ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಮಹಾಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇವತ್ತು ಭಾಷಣ ಮಾಡಲಿದ್ದಾರೆ. ಇನ್ನೊಂದು ವಿಶೇಷ ಅಂದ್ರೆ ಪ್ರಧಾನಿ ಮೋದಿ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಶ್ಮೀರ ವಿಚಾರ ಭಾರಿ ಸುದ್ದಿಯಲ್ಲಿರುವಾಗಲೇ ಎರಡೂ ದೇಶದ ಪ್ರಧಾನಿಗಳ ಭಾಷಣದತ್ತ ಎಲ್ಲರ ಗಮನ ನೆಟ್ಟಿದೆ. ಈಗಾಗಲೇ ಸಾಮಾನ್ಯ ಸಭೆಯ ಭಾಷಣದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸೋದಾಗಿ ಪಾಕಿಸ್ತಾನ ಹೇಳಿದೆ. ಆದ್ರೆ ಪ್ರಧಾನಿ ಮೋದಿ ಜಾಗತಿಕ ನಿರೀಕ್ಷೆಗಳು ಮತ್ತು ಭಾರತದ ಪಾತ್ರ ಕುರಿತು ಭಾಷಣ ಮಾಡಲಿದ್ದಾರೆ. ಜೊತೆಗೆ ಅಭಿವೃದ್ಧಿ, ಭದ್ರತೆ, ಶಾಂತಿ ಮತ್ತು ಇತರ ಉನ್ನತ ವಿಷಯಗಳ ಕುರಿತು ಭಾರತದ ನಿರೀಕ್ಷೆಗಳೇನು ಅಂತ ಸಾಮಾನ್ಯ ಸಭೆಯಲ್ಲಿ ತಿಳಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. 2014ರಲ್ಲಿ ಮೊದಲ ಬಾರಿಗೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದ ಮೋದಿ, ಈಗ 2ನೇ ಬಾರಿಗೆ ಮಾತನಾಡ್ತಿದ್ದಾರೆ. 7ನೇ ಗಣ್ಯರಾಗಿ ಮೋದಿ ಮಾತನಾಡಲಿದ್ದು, ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8.30ರಿಂದ 9 ಗಂಟೆವರೆಗೆ ಅವರು ಮಾತನಾಡಲಿದ್ದಾರೆ. ShareRead More →

ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡು ಪುನಃ ಸಂಪರ್ಕ ಸಾಧಿಸೋದು ಸಾಧ್ಯವಾಗಲೇ ಇಲ್ಲ. ಆದ್ರೆ ಚಂದ್ರಯಾನ-2 ಆರ್ಬಿಟರ್ ಚೆನ್ನಾಗಿ ಕೆಲಸ ಮಾಡುತ್ತಿದೆ ಅಂತ ಇಸ್ರೋ ಮುಖ್ಯಸ್ಥ ಶಿವನ್ ತಿಳಿಸಿದ್ದಾರೆ. ಗುಜರಾತ್‍ನಲ್ಲಿ ಮಾತನಾಡಿದ ಅವರು, ಆರ್ಬಿಟರ್ ಉತ್ತಮ ರೀತಿಯಲ್ಲಿ ಕೆಲಸ ಆರಂಭಿಸಿದೆ. ಅದು ನಿರ್ವಹಿಸಬೇಕಾದ ಎಲ್ಲಾ ಪ್ರಯೋಗಗಳನ್ನು ನಡೆಸುತ್ತಿದೆ. ಅದರಲ್ಲಿ ಅಳವಡಿಸಿದ್ದ ಎಲ್ಲಾ ಪೇಲೋಡ್‍ಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಈ ಮೂಲಕ ಚಂದ್ರಯಾನ-2 ಶೇ.98ರಷ್ಟು ಯಶಸ್ವಿಯಾಗಿದೆ ಅಂತ ಹೇಳಿದ್ರು. ಅಲ್ಲದೆ ನಮ್ಮ ಮುಂದಿನ ಗುರಿ ಬಾಹ್ಯಾಕಾಶಕ್ಕೆ ಯಾತ್ರಿಗಳನ್ನು ಕಳುಹಿಸುವ ಗಗನಯಾನ ಎಂದಿದ್ದಾರೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಯಾಕೆ ಕಳೆದುಕೊಳ್ತು ಅನ್ನೋ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಉನ್ನತ ಮಟ್ಟದ ತಂಡ ಈ ಬಗ್ಗೆ ಅಧ್ಯಯನ ನಡೆಸುತ್ತಿದೆ ಅಂತ ಹೇಳಿದ್ದಾರೆ. Share on: WhatsAppContact Us for AdvertisementRead More →

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರಕ್ಕೆ ಏರುವಾಗ ಎಲ್ಲಾ ರೀತಿಯ ಬೆಂಬಲ ಕೊಡುತ್ತೇವೆ. ಹೆದರೋ ಅಗತ್ಯ ಇಲ್ಲ ಅಂದಿದ್ದವರು ಯಡಿಯೂರಪ್ಪ. ಆದ್ರೆ ಈಗ ನಳಿನ್ ಕುಮಾರ್ ಕಟೀಲ್ ಅವರೇ ಯಡಿಯೂರಪ್ಪ ಜೊತೆ ಮುಸುಕಿನ ಗುದ್ದಾಟ ಶುರು ಮಾಡಿದ್ದಾರೆ. ಒಂದು ಟೈಮಲ್ಲಿ ಯಡಿಯೂರಪ್ಪ ವಿರುದ್ಧ ಮಾತನಾಡಿ ಅಧಿಕಾರ ಕಳೆದುಕೊಂಡಿದ್ದ ನಿರ್ಮಲ್ ಕುಮಾರ್ ಸುರಾನ ಮತ್ತು ಎಂ.ಬಿ ಭಾನುಪ್ರಕಾಶ್ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಲ್ಲಿ ತಂದು ಕೂರಿಸಿದ್ದಾರೆ. ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ನಿರ್ಮಲ್ ಕುಮಾರ್ ಸಿಡಿದೆದ್ರೆ, ಯಡಿಯೂರಪ್ಪ ಎಲ್ಲರನ್ನು ಸಮನಾಗಿ ಕಾಣುತ್ತಿಲ್ಲ ಎಂದು ಭಾನುಪ್ರಕಾಶ್ ಆರೋಪಿಸಿದ್ದರು. ಹೀಗಾಗಿ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ತೆಗೆಯಲಾಗಿತ್ತು. ನಂತರ ಅವರಿಗೆ ಉಪಾಧ್ಯಕ್ಷ ಸ್ಥಾನದ ಆಫರ್ ಕೊಟ್ರೂ ಕೂಡ ಅವರು ಒಪ್ಪಿರಲಿಲ್ಲ. ಈಗ ಪುನಃ ಅವರನ್ನೇ ತಂದು ಉಪಾಧ್ಯಕ್ಷರನ್ನಾಗಿ ಮಾಡುವಲ್ಲಿ ನಳಿನ್ ಯಶಸ್ವಿಯಾಗಿದ್ದಾರೆ. Share on: WhatsAppContact Us for AdvertisementRead More →

ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದ ಹನಿಟ್ರ್ಯಾಪ್ ಕೇಸ್ ಬಗೆದಷ್ಟೂ ಆಳಕ್ಕೆ ಬಾಯಿ ತೆರೆದುಕೊಳ್ತಿದೆ. ಎಸ್‍ಐಟಿ ತಂಡ ಗ್ಯಾಂಗ್ ಒಂದನ್ನು ಹಿಡಿಯೋದರ ಮೂಲಕ ಆರಂಭವಾದ ತನಿಖೆಗೆ ಮುಗಿಯೋ ಲಕ್ಷಣವೇ ಕಾಣುತ್ತಿಲ್ಲ. ಯಾಕಂದ್ರೆ ಬಂಧಿತರು ಒಂದೊಂದೇ ರಹಸ್ಯವನ್ನು