ಕೆನಡಾದಲ್ಲಿ ಭಾರತೀಯರ ಸಾವು, 75 ಲಕ್ಷ ಕೊಟ್ಟು ಅಲ್ಲಿಗೆ ಹೋಗಿದ್ಯಾಕೆ?

masthmagaa.com:

ಕೆನಡಾ-ಅಮೆರಿಕ ಗಡಿಯಲ್ಲಿ ಹಿಮದಲ್ಲಿ ಫ್ರೋಜ್​ ಆಗಿ ಪ್ರಾಣ ಬಿಟ್ಟ ಭಾರತ ಮೂಲದ ಕುಟುಂಬದ ಗುರುತನ್ನ ನಿನ್ನೆಯಷ್ಟೇ ಪತ್ತೆಹಚ್ಚಲಾಗಿತ್ತು. ಅದ್ರ ಬೆನ್ನಲ್ಲೇ ಇವತ್ತು ಕೆಲವೊಂದು ಶಾಕಿಂಗ್ ವಿಚಾರಗಳು ಹೊರಬಿದ್ದಿವೆ. ಇವರೆಲ್ಲಾ ಗುಜರಾತ್​​ನ ಗಾಂಧಿನಗರದ ಡಿಂಗುಚಾ ಗ್ರಾಮದವರು. 39 ವರ್ಷದ ಜಗದೀಶ್ ಪಟೇಲ್​, ಅವರ ಪತ್ನಿ 37 ವರ್ಷದ ವೈಶಾಲಿ ಪಟೇಲ್, 11 ವರ್ಷದ ಮಗಳು ವಿಹಾಂಗಿ ಪಟೇಲ್​, 3 ವರ್ಷದ ಮಗ ಧಾರ್ಮಿಕ್ ಪಟೇಲ್ ಅಂತ ಗೊತ್ತಾಗಿದೆ. ಈ ಕುಟುಂಬದ ಫಂಕ್ಷನ್​​ನ ಫೋಟೋವೊಂದನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸಾಮಾನ್ಯವಾಗಿ ಅಮೆರಿಕಕ್ಕೆ ದಕ್ಷಿಣದ ಮೆಕ್ಸಿಕೋದಿಂದ ಅಕ್ರಮವಾಗಿ ಹೋಗೋರು ಬಡವರು, ನಿರ್ಗತಿಕರೇ ಆಗಿರ್ತಾರೆ. ಆದ್ರೆ ಈ ಕುಟುಂಬ ಅಕ್ರಮವಾಗಿ ಗಡಿ ದಾಟಲು 1 ಲಕ್ಷ ಡಾಲರ್ ಅಂದ್ರೆ 75 ಲಕ್ಷ ರೂಪಾಯಿ ದುಡ್ಡು ನೀಡಿತ್ತು ಅಂತ ಗೊತ್ತಾಗಿದೆ. ಇಷ್ಟು ದುಡ್ಡು ಖರ್ಚು ಮಾಡೋರು ಈ ರೀತಿ ಅಕ್ರಮವಾಗಿ, ಅಪಾಯಕಾರಿ ದಾರಿಯನ್ನು ಹಿಡಿದಿದ್ದು ಯಾಕೆ ಅನ್ನೋದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಜನವರಿ 12ರಂದು ಕೆನಡಾದ ಟೋರೆಂಟೋಗೆ ಟೂರಿಸ್ಟ್​ ವೀಸಾ ಮೂಲಕ ಬಂದಿದ್ದ ಈ ಕುಟುಂಬ ಜನವರಿ 18ರ ವೇಳೆಗೆ ಕೆನಡಾ ಅಮೆರಿಕ ಗಡಿಯಾದ ಎಮರ್ಸನ್ ಅನ್ನೋ ನಗರಕ್ಕೆ ಬಂದಿದ್ದಾರೆ. ನಂತರ ಶವವಾಗಿ ಪತ್ತೆಯಾಗಿದ್ದಾರೆ. ಆದ್ರೆ ಸುತ್ತಮುತ್ತ ಯಾವುದೇ ವಾಹನಗಳು ಪತ್ತೆಯಾಗಿಲ್ಲ. ಹೀಗಾಗಿ ಇವರನ್ನು ಯಾರೋ ಇಲ್ಲಿವರೆಗೆ ಕರ್ಕೊಂಡು ಬಂದು ಬಿಟ್ಟು ಹೋಗಿದ್ದಾರೆ.. ಇದ್ನ ನೋಡ್ತಿದ್ರೆ ಮಾನವ ಕಳ್ಳಸಾಗಾಣಿಕೆಯ ಪ್ರಕರಣದಂತೆ ಕಾಣಿಸ್ತಿದೆ ಅಂತ ಮನಿಟೋಬಾ ಪ್ರಾಂತ್ಯದ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಕೊಟ್ಟಿದ್ದಾರೆ. ಜೊತೆಗೆ ಈ ಎಮರ್ಸನ್ ನಗರ ಮನಿಟೋಬಾ ಪ್ರಾಂತ್ಯದಲ್ಲಿ ಬರುತ್ತೆ. ಈ ಪ್ರಾಂತ್ಯದ ಚೀಫ್ ಮೆಡಿಕಲ್ ಎಕ್ಸಾಮೈನರ್ ಕೂಡ ಈ ಪಟೇಲ್ ಕುಟುಂಬದ ಸಾವು ಹಿಮದಿಂದಾಗಿಯೇ ಆಗಿದೆ ಅನ್ನೋದನ್ನ ಸ್ಪಷ್ಟಪಡಿಸಿದೆ.

