ವಿಧಾನಸಭೆಗೆ ಕ್ಯಾಮೆರಾಗಿಲ್ಲ ಪ್ರವೇಶ..! ಬಿಜೆಪಿ ಹೊಸ ರೂಲ್ಸ್..!

ವಿಧಾನಸಭೆ ಅಧಿವೇಶನ ಮೇಳೆ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳ ಕ್ಯಾಮೆರಾಗಳಿಗೆ ನಿರ್ಬಂಧ ಹೇರುವ ವಿವಾದಾತ್ಮಕ ತೀರ್ಮಾನವನ್ನು ಬಿಜೆಪಿ ಸರ್ಕಾರ ತೆಗೆದುಕೊಂಡಿದೆ. ನಾಳೆಯಿಂದ 3 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಈ ವೇಳೆ ಟಿವಿ ವಾಹಿನಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇದು ಹೊಸತೇನಲ್ಲ. ಈ ಹಿಂದೆಯೂ ಸಹ ಕ್ಯಾಮರಾಗಳು ಮತ್ತು ಮುದ್ರಣ ಮಾಧ್ಯಮಗಳ ಕ್ಯಾಮರಾಗಳಿಗೆ ವಿಧಾನಸಭೆ ಪ್ರವೇಶ ನಿಷೇಧಿಸುವ ಚರ್ಚೆ ಕೇಳಿಬಂದಿತ್ತು. ಆದ್ರೆ ಆಗ ವಿಪಕ್ಷದಲ್ಲಿದ್ದ ಬಿಜೆಪಿ ಇದು ಮಾಧ್ಯಮಗಳ ಸ್ವಾತಂತ್ರ್ಯದ ಹರಣ ಎಂದು ಕೂಗಾಡಿತ್ತು. ಆದ್ರೆ ಈಗ ಅದೇ ಬಿಜೆಪಿ ಸರ್ಕಾರ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ. ಇದರಿಂದಾಗಿ ಇನ್ಮುಂದೆ ದಿನಪತ್ರಿಕೆ ಹಾಗೂ ಟಿವಿ ವಾಹಿನಿಯ ವರದಿಗಾರರಿಗೆ ಮಾತ್ರ ವಿಧಾನಸಭೆಯೊಳಗೆ ಪ್ರವೇಶ ನೀಡಲಾಗಿದೆ.

ಸರ್ಕಾರದ ಈ ತೀರ್ಮಾನವನ್ನು ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧಿಸಿದ್ದಾರೆ. ಇದರಿಂದ ಮಾಧ್ಯಮಗಳ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದಂತಾಗುತ್ತೆ ಎಂದಿದ್ದಾರೆ.

Contact Us for Advertisement

Leave a Reply