masthmagaa.com: ಗುರುವಾರ ಬೆಳಗ್ಗೆ 50,000 ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಸೆನ್ಸೆಕ್ಸ್​ ಸಂಜೆ ಹೊತ್ತಿಗೆ 167 ಅಂಕ ಕುಸಿತ ಕಂಡು 49,625ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ  54 ಅಂಕ ಕುಸಿದು 14,590 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 6 ಪೈಸೆ ಗಳಿಕೆ ಕಂಡು ₹72.99 (72 ರೂಪಾಯಿ 99 ಪೈಸೆ) ಆಗಿದೆ. ಇನ್ನು ಚಿನ್ನ ಮತ್ತು ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 397 ರೂಪಾಯಿ ಜಾಸ್ತಿಯಾಗಿ ₹49,659 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 1,172 ಜಾಸ್ತಿಯಾಗಿ ₹67,160 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ. -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದಲ್ಲಿ ಗುರುವಾರ 674 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಇಬ್ಬರು ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 9.34 ಲಕ್ಷ ದಾಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 12,187 ಆಗಿದೆ. ಗುರುವಾರ 815 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 9.14 ಲಕ್ಷ ದಾಟಿದೆ. ರಾಜ್ಯದಲ್ಲಿ ಇನ್ನೂ ಕೂಡ 7,554 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 171 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಇವತ್ತು ಮೃತಪಟ್ಟವರು: ಬೆಂಗಳೂರು ನಗರ – 1 ಧಾರವಾಡ – 1 -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಇದುವರೆಗೆ 6 ರಾಜ್ಯಗಳ ಪೌಲ್ಟ್ರಿ (ಆಹಾರಕ್ಕಾಗಿ ಸಾಕುವ) ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ ಅಂತ ಕೇಂದ್ರ ಪಶುಸಂಗೋಪನಾ ಸಚಿವಾಲಯ ತಿಳಿಸಿದೆ. ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ಛತ್ತೀಸ್​ಗಢ. ಉಳಿದಂತೆ 10 ರಾಜ್ಯದಲ್ಲಿ ಕಾಗೆ, ವಲಸೆ ಹಕ್ಕಿ ಮತ್ತು ಕಾಡು ಹಕ್ಕಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ – ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ್​, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ. ಈ ಎರಡೂ ಪಟ್ಟಿಯಲ್ಲಿ ಕರ್ನಾಟಕ ಇಲ್ಲ ಅನ್ನೋದು ಸಮಾಧಾನದ ವಿಚಾರ. ಎರಡೂ ಪಟ್ಟಿಯನ್ನ ನೋಡಿದ್ರೆ ಒಟ್ಟು 11 ರಾಜ್ಯಗಳಲ್ಲಿ ಹಕ್ಕಿಜ್ವರ ಕನ್ಫರ್ಮ್ ಆದಂತಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತದಲ್ಲಿ ಕೊರೋನಾ ಲಸಿಕೆಯ ಅಭಿಯಾನ ನಡೀತಿರುವಾಗ್ಲೇ ‘ಕೋವಿಶೀಲ್ಡ್’ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮಂಜ್ರಿ ಘಟಕದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ 5 ಮಂದಿ ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಅಗ್ನಿ ಅನಾಹುತಕ್ಕೆ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ನಿರ್ಮಾಣ ಹಂತದ ಈ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ನಡೀತಿತ್ತು. ಈ ವೇಳೆ ಬೆಂಕಿ ತಗುಲಿರಬಹುದು ಅಂತ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಇನ್ನು ಅಗ್ನಿ ಅವಘಡದಿಂದ ಕೋವಿಶೀಲ್ಡ್​ ಲಸಿಕೆ, ಅದರ ಸಂಗ್ರಹಾಗಾರ ಮತ್ತು ಉತ್ಪಾದನಾ ಘಟಕಕ್ಕೆ ಯಾವುದೇ ತೊಂದ್ರೆ ಆಗಿಲ್ಲ ಅನ್ನೋದು ಗೊತ್ತಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: 3 ಕೃಷಿ ಕಾನೂನುಗಳನ್ನ ವಾಪಸ್​ ಪಡೆಯೋವರಿಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಅಂತ ಹೇಳ್ತಿದ್ದ ರೈತರು ಮತ್ತು ಕಾನೂನುಗಳನ್ನ ವಾಪಸ್ ಪಡೆಯಲ್ಲ ಅಂತ ಹೇಳ್ತಿದ್ದ ಕೇಂದ್ರ ಸರ್ಕಾರ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಭೆಯಲ್ಲಿ ಬ್ರೇಕ್​ಥ್ರೂ ಸಿಕ್ಕಂತೆ ಕಾಣ್ತಿದೆ. ರೈತರು ಪಟ್ಟು ಬಿಡದ ಹಿನ್ನೆಲೆ ಒಂದು ಹೆಜ್ಜೆ ಹಿಂದೆ ಸರಿದಿರುವ ಕೇಂದ್ರ ಸರ್ಕಾರ 3 ಕೃಷಿ ಕಾನೂನುಗಳನ್ನ ಒಂದೂವರೆ ಅಥವಾ ಎರಡು ವರ್ಷಗಳ ಕಾಲ ಅಮಾನತಿನಲ್ಲಿ ಇಡುವ ಬಗ್ಗೆ ರೈತ ಸಂಘಟನೆಗಳ ಮುಂದೆ ಪ್ರಸ್ತಾವ ಇಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ರೈತರಿಗೆ ಗ್ಯಾರಂಟಿ ಕೊಡೋಕೆ ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಲು ಸರ್ಕಾರ ಮುಂದಾಗಿದೆ ಅಂತ ನಿನ್ನೆಯ ಸಭೆಯಲ್ಲಿ ಭಾಗವಹಿಸಿದ ರೈತ ಮುಖಂಡರೊಬ್ರು ಹೇಳಿದ್ದಾರೆ. ಈ ಒಂದೂವರೆ ಅಥವಾ ಎರಡು ವರ್ಷದ ಅವಧಿಯಲ್ಲಿ ಸಮಿತಿಯನ್ನ ರಚಿಸಿ, ಆ ಸಮಿತಿ ಏನು ಹೇಳುತ್ತೋ ಅದನ್ನ ಮಾಡೋಕೆ ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಈ ಪ್ರಪೋಸಲ್​ ಬಗ್ಗೆ ಎಲ್ಲಾ ರೈತ ಸಂಘಟನೆಗಳ ಜೊತೆ ಚರ್ಚಿಸಿ ತಮ್ಮ ತೀರ್ಮಾನ ತಿಳಿಸ್ತೀವಿ ಅಂತ ರೈತರು ಹೇಳಿದ್ದಾರೆ. ನಾಳೆRead More →

masthmagaa.com: ಒಟಿಟಿ ಫ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗ್ತಿರುವ ಒಂದೊಂದೇ ವೆಬ್​ ಸಿರೀಸ್ ವಿವಾದದ ಕೇಂದ್ರಬಿಂದುವಾಗ್ತಿದೆ. ಕಳೆದ ಕೆಲ ದಿನಗಳಿಂದ ‘ತಾಂಡವ್’ ವೆಬ್ ಸರಣಿ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದ್ರಲ್ಲಿ ಹಿಂದೂ ದೇವತೆಗಳನ್ನ ಅವಮಾನ ಮಾಡಲಾಗಿದೆ, ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತ ಹೇಳಲಾಗಿತ್ತು. ಈ ಸಂಬಂಧ ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಹಲವು ಎಫ್​ಐಆರ್ ದಾಖಲಾಗಿತ್ತು. ವಿವಾದದ ಬಳಿಕ ಕ್ಷಮೆ ಕೇಳಿದ್ದ ಚಿತ್ರತಂಡ, ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಇದೀಗ ಉತ್ತರಪ್ರದೇಶದಿಂದ ಮುಂಬೈಗೆ ಬಂದಿರುವ ಪೊಲೀಸರು ತಾಂಡವ್​ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್​ಗೆ ನೋಟಿಸ್​ ಕೊಟ್ಟಿದ್ಧಾರೆ. ಜನವರಿ 27ರಂದು ವಿಚಾರಣೆಗೆ ಬರುವಂತೆ ಅದರಲ್ಲಿ ಸೂಚಿಸಲಾಗಿದೆ. ಇನ್ನು ತಾಂಡವ್ ಬಳಿಕ ಇದೀಗ ಮಿರ್ಜಾಪುರ್ ವೆಬ್​ ಸಿರೀಸ್​ ಕೂಡ ವಿವಾದಕ್ಕೆ ಗ್ರಾಸವಾಗಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ 2018ರಲ್ಲಿ ರಿಲೀಸ್ ಆಗಿದ್ದ ಈ ವೆಬ್​​ ಸರಣಿಯಲ್ಲಿ ಉತ್ತರಪ್ರದೇಶದ ಮಿರ್ಜಾಪುರ್‌ ಹೆಸರಿಗೆ ಧಕ್ಕೆಯುಂಟು ಮಾಡಲಾಗಿದೆ. ಮಿರ್ಜಾಪುರವನ್ನ ಗೂಂಡಾ ಮತ್ತು ವ್ಯಭಿಚಾರಿಗಳ ನಗರವೆಂದು ಬಿಂಬಿಸಲಾಗಿದೆ ಅಂತ ಮಿರ್ಜಾಪುರದ ಪತ್ರಕರ್ತರೊಬ್ರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದRead More →

masthmagaa.com: ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್​ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರು ಇವತ್ತು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. ವೇಗಿ ಮೊಹಮ್ಮದ್ ಸಿರಾಜ್​ ಹೈದ್ರಾಬಾದ್​ ಏರ್​​ಪೋರ್ಟ್​ನಲ್ಲಿ ಲ್ಯಾಂಡ್​ ಆಗ್ತಿದ್ದಂತೇ ತಮ್ಮ ತಂದೆ ಸಮಾಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಸಿರಾಜ್​ ತಂದೆ ಇಹಲೋಕ ತ್ಯಜಿಸಿದ್ದರು. ಸಿರಾಜ್​ಗೆ ಭಾರತಕ್ಕೆ ಬರಲು ಅವಕಾಶ ಕೊಟ್ಟರೂ ಅವರು ಬಂದಿರಲಿಲ್ಲ. ಇವತ್ತು ಏರ್​ಪೊರ್ಟ್​ನಿಂದ ಸೀದಾ ತಂದೆ ಸಮಾಧಿ ಬಳಿ ಪುಷ್ಪ ನಮನ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಸಿರಾಜ್, ಸರಣಿಯಲ್ಲಿ ಭಾರತದ ಪರ ಅತಿಹೆಚ್ಚು 13 ವಿಕೆಟ್​ ಪಡೆದು ಮಿಂಚಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮಂಜ್ರಿ ಘಟಕದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಸಿರಂ ಇನ್​ಸ್ಟಿಟ್ಯೂಟ್​ನ ಟರ್ಮಿನಲ್ ಗೇಟ್ 1ರಲ್ಲಿರುವ SEZ3 ಬಿಲ್ಡಿಂಗ್​ನ 4 ಮತ್ತು 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟಕದಲ್ಲಿ ಲಸಿಕೆ ಉತ್ಪಾದಿಸುತ್ತಿರಲಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಲಸಿಕೆ ಉತ್ಪಾದನೆಗೆ ತಯಾರಿ ನಡೆಸಲಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡ್ತಿವೆ. ಒಂದು NDRF ತಂಡವನ್ನ ಕೂಡ ಅಲ್ಲಿಗೆ ಕಳಿಸಿಕೊಡಲಾಗಿದೆ. ಆದ್ರೆ ಕೋವಿಶೀಲ್ಡ್ ಲಸಿಕೆ, ಲಸಿಕೆ ಸಂಗ್ರಹಾಗಾರ ಮತ್ತು ಲಸಿಕೆ ಉತ್ಪಾದನಾ ಘಟಕಕ್ಕೆ ಯಾವುದೇ ತೊಂದ್ರೆ ಆಗಿಲ್ಲ ಅಂತ ಪೊಲೀಸರು ಹೇಳಿದ್ದಾರೆ.   -masthmagaa.com Share on: WhatsAppContact Us for AdvertisementRead More →

masthmagaa.com: ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ. ರಾಮ ರಾವ್ ತೆಲಂಗಾಣದ ಮುಂದಿನ ಸಿಎಂ ಆಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಈ ಬಗ್ಗೆ ಆಡಳಿತ ಪಕ್ಷದ ನಾಯಕರೇ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ತೆಲಂಗಾಣ ಪಶುಸಂಗೋಪನಾ ಸಚಿವ ಶ್ರೀನಿವಾಸ್ ಯಾದವ್ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಕೆ.ಟಿ. ರಾಮ ರಾವ್ ತೆಲಂಗಾಣ ಸಿಎಂ ಆದ್ರೆ ಏನೂ ತಪ್ಪಿಲ್ಲ ಎಂದಿದ್ದಾರೆ. ಟಿಆರ್​ಎಸ್​ ಶಾಸಕ ಶಕೀಲ್ ಅಹ್ಮದ್ ಮಾತನಾಡಿ, ಕೆಸಿಆರ್ ನೇತೃತ್ವದಲ್ಲಿ ತೆಲಂಗಾಣ ಪ್ರಗತಿ ಕಾಣ್ತಿದೆ. ಕೆಟಿಆರ್ ಸಿಎಂ ಆದ್ರೆ ಮತ್ತಷ್ಟು ಅಭಿವೃದ್ಧಿ ಹೊಂದುತ್ತೆ. ಯುವ ಪೀಳಿಗೆಗೆ ಹೆಚ್ಚಿನ ಅವಕಾಶ ಸಿಗುತ್ತೆ ಅಂತ ಹೇಳಿದ್ದಾರೆ. ಆಡಳಿತದ ಪಕ್ಷದ ನಾಯಕರಿಬ್ಬರು ಕೆಟಿಆರ್ ಸಿಎಂ ಆಗುವ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದು ಇದೇ ಮೊದಲು. ತೆಲಂಗಾಣ ಸರ್ಕಾರದಲ್ಲಿ ಸಚಿವರಾಗಿರುವ 44 ವರ್ಷದ ಕೆಟಿಆರ್ ಟಿಆರ್​ಎಸ್ ಪಕ್ಷದ ಕಾರ್ಯಾಧ್ಯಕ್ಷರು ಕೂಡ ಹೌದು. ಅಂದ್ಹಾಗೆ ಕೆ.ಟಿ. ರಾಮ ರಾವ್ ತೆಲಂಗಾಣ ಸಿಎಂ ಆಗಬೇಕೆನ್ನುವ ಗುಸುಗುಸು ಪಿಸುಪಿಸು 2018ರಿಂದಲೇ ಪ್ರಾರಂಭವಾಗಿತ್ತು. 2018ರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ಮುಗಿದ ಬಳಿಕ,Read More →

masthmagaa.com: ದೇಶದ ಪ್ರಧಾನಿ ಸೇರಿದಂತೆ ರಾಜಕಾರಣಿಗಳು ಯಾವಾಗ ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಇದೀಗ, ಪ್ರಧಾನಿ ಮೋದಿ ಎರಡನೇ ಹಂತದಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ತಾರೆ ಅಂತ ಮೂಲಗಳು ಹೇಳಿವೆ. ಪ್ರಧಾನಿ ಜೊತೆಗೆ ಹಲವು ರಾಜ್ಯದ ಮುಖ್ಯಮಂತ್ರಿಗಳು ಸಹ ಲಸಿಕೆ ಚುಚ್ಚಿಸಿಕೊಳ್ಳಲಿದ್ದಾರೆ. ಅಂದ್ಹಾಗೆ ಈಗ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್​ಲೈನ್​ ವರ್ಕರ್ಸ್​, ಕೊರೋನಾ ವಾರಿಯರ್ಸ್​ಗೆ ಲಸಿಕೆ ಹಾಕಲಾಗ್ತಿದೆ. ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಸೋ ಪ್ರಧಾನಿ ಮೋದಿ ಸೇರಿದಂತೆ ಕೆಲ ರಾಜ್ಯದ ಮುಖ್ಯಮಂತ್ರಿಗಳಿಗೆ 50 ವರ್ಷ ದಾಟಿರೋದ್ರಿಂದ ಅವರಿಗೆ ಈ ಎರಡನೇ ಹಂತದಲ್ಲಿ ಲಸಿಕೆ ಚುಚ್ಚಲಾಗುತ್ತೆ. ಆದ್ರೆ ಎಕ್ಸಾಟ್​ ಡೇಟ್​ ಅನೌನ್ಸ್ ಆಗಿಲ್ಲ. ಅಲ್ಲದೆ 50 ವರ್ಷ ಮೇಲ್ಪಟ್ಟ ಎಲ್ಲಾ ರಾಜಕಾರಣಿಗಳು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ತಾರಾ ಅನ್ನೋ ಪ್ರಶ್ನೆ ಕೂಡ ಇದೆ. ಅಂದ್ಹಾಗೆ ಕೊರೋನಾ ಲಸಿಕೆ ಅಭಿಯಾನ ಬಗ್ಗೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸಿಎಂಗಳ ಜೊತೆ ಪ್ರಧಾನಿ ಮೋದಿ ಇತ್ತೀಚೆಗೆ ವಿಡಿಯೋRead More →