ತೆರೆದಿಡುತ್ತಲೇ ಇದ್ದಾರೆ. ಮಧ್ಯಪ್ರದೇಶದ ಮಾಜಿ ಮಂತ್ರಿಗಳ ಹೆಸರೂ ಕೇಳಿಬಂದಿದೆ. ಅದಲ್ಲದೆ ಇದರಲ್ಲಿ 40ಕ್ಕೂ ಹೆಚ್ಚು ಕಾಲ್ ಗಲ್ರ್ಸ್ ಗಳಿದ್ದರು ಅನ್ನೋದು ಬಯಲಾಗಿದೆ. ಇನ್ನೂ ಶಾಕಿಂಗ್ ವಿಚಾರ ಅಂದ್ರೆ ಬಾಲಿವುಡ್ ನಟಿಯರ ಹೆಸರೂ ಕೂಡ ತಳುಕು ಹಾಕಿಕೊಂಡಿದೆ. ಇವರಲ್ಲಿ ಒಂದು ತಂಡ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಬುಟ್ಟಿಗೆ ಬೀಳಿಸಿದ್ರೆ, ಇನ್ನೊಂದು ತಂಡ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿ, ಸುಲಿಗೆ ಮಾಡುತ್ತಿತ್ತು. ಅಲ್ಲದೆ ಇವರ ಈ ದಂಧೆಯಲ್ಲಿ ಕಾಲೇಜು ಯುವತಿಯರನ್ನೂ ಬಳಸಿಕೊಳ್ಳಲಾಗಿದೆ. ಒಳ್ಳೆಯ ಕಾಲೇಜಿನಲ್ಲಿ ಸೀಟ್ ಕೊಡಿಸೋದಾಗಿ ಆಮಿಷವೊಡ್ಡಿ ವಿದ್ಯಾರ್ಥಿನಿಯರನ್ನು ಬಲೆಗೆ ಬೀಳಿಸುತ್ತಿದ್ದರು. ನಂತರ ಅವರನ್ನು ಬಳಸಿಕೊಂಡು ರಾಜಕಾರಣಿಗಳನ್ನು ಖೆಡ್ಡಾಗೆ ಬೀಳಿಸಿ, ಸುಲಿಗೆಗೆ ಇಳಿಯುತ್ತಿದ್ದರು ಅನ್ನೋದು ವಿಚಾರಣೆ ವೇಳೆ ಬಯಲಾಗಿದೆ. Share on: WhatsAppContact Us for AdvertisementRead More →

ಕರ್ನಾಟಕದಲ್ಲಿ ಉಪಚುನಾವಣೆಗೆ ತಡೆ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ನಿಗದಿಯಂತೆ ಅಕ್ಟೋಬರ್ 21ಕ್ಕೆ ಚುನಾವಣೆ ನಡೆಯಬೇಕಿತ್ತು. ಆದ್ರೆ ಅನರ್ಹತೆ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಚುನಾವಣೆಗೆ ತಡೆ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ಆದ್ರೆ ಸ್ಪೀಕರ್ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಶಾಸಕರ ಅನರ್ಹತೆ ಮುಂದುವರಿಯಲಿದೆ. ಜೊತೆಗೆ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿದೆ. Share on: WhatsAppContact Us for AdvertisementRead More →

