ಮಗುವಿನ ಹೊಟ್ಟೆ ಸೀಳಿ, ಎಸೆದ ದುಷ್ಟರು..!

ಮಾನವ ಸಮಾಜವೇ ನಾಚಿಕೆಪಡುವಂತಹ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಹೊಟ್ಟೆ ಸೀಳಿ ಮನೆಯಿಂದ ನೂರೈವತ್ತು ಅಡಿ ದೂರದಲ್ಲಿ ಎಸೆಯಲಾಗಿದೆ. ಆದ್ರೆ ಹೊಟ್ಟೆ ಕತ್ತರಿಸಿದ್ದರೂ ಸಹ ಮಗು ಇನ್ನೂ ಜೀವಂತವಾಗಿತ್ತು. ನೋವಿನಿಂದ ಅಳುತ್ತಿತ್ತು. ಇದನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಬಂದು ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಮುಂಗೇರ್ ಜಿಲ್ಲೆಯ ತಾರಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದ್ರೆ ಮಗುವಿನ ಸ್ಥಿತಿ ಕಂಡ ವೈದ್ಯರು ತಕ್ಷಣವೇ ಮಾಯಾಗಂಜ್ ಭಾಗಲ್‍ಪುರ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ಕೊಟ್ಟಿದ್ದಾರೆ. ರಾಜ್ ಮಿಸ್ತ್ರಿ ಎಂಬುವವರ ಮಗು ಇದಾಗಿದ್ದು, ಮನೆಯೊಳಗೆ ಅವರ ಪತ್ನಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಒಂದೂವರೆ ವರ್ಷದ ಮಗು ಆಶೀಶ್ ಕುಮಾರ್ ಮನೆ ಹೊರಗೆ ಆಟವಾಡುತ್ತಿದ್ದ. ಈ ವೇಳೆ ಮಗು ಇದ್ದಕ್ಕಿದ್ದಂತೆ ಚೀರಾಡುತ್ತಿರೋದನ್ನು ಕೇಳಿ ಓಡಿಬಂದು ನೋಡಿದಾಗ, ಮನೆಯಿಂದ ನೂರೈವತ್ತು ಅಡಿ ದೂರದಲ್ಲಿದ್ದ ಗದ್ದೆಯಲ್ಲಿ ಮಗು ಬಿದ್ದಿತ್ತು. ಅದರ ಹೊಟ್ಟೆಯನ್ನು ಹರಿತದ ಆಯುಧದಿಂದ ಸೀಳಲಾಗಿತ್ತು. ಇದ್ರಿಂದಾಗಿ ಅದರ ಕರಳು ಮತ್ತು ಲಿವರ್ ಹೊರಗೆ ಬಂದು ನೇತಾಡುತ್ತಿತ್ತು. ಸದ್ಯ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಜೀವ ಉಳಿಸಿದ್ದಾರೆ.

 

पेट काटकर मासूम बच्ची को फेंका, लीवर और आंत बाहर, क‍िस्मत से बची जान

पेट काटकर मासूम बच्ची को फेंका, लीवर और आंत बाहर, क‍िस्मत से बची जान

पेट काटकर मासूम बच्ची को फेंका, लीवर और आंत बाहर, क‍िस्मत से बची जान

Contact Us for Advertisement

Leave a Reply