ಬೆಡ್‌ಶೀಟ್‌ ಜೊತೆಯಲ್ಲಿ ಮದುವೆ ಮಾಡಿಕೊಂಡ ಬ್ರಿಟನ್‌ ಮಹಿಳೆ!

masthmagaa.com:

ಯಾರು ಯಾರ ಜೊತೆ ವಿವಾಹವಾಗ್ತಾರೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅನ್ನೋ ಮಾತಿದೆ. ಆದ್ರೆ ಬ್ರಿಟನ್‌ನ ಪಾಸ್ಕೆಲ್‌ ಸೆಲ್ಲಿಕ್‌ ಅನ್ನೊ ಮಹಿಳೆ ಬೆಡ್‌ಶೀಟ್‌ ಜೊತೆಯಲ್ಲಿ ಮದುವೆ ಮಾಡಿಕೊಂಡಿದ್ದಾಳೆ. ಈ ಮದುವೆ ವಿಡಿಯೋ ಸೊಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡಿರೋ ಪಾಸ್ಕೆಲ್‌, ಬೆಡ್‌ಶೀಟ್‌ನ್ನ ಸಹ ಆಕರ್ಷಕವಾಗಿ ಸಿಂಗಾರ ಮಾಡಿ, ಅದ್ರ ಮೇಲೆ ʻಡುವೆಟ್‌ ಐ ಲವ್‌ ಯೂʼ ಅಂತ ಬರೆದಿದ್ದಾರೆ. ಜೊತೆಗೆ ಬೆಡ್‌ಶೀಟ್‌ನೊಂದಿಗೆ ಉಂಗುರ ಬದಲಾಯಿಸಿಕೊಂಡು ಮದುವೆಯಾಗಿದ್ದಾಳೆ. ವಿಶೇಷ ಅಂದ್ರೆ ಪಾಸ್ಕೆಲ್‌, ಬೆಡ್‌ಶೀಟ್‌ ಜೊತೆಗಿನ ಮದುವೆಗೆ ತನ್ನ ಬಾಯ್‌ಫ್ರೆಂಡ್‌ನ್ನ ಸಹ ಕರೆದಿದ್ದಾಳೆ. ಮದುವೆಗೆ ಬಂದಿದ್ದ ಬಾಯ್‌ಫ್ರೆಂಡ್‌ ನನ್ನ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾನೆ ಅಂತ ಪಾಸ್ಕೆಲ್‌ ಹೇಳಿಕೊಂಡಿದ್ದಾಳೆ.

-masthmagaa.com

Contact Us for Advertisement

Leave a Reply