ಬುಮ್ರಾ ಜೀವನದ ನೋವಿನ ಕಥೆ..! ಭಾವುಕರಾದ ತಾಯಿ, ಮಗ..!

ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅವರ ತಾಯಿ ತಮ್ಮ ಜೀವನದ ಕೆಲವು ಸತ್ಯಗಳನ್ನು ಹೇಳಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಬುಮ್ರಾ 5 ವರ್ಷದವನಿದ್ದಾಗ ನಾನು ನನ್ನ ಪತಿಯನ್ನು ಕಳೆದುಕೊಂಡೆ ಎಂದು ಬುಮ್ರಾ ತಾಯಿ ದಲ್ಬೀಜ್ ಭಾವುಕರಾಗಿದ್ದಾರೆ. ಅಲ್ಲದೆ ಒಮ್ಮೆ ಬುಮ್ರಾಗೆ ಶೂ ಕೊಡಿಸಲು ಅಂಗಡಿಗೆ ಕರೆದುಕೊಂಡು ಹೋದೆ. ಆದ್ರೆ ಅಲ್ಲಿ ಶೂ ರೇಟು ತುಂಬಾ ಜಾಸ್ತಿ ಇತ್ತು. ಅದನ್ನು ಬುಮ್ರಾಗೆ ಕೊಡಿಸಲು ಆಗಲಿಲ್ಲ. ಆಗ ಮುಂದೆ ನಾನೇ ಈ ಶೂಗಳನ್ನು ಖರೀದಿಸುತ್ತೇನೆ ಎಂದು ಬುಮ್ರಾ ಹೇಳಿದ್ದ. ಈಗ ಆ ಮಾತು ನಿಜ ಕೂಡ ಆಗಿದೆ. ಬುಮ್ರಾ ಬಳಿ ತುಂಬಾ ಶೂಗಳಿವೆ ಎಂದು ದಲ್ಜೀತ್ ಭಾವುಕರಾಗಿದ್ದಾರೆ.

ಇದೇ ವೇಳೆ ಮಾತನಾಡಿರುವ ಬುಮ್ರಾ, ನನ್ನ ಬಳಿ ಒಂದು ಜೊತೆ ಶೂ ಮತ್ತು ಟೀ ಶರ್ಟ್ ಬಿಟ್ಟರೆ ಬೇರೆ ಏನೂ ಇರಲಿಲ್ಲ ಎಂದಿದ್ದಾರೆ. ನನ್ನ ಬಳಿ ಕ್ರಿಕೆಟ್ ಡ್ರೆಸ್ ಕೂಡ ಒಂದೇ ಇರುತ್ತಿತ್ತು. ಪ್ರತಿ ಪಂದ್ಯದ ಬಳಿಕ ಅದನ್ನು ತೊಳೆಯುತ್ತಿದ್ದೆವು. ನೀವು ಸಣ್ಣ ಇರುವಾಗ ಕೇಳಿರಬಹುದು. ಆಟವಾಡುವಾಗ ಯಾರೋ ನೋಡಿ, ಸೆಲೆಕ್ಟ್ ಮಾಡಿದ್ರು ಅಂತ. ನನ್ನ ಜೀವನದಲ್ಲಿ ಅದು ನಿಜವಾಯ್ತು ಅಂತ ಹೇಳಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಕೂಡ ಬುಮ್ರಾ ಅವರನ್ನು ಹೊಗಳುತ್ತಿರೋದನ್ನು ನೋಡಬಹುದು.

Contact Us for Advertisement

Leave a Reply