ಬೆಂಗಳೂರಲ್ಲಿ ನೀರಿಗಾಗಿ ಹೋರಾಟ..! ಮಹಾರಾಷ್ಟ್ರಕ್ಕೆ ನೀರು ಕೊಡ್ತಾರಂತೆ ಬಿಎಸ್​ವೈ..!

ಮಹಾರಾಷ್ಟ್ರ: ಇದೇ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹೀಗಾಗಿಯೇ ರಾಜ್ಯದಲ್ಲಿ ಪ್ರವಾಹ ಬಂದು ಜನ ಪರದಾಡ್ತಾ ಇದ್ದರೂ ನಮ್ಮ ಸಿಎಂ, ಡಿಸಿಎಂ ಎಲ್ಲರೂ ಮಹಾರಾಷ್ಟ್ರದಲ್ಲಿ ಹೋಗಿ ಓಟ್ ಕೇಳ್ತಿದ್ದಾರೆ. ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರ ಕೈಗೊಂಡಿರುವ ಯಡಿಯೂರಪ್ಪ ಇವತ್ತು ಜತ್ ತಾಲೂಕಿನಲ್ಲಿ ಪ್ರಚಾರ ನಡೆಸಿದ್ರು. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಪ್ರಚಾರದ ವೇಳೆ ನೀವು ಮತ ಹಾಕಿ, ನಾವು ನೀರು ಹರಿಸುತ್ತೇವೆ ಅಂತ ಹೇಳಿಬಿಟ್ಟಿದ್ದಾರೆ.

ಸಭೆ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಜತ್ ತಾಲೂಕಿನ ಹೆಚ್ಚು ಜನರು ಕನ್ನಡ ಭಾಷಿಕರು. ಕೃಷಿ ಮತ್ತು ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಇವತ್ತು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮಕ್ಕೆ ತಲುಪಿದೆ. ಈ ಗ್ರಾಮದಿಂದ 8-10 ಕಿಮೀ ದೂರದಲ್ಲಿ ಹರಿಯುತ್ತಿರುವ ಬೋರಾ ನದಿಗೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಹರಿಸಿದ್ರೆ ಸುಮಾರು 40 ಗ್ರಾಮಗಳಿಗೆ ನೀರಿನ ಸಮಸ್ಯೆ ಪರಿಹಾರವಾಗುತ್ತೆ ಎಂದಿದ್ದಾರೆ. ನಾವೆಲ್ಲಾ ಒಂದೇ, ನೀರಿನ ಸಮಸ್ಯೆ ಎಲ್ಲರಿಗೂ ಒಂದೇ. ನೀರಿಲ್ಲದೆ ಬದುಕಲು ಆಗುವುದಿಲ್ಲ. ರೈತರ ಹೊಗಳಿಗೆ ನೀರು ಬೇಕು ಎಂದಿದ್ದಾರೆ.  ವಿಪರ್ಯಾಸ ಅಂದ್ರೆ ಯಡಿಯೂರಪ್ಪ ಅಲ್ಲಿ ನೀರು ಕೊಡ್ತೀನಿ ಅಂತ ಭಾಷಣ ಮಾಡ್ತಿದ್ರೆ, ಇಲ್ಲಿ  ಸಾವಿರಾರು ಸಂಖ್ಯೆಯಲ್ಲಿ ರೈತರು ಬೆಂಗಳೂರಿಗೆ ಆಗಮಿಸಿದ್ದು, ಕಳಸಾ-ಬಂಡೂರಿ ಯೋಜನೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Contact Us for Advertisement

Leave a Reply