ಇನ್ಮುಂದೆ ಡೆಮೊಕ್ರ್ಯಾಟ್‌ಗಳನ್ನ ಬೆಂಬಲಿಸಲ್ಲ, ರಿಪಬ್ಲಿಕನ್ನರಿಗೆ ಮತ ಹಾಕ್ತೀನಿ: ಮಸ್ಕ್‌

masthmagaa.com:

ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋ ಟೆಸ್ಲಾ CEO ಎಲಾನ್‌ ಮಸ್ಕ್‌ ಈಗ ಮತ್ತೊಂದು ಟ್ವೀಟ್‌ ಮಾಡಿದ್ದು, ಅದ್ರಲ್ಲಿ ಇನ್ಮುಂದೆ ಡೆಮೊಕ್ರ್ಯಾಟ್‌ಗಳನ್ನ ಬೆಂಬಲಿಸೋಲ್ಲ, ರಿಪಬ್ಲಿಕನ್ನರಿಗೆ ಮತ ಹಾಕ್ತೀನಿ ಅಂತ ಹೇಳಿದ್ದಾರೆ. ಜೊತಗೆ ಈ ಮುಂಚೆ ಡೆಮೊಕ್ರ್ಯಾಟ್‌ ಪಕ್ಷ ಪ್ರಮಾಣಿಕ ಪಕ್ಷವಾಗಿತ್ತು ಆದ್ರೆ ಈಗ ಅವ್ರು ದ್ವೇಷ ಮತ್ತು ಒಡೆದು ಆಳೋ ನೀತಿ ಅನುಸರಿಸ್ತಿದಾರೆ. ಈ ಕಾರಣದಿಂದ ನಾನು ಅವ್ರನ್ನ ಸಪೋರ್ಟ್ ಮಾಡಲ್ಲ ಅಂತ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ. ಅಂದ್ಹಾಗೆ ಡೆಮೊಕ್ರ್ಯಾಟ್‌ ಈಗಿನ ಜೋ ಬೈಡನ್‌ರ ಆಡಳಿತ ಪಕ್ಷ ಮತ್ತು ರಿಪಬ್ಲಿಕ್‌ ಮಾಜಿ ಅಧ್ಯಕ್ಷ ಟ್ರಂಪ್‌ರ ಪಕ್ಷ.

-masthmagaa.com

Contact Us for Advertisement

Leave a Reply