ಜಗ್ಗೇಶ್ ಸರ್ಗೆ ಬೇಜಾರಾಗಿದ್ರೆ ಕ್ಷಮೆ ಕೇಳ್ತೀನಿ: ನಟ ದರ್ಶನ್
masthmagaa.com: ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಮೊದಲ ಬಾರಿ ಮಾತನಾಡಿದ್ದಾರೆ. ‘ಜಗ್ಗೇಶ್ ಸರ್ ಹಿರಿಯರು. ಅವರು ನಮ್ಮ ಮುಂದಿರಬೇಕು. ನನ್ನಿಂದ, ನನ್ನ ಅಭಿಮಾನಿಗಳಿಂದ ಜಗ್ಗೇಶ್ ಸರ್ಗೆ ಏನಾದ್ರೂ ಬೇಜಾರಾಗಿದ್ರೆ ಕ್ಷಮೆ ಕೇಳ್ತೀನಿ. ಈ ಗಲಾಟೆ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ನನ್ನ ಗಮನಕ್ಕೇನಾದ್ರೂ ಬಂದಿದ್ರೆ ಗಲಾಟೆ ಮಾಡಲು ಹೋಗಿದ್ದ ನಮ್ಮ ಹುಡುಗರಿಗೆ ಎರಡು ಬಿಟ್ಟು ಕಳಿಸ್ತಿದ್ದೆ. ನಮ್ಮ ಬಗ್ಗೆ ಹಿರಿಯರು ಮಾತಾಡಿದ್ರೆ ತಪ್ಪೇನಿದೆ. ನಾನು ಜಗ್ಗೇಶ್ ಸರ್ಗೆ ಕಾಲ್ ಮಾಡಿದ್ದೆ. ಆದ್ರೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾತನಾಡಲು ಆಗಿರಲಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕಿದ್ರೆ ಎಲ್ಲವೂ ಇತ್ಯರ್ಥವಾಗ್ತಿತ್ತು. ಜಗ್ಗೇಶ್ ಸರ್ ಮನೆಗೆ ಬಂದ್ರೆ ಆತಿಥ್ಯ ನೀಡ್ತೀನಿ. ರೇಸ್ಗೆ ನಿಂತ್ರೆ ನಾನು ಕೂಡ ರೇಸ್ಗೆ ನಿಲ್ತೀನಿ’ ಅಂತ ದರ್ಶನ್ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →