ರಸ್ತೆಬದಿ ಮಲಗಿದ್ದವರ ಮೇಲೆ ಬಸ್ ಹರಿದು 7 ಮಂದಿ ಸಾವು..!

ರಸ್ತೆ ಬದಿಯಲ್ಲಿ ಮಲಗಿದ್ದ ಯಾತ್ರಾರ್ಥಿಗಳ ಮೇಲೆ ಬಸ್ ಹರಿದು 7 ಜನ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಬುಲಂದ್ ಶೇರ್‍ನ ಗಂಗಾಘಾಟ್ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು, ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ಮೂಲದ ಇವರು ನರೌರಾದಲ್ಲಿ ಗಂಗಾನದಿಯಲ್ಲಿ ಮುಳುಗಿ, ಪೂಜೆ ಸಲ್ಲಿಸಿ ವಾಪಸ್ ಹೊರಟಿದ್ದರು. ಆದ್ರೆ ರಾತ್ರಿಯಾಗಿದ್ದರಿಂದ ರಸ್ತೆ ಪಕ್ಕದಲ್ಲಿಯೇ ಮಲಗಿದ್ದರು. ಆದ್ರೆ ಇಂದು ಮುಂಜಾನೆ ಖಾಸಗಿ ಬಸ್ ಒಂದು ಅವರ ಮೇಲೆ ಹರಿದಿದ್ದು, 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸ್ ಚಾಲಕ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಎಲ್ಲಾ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

Contact Us for Advertisement

Leave a Reply