CAPF ನೇಮಕಾತಿಯ ಪ್ರಶ್ನೆ ಪತ್ರಿಕೆ ಇನ್ಮೇಲೆ 13 ಭಾಷೆಗಳಲ್ಲಿ ಪ್ರಿಂಟ್‌!

masthmagaa.com:

ದೇಶದಲ್ಲಿ ಮೊದಲ ಬಾರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಗಳ ಕಾನ್ಸ್ಟೇಬಲ್‌ (CAPF) ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಬಂದಿದೆ. ಯಾಕಂದ್ರೆ ಈ ಪ್ರಶ್ನೆ ಪತ್ರಿಕೆಗಳನ್ನ ಇದೀಗ 13 ಪ್ರಾದೇಶಿಕ ಭಾಷೆಗಳಲ್ಲಿ ಸೆಟ್‌ ಮಾಡಲಾಗಿದೆ. ಇಲ್ಲಿವರೆಗೆ ಕೇವಲ ಹಿಂದಿ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ಇರ್ತಿದ್ದ ಈ ಕ್ವಶ್ಚನ್‌ ಪೇಪರ್‌ಗಳು, ಇನ್ಮುಂದೆ ಅಸ್ಸಾಮೀಸ್‌, ಬಂಗಾಲಿ, ಗುಜರಾತಿ, ಮರಾಠಿ, ಮಲಯಾಳಂ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ, ಕೊಂಕಣಿ ಹಾಗೂ ಕನ್ನಡದಲ್ಲೂ ಇರಲಿವೆ. ಹಿಂದಿಯೇತರ ರಾಜ್ಯಗಳಿಂದ ಈ ಎಕ್ಸಾಮ್‌ ಬರೆಯೋ ಲಕ್ಷಾಂತರ ಆಕಾಂಕ್ಷಿಗಳಿಗೆ ಬೆನಿಫಿಟ್‌ ಆಗ್ಲಿ ಅನ್ನೋ ಕಾರಣಕ್ಕೆ ಈ ನಿರ್ಧಾರಕ್ಕೆ ಕೇಂದ್ರ ಮುಂದಾಗಿದೆ. ಹೀಗಂತ ಗೃಹ ಸಚಿವ ಅಮಿತ್‌ ಶಾ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply