ಈ ಫೋಟೋದಲ್ಲಿ ಚಿರತೆಯನ್ನು ಹುಡುಕಿ…ವೈರಲ್ ಫೋಟೋ..

ಸಾಮಾಜಿಕ ಜಾಲತಾಣದಲ್ಲಿ ಚಿರತೆ ಇರೋ ಫೋಟೋ ಒಂದು ಫುಲ್ ವೈರಲ್ ಆಗ್ತಿದೆ. ಬೆಲ್ಲ ಲ್ಯಾಕ್ ಎಂಬುವವರು ಟ್ವಿಟ್ಟರ್‍ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ ನನಗೆ ಈಗಷ್ಟೇ ಈ ಫೋಟೋವನ್ನು ಯಾರೊ ಒಬ್ಬರು ಕಳುಹಿಸಿದ್ರು. ಮತ್ತು ಇದರಲ್ಲಿ ಚಿರತೆಯನ್ನು ಹುಡುಕಿ ಎಂದು ಹೇಳಿದ್ರು. ಆದ್ರೆ ಚಿರತೆಯನ್ನು ಹುಡುಕುವವರೆಗೆ ಇದೊಂದು ತಮಾಷೆ ಎಂದೇ ಭಾವಿಸಿದ್ದೆ. ನಿಮಗೆ ಕಾಣುತ್ತಾ ನೋಡಿ ಎಂದು ಕೇಳಿದ್ದಾರೆ. ಈ ಪೋಸ್ಟ್ 6 ಸಾವಿರಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದ್ದು, ಭಾರಿ ಸಂಖ್ಯೆಯಲ್ಲಿ ಕಮೆಂಟ್‍ಗಳೂ ಬಂದಿವೆ. ಇನ್ನು ಕೆಲವರು ಚಿರತೆಯನ್ನು ಮಾರ್ಕ್ ಮಾಡಿ ರೀಟ್ವೀಟ್ ಮಾಡಿದ್ದಾರೆ.

Contact Us for Advertisement

Leave a Reply