ಉಪಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ..? ಯಾವ ಕ್ಷೇತ್ರ..?

ಕಳೆದ ವಿಧಾನಸಭೆ ಚುನಾವಣೆ ವೇಳೆ ವರುಣಾ ಕ್ಷೇತ್ರದಿಂದ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಣಕ್ಕೆ ಇಳಿಯಲು ಹೋಗಿ ಗಲಾಟೆಯಾಗಿದ್ದೆಲ್ಲಾ ನಿಮಗೆ ಗೊತ್ತೇ ಇದೆ. ಈಗ ವಿಧಾನಸಭೆ ಉಪಚುನಾವಣೆಯಲ್ಲಿ ಕೆಆರ್ ಪೇಟೆಯಿಂದ ವಿಜಯೇಂದ್ರ ಕಣಕ್ಕೆ ಇಳಿಯುತ್ತಾರೆ ಅಂತ ಹೇಳಲಾಗುತ್ತಿದೆ. ಕೆಆರ್ ಪೇಟೆ ಹಾಲಿ ಶಾಸಕ ನಾರಾಯಣಗೌಡ ಅನರ್ಹಗೊಂಡಿದ್ದು, ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿದೆ. ಹೀಗಾಗಿ ಒಂದು ವೇಳೆ ಉಪಚುನಾವಣೆಯಲ್ಲಿ ನಾರಾಯಣ ಗೌಡ ಸ್ಪರ್ಧೆ ಸಾಧ್ಯವಾಗದಿದ್ರೆ, ವಿಜಯೇಂದ್ರಗೆ ಟಿಕೆಟ್ ನೀಡಲು ಬಿಜೆಪಿ ಪ್ಲಾನ್ ಮಾಡಿದೆ. ಹೀಗಂತ ಕೆಆರ್ ಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಬೂಕಳ್ಳಿ ಮಂಜು ಹೇಳಿದ್ದಾರೆ. ಈ ಮೂಲಕ ಸಿಎಂ ತವರಿನಲ್ಲಿ ಕಮಲ ಅರಳಿಲು ಬಿಜೆಪಿ ಭರ್ಜರಿ ಪ್ಲಾನ್ ಮಾಡ್ತಿದೆ. ಆದ್ರೆ ನನಗೆ ಟಿಕೆಟ್ ನೀಡಲು ಸಾಧ್ಯವಾಗದಿದ್ರೆ ನನ್ನ ಪತ್ನಿಗಾದರೂ ಟಿಕೆಟ್ ನೀಡಿ ಎಂದು ಕೆಆರ್ ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿತ್ತು.

Contact Us for Advertisement

Leave a Reply