಡತ ವಿಲೇವಾರಿ ಅಭಿಯಾನವನ್ನ ನಡೆಸಬೇಕು ಅಂತ ಪ್ಲಾನ್ ಮಾಡಿದ್ದೇವೆ. ಕನಿಷ್ಠ 15 ದಿನಗಳ ಒಳಗೆ ಅಪ್​ ಟು ಡೇಟ್​ ಫೈಲ್​ ವ್ಯವಸ್ಥೆ ಬರಬೇಕು ಅನ್ನೋ ಪ್ಲಾನ್ ಇದೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ರು.

-masthmagaa.com

Contact Us for Advertisement

Leave a Reply