masthmagaa.com: ಬಾಲಿವುಡ್​ ನಟ ಆಸಿಫ್​ ಬಸ್ರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿರುವ ಧರ್ಮಶಾಲಾದ ಖಾಸಗಿ ಗೆಸ್ಟ್​ ಹೌಸ್​​ವೊಂದರಲ್ಲಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಅಂತ ಹೇಳಲಾಗ್ತಿದೆ. ಆದ್ರೆ ಯಾವುದನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಸುಶಾಂತ್ ಸಿಂಗ್ ರಜಪೂತ್​ ಅವರ ಮೃತದೇಹ ಕೂಡ ಇದೇ ವರ್ಷದ ಜೂನ್ 14ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಇದೊಂದು ಕೊಲೆ ಅಂತ ಹೇಳಿ, ಇದೀಗ ಸಿಬಿಐ ತನಿಖೆ ಕೂಡ ನಡೆಯುತ್ತಿದೆ. ಅಂದ್ಹಾಗೆ ಆಸಿಫ್ ಬಸ್ರಾ ಅವರು ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ಕೈ ಪೋ ಚೆ’ ಸಿನಿಮಾ ಸೇರಿದಂತೆ ‘ಒನ್ಸ್ ಅಪಾನ್​ ಎ ಟೈಮ್ ಇನ್ ಮುಂಬೈ’ ಮತ್ತು ಇತ್ತೀಚೆಗೆ ಬಿಡುಗಡೆಯಾದ ‘ಪಾತಾಳ್ ಲೋಕ್’, ‘ಹೊಸ್ಟೇಜಸ್ ಸೀಸನ್-2’ ಮುಂತಾದ ವೆಬ್ ಸಿರೀಸ್​ಗಳಲ್ಲಿ ನಟಿಸಿದ್ದರು. -masthmagaa.com Share on: WhatsAppContact Us for AdvertisementRead More →

masthmagaa.com: ಸ್ಯಾಂಡಲ್​ವುಡ್​, ಬಾಲಿವುಡ್​ನ ಹಲವು ನಟ, ನಟಿಯರಿಗೆ ಸುತ್ತಿಕೊಂಡಿರುವ ಡ್ರಗ್ಸ್ ನಂಟು ಇದೀಗ ಬಾಲಿವುಡ್​ ನಟ ಅರ್ಜುನ್ ರಾಂಪಾಲ್​ಗೂ ಸುತ್ತಿಕೊಳ್ಳುವ ಲಕ್ಷಣ ಕಾಣ್ತಿದೆ. ಇವತ್ತು ಎನ್​ಸಿಬಿ (Narcotics Control Bureau) ಅಧಿಕಾರಿಗಳು ಅರ್ಜುನ್ ರಾಂಪಾಲ್​ಗೆ ಸೇರಿದ ಮುಂಬೈನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಟನಿಗೆ ಸೇರಿದ ಎಲೆಕ್ಟ್ರಾನಿಕ್ ಡಿವೈಸ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ನವೆಂಬರ್ 11ರಂದು ವಿಚಾರಣೆಗೆ ಹಾಜರಾಗುವಂತೆ ಅರ್ಜುನ್ ರಾಂಪಾಲ್ ಮತ್ತು ಅವರ ಗರ್ಲ್​​ಫ್ರೆಂಡ್​ ಗೇಬ್ರಿಯೆಲ್ಲಾ ಡಿಮೆಟ್ರಿಯೇಡ್ಸ್​ಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಗೇಬ್ರಿಯೆಲ್ಲಾ ದಕ್ಷಿಣ ಆಫ್ರಿಕಾ ಮೂಲದವರು. ನಿನ್ನೆಯಷ್ಟೇ ಬಾಲಿವುಡ್​ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾ ಮನೆ ಮೇಲೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ 10 ಗ್ರಾಂನಷ್ಟು ಗಾಂಜಾ ಸಿಕ್ಕ ಹಿನ್ನೆಲೆ ಫಿರೋಜ್ ಅವರ ಪತ್ನಿಯನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಅರ್ಜುನ್ ರಾಂಪಾಲ್ ಅವರ ಮನೆ ಮೇಲೂ ದಾಳಿ ನಡೆಸಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ತೆಲುಗು