ಇನ್ನು ಅಮೆರಿಕದಲ್ಲಿ ಸ್ಟೀವ್ ಶಂಡ್​ ಅನ್ನೋ 47 ವರ್ಷದ ಡ್ರೈವರ್​ನ್ನು ಅರೆಸ್ಟ್ ಮಾಡಲಾಗಿದೆ. ಈತ ಕೆನಡಾ ಅಮೆರಿಕ ಗಡಿಯಲ್ಲಿ 11 ಮಂದಿ ಭಾರತೀಯ ನಾಗರಿಕರನ್ನು ಕರ್ಕೊಂಡು ಹೋಗಬೇಕಿತ್ತು. ಆದ್ರೆ 11 ಮಂದಿಯಲ್ಲಿ 7 ಮಂದಿ ಮಾತ್ರ ಗಡಿ ದಾಟಲು ಸಾಧ್ಯವಾಯ್ತು. ಪಟೇಲ್ ಕುಟುಂಬದ ನಾಲ್ವರು ಗಡಿ ದಾಟಲು ಸಾಧ್ಯವಾಗಲಿಲ್ಲ.. ಹೀಗಾಗಿ ಗಡಿ ದಾಟಿದ್ದ 7 ಮಂದಿಯನ್ನು ಮಾತ್ರ ಈತ ಪಿಕಪ್ ಮಾಡಿದ್ದ. ಸದ್ಯ ಅವರೆಲ್ಲರೂ ಅಮೆರಿಕದ ಡಿಟೆನ್ಶನ್ ಸೆಂಟರ್​ನಲ್ಲಿದ್ದು ಸದ್ಯದಲ್ಲೇ ಭಾರತಕ್ಕೆ ಗಡೀಪಾರಾಗಲಿದ್ದಾರೆ.

ತಿಂಗಳಿಗೆ ಎರಡು ಬಾರಿ ಈ ರೀತಿ ಭಾರತೀಯರನ್ನು ಗಡಿದಾಟಿಸಲಾಗುತ್ತೆ. ಒಂದು ಗುಂಪು ಕೆನಡಾದಿಂದ ಅಮೆರಿಕದ ಗಡಿಗೆ ತಂದು ಬಿಟ್ರೆ, ಮತ್ತೊಂದು ಗುಂಪು ಗಡಿಯಿಂದ ಅಮೆರಿಕದೊಳಗೆ ಕರೆದೊಯ್ಯೋ ಕೆಲಸ ಮಾಡುತ್ತೆ ಅಂತ ಪೊಲೀಸರು ಅಂದಾಜಿಸಿದ್ದಾರೆ. ಇನ್ನು ಈ ಕುಟುಂಬ ಕೋಲ್ಡ್​ ವೆದರ್​​ಗೆ ಯಾವ ರೀತಿ ಬೇಕೋ ಆ ರೀತಿ ಒಳ್ಳೆಯ ಬಟ್ಟೆ ಧರಿಸಿತ್ತು. ಇವರನ್ನು ಗಡಿವರೆಗೆ ಬಿಟ್ಟಿದ್ದ ಕಿಡಿಗೇಡಿಗಳು ಟೋಪಿ ಇರುವ ವಿಂಟರ್ ಕೋಟ್​, ಕೈಗೆ ಗ್ಲೌವ್ಸ್​​, ಮುಖಕ್ಕೆ ಫುಲ್ ಕವರ್ ಆಗೋ ರೀತಿಯ ಸ್ಕಿ ಮಾಸ್ಕ್, ರಬ್ಬರ್ ಬೂಟುಗಳನ್ನು ನೀಡಿದ್ರು. ಆದ್ರೆ ಅಲ್ಲಿನ ವಾತಾವರಣಕ್ಕೆ ಅದು ಸಾಕಾಗುತ್ತಿರಲಿಲ್ಲ..

ಇನ್ನು ಗುಜರಾತ್​​​​ ಮೂಲದವರು ಅದ್ರಲ್ಲೂ ಪಟೇಲ್ ಸಮುದಾಯದವರು ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈವರೆಗಿನ ಲೆಕ್ಕಾಚಾರದ ಪ್ರಕಾರ ಒಂದೂವರೆ ಲಕ್ಷ ಮಂದಿ ಇದ್ದಾರೆ. ಆದ್ರೂ ಕೂಡ ಗುಜರಾತ್​ನಲ್ಲಿ ಹಲವಾರು ಉದ್ಯಮಗಳನ್ನು ಹೊಂದಿದ್ದ ಈ ಕುಟುಂಬ ಈ ರೀತಿ ಅಕ್ರಮವಾಗಿ ಹೋಗಿದ್ಯಾಕೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರಿದಿದೆ.

-masthmagaa.com

Contact Us for Advertisement

Leave a Reply