ಮಾಜಿ ಶಾಸಕ ಸುರೇಶ್ ಬಾಬುಗೆ ಸಂಕಷ್ಟ ಶುರು..!

ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಕೆಪಿಸಿಸಿ ಕಾನೂನು ವಿಭಾಗದ ಸೂರ್ಯ ಮಕುಂದ ರಾಜ್ ಎಸಿಬಿಗೆ ದೂರು ನೀಡಿದ್ದಾರೆ. 2008ರಲ್ಲಿ ಸುರೇಶ್ ಬಾಬು 1.76 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಅದೇ 2018ರ ವೇಳೆಗೆ ಅವರ ಆಸ್ತಿ 18 ಕೋಟಿ ರೂಪಾಯಿ ತಲುಪಿದೆ. ಸುರೇಶ್ ಬಾಬು ಅವರಿಗೆ ಯಾವುದೇ ಪಿತ್ರಾರ್ಜಿತ ಆಸ್ತಿಯಾಗಲಿ, ಆದಾಯ ಮೂಲವಾಗಲಿ ಇಲ್ಲ. ಆದ್ರೂ ಕೂಡ ಸಂಬಂಧಿಕರ ಹೆಸರಲ್ಲೂ ಬೇನಾಮಿ ಆಸ್ತಿ ಮಾಡಿದ್ದಾರೆ ಅಂತ ಸೂರ್ಯ ಮುಕುಂದ ರಾಜ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Contact Us for Advertisement

Leave a Reply