ಸಿನಿಮಾ ನಟ ಚಿರಂಜೀವಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ‘ಆಚಾರ್ಯ’ ಸಿನಿಮಾದ ಶೂಟಿಂಗ್ ಸೆಟ್​ಗೆ ತೆರಳುವ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿದೆ ಅಂತ 65 ವರ್ಷ ವಯಸ್ಸಿನ ಚಿರಂಜೀವಿ ಹೇಳಿದ್ದಾರೆ. ಆದ್ರೆ ಅವರಿಗೆ ರೋಗದ ಲಕ್ಷಣಗಳು ಇಲ್ಲ. ಹೀಗಾಗಿ ಮನೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಜೊತೆಗೆ ಕಳೆದ 5 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಅಂತಾನೂ ತಿಳಿಸಿದ್ದಾರೆ. ಅಂದ್ಹಾಗೆ ಎರಡು ದಿನಗಳ ಹಿಂದಷ್ಟೇ ನಟರಾದ ಚಿರಂಜೀವಿ ಮತ್ತು ನಾಗಾರ್ಜುನ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರನ್ನ ಭೇಟಿಯಾಗಿದ್ದರು. ಈ ವೇಳೆ ಇಬ್ಬರು ನಟರು ಸೇರಿದಂತೆ ಕೆಸಿಆರ್ ಕೂಡ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬಾಲಿವುಡ್​ ಸಿನಿಮಾ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾ ಅವರ ಪತ್ನಿ ಶಬಾನಾ ಸಯೀದ್​ ಅವರನ್ನ ಎನ್​ಸಿಬಿ (Narcotics Control Bureau) ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುಂಬೈನ ಜುಹುನಲ್ಲಿದ್ದಅವರ ನಿವಾಸದ ಮೇಲೆ ಇವತ್ತು ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ 10 ಗ್ರಾಂನಷ್ಟು ಗಾಂಜಾ ಸಿಕ್ಕಿದೆ. ಈ ಹಿನ್ನೆಲೆ ಎನ್​ಡಿಪಿಎಸ್ (Narcotic Drugs and Psychotropic Substances)​ ಕಾಯ್ದೆ ಅಡಿಯಲ್ಲಿ ಶಬಾನಾ ಸಯೀದ್​ರನ್ನ ಬಂಧಿಸಲಾಗಿದೆ ಅಂತ ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ನಿರ್ಮಾಪಕ ಫಿರೋಜ್ ನಾಡಿಯದ್​ವಾಲಾಗೆ ಸಮನ್ಸ್​ ನೀಡಲಾಗಿದೆ. ಫಿರೋಜ್ ನಾಡಿಯದ್​ವಾಲಾ ಅವರು ಬಾಲಿವುಡ್​ನ ‘ಹೇರಾ ಫೇರಿ-3’, ‘ಫಿರ್ ಹೇರಾ ಫೇರಿ’, ‘ವೆಲ್​ಕಮ್​’, ‘ವೆಲ್​ಕಮ್ ಬ್ಯಾಕ್​’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಕಡೆ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್​ಗೆ ಮಂಗಳವಾರ (ನವೆಂಬರ್ 10) ವಿಚಾರಣೆಗೆ ಹಾಜರಾಗುವಂತೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಇತ್ತೀಚೆಗಷ್ಟೆ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರದ ಆರೋಪಗಳನ್ನು ಮಾಡಿದ್ದ ಬಾಲಿವುಡ್ ನಟಿ ಪಾಯಲ್​ ಘೋಷ್​ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ಪಕ್ಷಕ್ಕೆ ಸೇರಿದ್ದಾರೆ. ಇದು ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆಯವರ ಪಕ್ಷ ಅನ್ನೋದು ಗಮನಾರ್ಹ. ಮುಂಬೈನಲ್ಲಿ ಅಠಾವಳೆಯವರೇ ಪಾಯಲ್​ ಘೋಶ್​ಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಿದ್ರು. ಪಾಯಲ್ ಘೋಷ್ ಅವರನ್ನು ಪಕ್ಷದ ರಾಷ್ಟ್ರೀಯ ಮಹಿಳಾ ಘಟಕದ ಉಪಾಧ್ಯಕ್ಷೆಯಾಗಿ ನೇಮಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ಬಿಗ್​ ಬಾಸ್ ಸೀಸನ್-6​ ಖ್ಯಾತಿಯ ಆಡಂ ಪಾಷಾರನ್ನು ಎನ್​ಸಿಬಿ (Narcotics Control Bureau) ಅಧಿಕಾರಿಗಾಳು ಅರೆಸ್ಟ್ ಮಾಡಿದ್ದಾರೆ. ಈತ ಇದೇ ಪ್ರಕರಣದಲ್ಲಿ ಬಂಧಿತಳಾಗಿರುವ ಡ್ರಗ್ ಪೆಡ್ಲರ್​ ಅನಿಕಾ ಜೊತೆ ನಶಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದ ಅಂತ ಹೇಳಲಾಗ್ತಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಅಂತ ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಬಿಗ್ ಬಾಸ್ ಖ್ಯಾತಿಯ ಆಡಂ ಪಾಷಾರನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಈ ಹಿಂದೆ ಆರೋಪ ಕೇಳಿ ಬಂದಾಗ ಮಾತನಾಡಿದ್ದ ಆಡಂ ಪಾಷಾ, ‘1 ವರ್ಷದ ಹಿಂದೆ ಬೆಂಗಳೂರಿನ ಕಮ್ಮನಹಳ್ಳಿಯಲ್ಲಿರುವ ಡ್ಯಾನ್ಸ್ ಕ್ಲಬ್​ನಲ್ಲಿ ಅನಿಕಾಳನ್ನು ಭೇಟಿಯಾಗಿದ್ದೆ. ಆಗ ಆಕೆ ತನ್ನ ಹೆಸರು ನಿಕಿ ಅಂತ ಹೇಳಿಕೊಂಡಿದ್ದಳು. ಆದ್ರೆ ಆಕೆ ಡ್ರಗ್ ಪೆಡ್ಲರ್ ಅಂತ ಗೊತ್ತಿರಲಿಲ್ಲ. ನಾನು ಯಾವುದೇ ಕಾನೂನುಬಾಹಿರ ಕೆಲಸವನ್ನು ಮಾಡಿಲ್ಲ. ಹೀಗಾಗಿ ನನಗೆ ಯಾವುದೇ ಭಯ ಇಲ್ಲ’ ಅಂತ ಹೇಳಿದ್ದರು. -masthmagaa.com Share on: WhatsAppContact UsRead More →

masthmagaa.com: ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದ ಆರೋಪಿ ಆದಿತ್ಯ ಆಳ್ವನನ್ನು ಹುಡುಕಿಕೊಂಡು ಬೆಂಗಳೂರಿನ ಸಿಸಿಬಿ ಪೊಲೀಸರು ನಿನ್ನೆ ಮುಂಬೈಗೆ ಹೋಗಿದ್ದರು. ಮುಂಬೈನಲ್ಲಿರುವ ಬಾಲಿವುಡ್​ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ್ದರು. ಅಂದ್ಹಾಗೆ ವಿವೇಕ್ ಒಬೆರಾಯ್ ಅವರ ಪತ್ನಿ ಪ್ರಿಯಾಂಕಾ ಆಳ್ವ ಒಬೆರಾಯ್ ಅವರು ಆದಿತ್ಯ ಆಳ್ವ ಅವರ ಸಹೋದರಿ. ಈ ಸಂಬಂಧ ಸಿಸಿಬಿ ಪೊಲೀಸರು ಪ್ರಿಯಾಂಕಾ ಆಳ್ವಗೂ ನೋಟಿಸ್ ನೀಡಿದ್ದಾರೆ. ಇದೀಗ ಸಿಸಿಬಿ ಪೊಲೀಸರ ಕಾರ್ಯಾಚರಣೆ ಬಗ್ಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಅಂದ್ರೆ, ‘ಡ್ರಗ್​ ಪ್ರಕರಣದಲ್ಲಿ ವಿವೇಕ್ ಒಬೆರಾಯ್ ಮತ್ತು ಸಂದೀಪ್​ ಸಿಂಗ್​ನನ್ನು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಮುಂಬೈಗೆ ಬಂದಿದ್ದರು. ಆದ್ರೆ ಎನ್​ಸಿಬಿ ಈ ಬಗ್ಗೆ ತನಿಖೆ ನಡೆಸುತ್ತಿಲ್ಲ. ಅವರಿಗೆ ಮೇಲಿನಿಂದ ಒತ್ತಡ ಹೇರಲಾಗುತ್ತಿದೆ. ಡ್ರಗ್​ ಕೇಸ್​ನಲ್ಲಿ ವಿವೇಕ್ ಒಬೆರಾಯ್ ಲಿಂಕ್​ ಬಗ್ಗೆ ಎನ್​ಸಿಬಿ ತನಿಖೆ ನಡೆಸಬೇಕು ಅಂತ ನಾವು ಮನವಿ ಮಾಡುತ್ತೇವೆ. ಒಂದ್ವೇಳೆ ಅವರಿಗೆ ಆಗದಿದ್ದರೆ ಮುಂಬೈ ಪೊಲೀಸರೇ ತನಿಖೆ ನಡೆಸುತ್ತಾರೆ’ ಅಂತ ಅನಿಲ್Read More →

masthmagaa.com: ಸ್ಯಾಂಡಲ್​ವುಡ್​ ನಶಾ ಲೋಕಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಆರೋಪಿ ಆದಿತ್ಯ ಆಳ್ವಗಾಗಿ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆದಿತ್ಯ ಆಳ್ವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಅಡಗಿ ಕೂತಿರುವ ಮಾಹಿತಿ ಪಡೆದ ಪೊಲೀಸರು ನಿನ್ನೆಯಷ್ಟೇ ಬಾಲಿವುಡ್​  ನಟ ವಿವೇಕ್ ಒಬೆರಾಯ್ ಮನೆ ದಾಳಿ ನಡೆಸಿದ್ದರು. ಈ ವೇಳೆ ವಿವೇಕ್ ಒಬೆರಾಯ್ ಮನೆಯವರು ವಿರೋಧ ವ್ಯಕ್ತಪಡಿಸಿದ್ರು ಅನ್ನೋ ಬಗ್ಗೆಯೂ ವರದಿಯಾಗಿತ್ತು. ಇದೀಗ ವಿವೇಕ್ ಒಬೆರಾಯ್ ಅವರ ಪತ್ನಿ ಮತ್ತು ಆದಿತ್ಯಾ ಆಳ್ವನ ಸಹೋದರಿಯಾಗಿರುವ ಪ್ರಿಯಾಂಕಾ ಆಳ್ವ ಒಬೆರಾಯ್​ಗೆ ಬೆಂಗಳೂರಿನ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್​ನಲ್ಲಿ ಏನು ಹೇಳಲಾಗಿದೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ. ಇನ್ನು ನಿನ್ನೆಯ ರೇಡ್ ವೇಳೆ ಆದಿತ್ಯ ಆಳ್ವ ಒಬೆರಾಯ್ ಮನೆಯಲ್ಲಿದ್ದನಾ ಅಥವಾ ಇಲ್ವಾ ಅನ್ನೋದನ್ನ ಸಿಸಿಬಿ ಸ್ಪಷ್ಟಪಡಿಸಿಲ್ಲ. ದಾಳಿ ಬಗ್ಗೆ ನಿನ್ನೆ ಮಾತನಾಡಿದ್ದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ‘ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ಆತ ವಿವೇಕ್ ಒಬೆರಾಯ್Read More →

masthmagaa.com: ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣವೀಗ ಬಾಲಿವುಡ್​ ನಟ ವಿವೇಕ್ ಒಬೆರಾಯ್​ಗೂ ಸುತ್ತಿಕೊಳ್ಳುವ ಲಕ್ಷಣ ಕಾಣುತ್ತಿದೆ. ಯಾಕಂದ್ರೆ ಇವತ್ತು ಬೆಂಗಳೂರು ಪೊಲೀಸರು ಮುಂಬೈನ ವಿವೇಕ್ ಒಬೆರಾಯ್ ಮನೆ ಮೇಲೆ ರೇಡ್ ಮಾಡಿ, ಶೋಧಕಾರ್ಯ ನಡೆಸಿದ್ದಾರೆ. ಅಂದ್ಹಾಗೆ ಮಾಜಿ ಸಚಿವ ಜೀವರಾಜ್ ಆಳ್ವ ಅವರ ಪುತ್ರ ಆದಿತ್ಯ ಆಳ್ವ ವಿವೇಕ್ ಒಬೆರಾಯ್ ಅವರ ಸೋದರ ಸಂಬಂಧಿ. ಪ್ರಕರಣದಲ್ಲಿ ಆರೋಪಿಯಾಗಿರುವ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದಾರೆ. ಇದರ ನಡುವೆಯೇ ವಿವೇಕ್ ಒಬೆರಾಯ್ ಅವರ ಮನೆ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿರೋದು ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ‘ಆದಿತ್ಯ ಆಳ್ವ ತಲೆ ಮರೆಸಿಕೊಂಡಿದ್ದಾನೆ. ಆತ ವಿವೇಕ್ ಒಬೆರಾಯ್ ಮನೆಯಲ್ಲಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಹೀಗಾಗಿ ಚೆಕ್ ಮಾಡಲು ಕೋರ್ಟ್​ನಿಂದ ಸರ್ಚ್​ ವಾರಂಟ್ ಪಡೆದು ಸಿಸಿಬಿ ಪೊಲೀಸರು ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ ನಡೆಸಲು ಹೋಗಿದ್ದಾರೆ’ ಅಂತ ಹೇಳಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿರುವ ಆದಿತ್ಯ ಆಳ್ವ ಅವರ ಮನೆಯನ್ನು ಕೂಡ ಸಿಸಿಬಿ ಪೊಲೀಸರು ಜಾಲಾಡಿದ್ದರು. ಸ್ಯಾಂಡಲ್​ವುಡ್​Read More →

masthmagaa.com: ಟಿಆರ್​ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಪಬ್ಲಿಕ್​ ಟಿವಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಬಾಲಿವುಡ್​ ವಿರುದ್ಧ ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿ ಮಾಡುವಂತಹ ಟೀಕೆ-ಟಿಪ್ಪಣಿಗಳನ್ನ ಮಾಡದಂತೆ ಕೆಲ ಮಾಧ್ಯಮಗಳಿಗೆ ತಡೆ ನೀಡಬೇಕು ಅಂತ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ರಿಪಬ್ಲಿಕ್​ ಟಿವಿ, ಅರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ಟೈಮ್ಸ್ ನೌ, ಟೈಮ್ಸ್ ನೌನ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ನಾವಿಕಾ ಕುಮಾರ್ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಾಲಿವುಡ್​ನ 4 ಅಸೋಸಿಯೇಷನ್ ಮತ್ತು 34 ಚಿತ್ರ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆಮಿರ್ ಖಾನ್ ಪ್ರೊಡಕ್ಷನ್ಸ್, ಶಾರುಖ್ ಖಾನ್ ಅವರ ರೆಡ್​ ಚಿಲ್ಲೀಸ್, ಅಜಯ್​ ದೇವ್ಗನ್ ಫಿಲ್ಮ್ಸ್​, ಧರ್ಮಾ ಪ್ರೊಡಕ್ಷನ್ಸ್, ರೋಹಿತ್ ಶೆಟ್ಟಿ ಪ್ರೊಡಕ್ಷನ್ಸ್​ ಕೂಡ ಸೇರಿದೆ. ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಸಾವು ಮತ್ತು ಬಾಲಿವುಡ್​ ಡ್ರಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್​ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ ಹಲವು ಮಾಧ್ಯಮಗಳು ಬಾಲಿವುಡ್​ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದವು. ಮಹಾರಾಷ್ಟ್ರ ಸರ್ಕಾರ, ಮುಂಬೈRead More →