KSRP ಎಡಿಜಿಪಿ ಅಲೋಕ್ ಕುಮಾರ್ ಅವರ ಮೇಲೆ ಸಿಬಿಐ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾರ ಮನೆ ಮೇಲಾದ್ರೂ ಸಿಬಿಐ ಮಾಡಿಕೊಳ್ಳಲಿ. ನನ್ನನ್ನು ಯಾಕೆ ಕೇಳುತ್ತೀರಿ..? ನನಗೂ ಅದಕ್ಕೂ ಏನು ಸಂಬಂಧ..? ಎಲ್ಲರ ಅವಧಿಯಲ್ಲೂ ಫೋನ್ ಟ್ಯಾಪ್ ಆಗುತ್ತೆ. ಎಲ್ಲರ ಅವಧಿಯಲ್ಲೂ ನಡೆದ ಫೋನ್ ಟ್ಯಾಪಿಂಗ್ ಬಗ್ಗೆ ತನಿಖೆ ನಡೆಯಲಿ ಅಂದ್ರು. ಅಲ್ಲದೆ ಈ ದೇಶದಲ್ಲಿ ಯಾರನ್ನು ಬೇಕಾದರೂ ವಿಚಾರಣೆಗೆ ಒಳಪಡಿಸಬಹುದು. ನನಗ್ಯಾಕೆ ಗಾಬರಿ..? ನನ್ನ ತನಿಖೆ ಬರಲಿ ಅಂದ್ರು. ಇಂದು ಬೆಳಗ್ಗೆ ಅಲೋಕ್ ಕುಮಾರ್ ಮನೆ ಮೇಲೆ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಫೋನ್ ಟ್ಯಾಪಿಂಗ್‍ಗೆ ಬಳಸಲಾದ ಪೆನ್‍ಡ್ರೈವ್ ಅನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕುಮಾರಸ್ವಾಮಿ ಸರಿಯಾಗಿ ಸಾಲಮನ್ನಾ ಮಾಡಿಲ್ಲ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಬಗ್ಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ನನ್ನನ್ನು ಟೀಕಿಸುವವರಿಗೆ ಯೋಗ್ಯತೆ ಇಲ್ಲ. ನಾನು 14 ತಿಂಗಳಲ್ಲಿ ಏನು ಮಾಡಿದ್ದೇನೆ ಎಂದು ಬುಕ್ ಮಾಡಿRead More →

15 ಕ್ಷೇತ್ರಗಳ ಉಪಚುನಾವಣೆ ವಿಚಾರವಾಗಿ ಇವತ್ತು ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೀತು. ಈ ವೇಳೆ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರಾದ ಕೆ.ಹೆಚ್ ಮುನಿಯಪ್ಪ ಮತ್ತು ಬಿ.ಕೆ ಹರಿಪ್ರಸಾದ್ ಕೆಂಡಕಾರಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಮತ್ತು ಕೆ.ಎಚ್ ಮುನಿಯಪ್ಪ ನಡುವೆ ಏಕವಚನದಲ್ಲಿಯೇ ಮಾತಿನ ಯುದ್ಧವೂ ನಡೆದಿದೆ. ಆದ್ರೆ ಇವೆಲ್ಲದರ ನಡುವೆಯೂ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಹಾಗಾದ್ರೆ ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ನೀಡಲಾಗಿದೆ ಅನ್ನೋದನ್ನ ನೋಡೋದಾದ್ರೆ, ಕೆ.ಆರ್.ಪೇಟೆ, ಕೆ.ಬಿ. ಚಂದ್ರಶೇಖರ್ ಹುಣಸೂರು, ಹೆಚ್.ಬಿ.ಮಂಜುನಾಥ್ ಹೊಸಕೋಟೆ, ಪದ್ಮಾವತಿ ಸುರೇಶ್ ಕೆ.ಆರ್. ಪುರಂ, ನಾರಾಯಣಸ್ವಾಮಿ ಕಾಗವಾಡ, ಪ್ರಕಾಶ್ ಹುಕ್ಕೇರಿ ಗೋಕಾಕ್, ಲಖನ್ ಜಾರಕಿಹೊಳಿ ರಾಣೆಬೆನ್ನೂರು, ಕೆ.ಬಿ.ಕೋಳಿವಾಡ ವಿಜಯನಗರ, ಸೂರ್ಯನಾರಾಯಣ ರೆಡ್ಡಿ ಹಿರೇಕೆರೂರು, ಬನ್ನಿಕೋಡ್ ಮಹಾಲಕ್ಷ್ಮೀ ಲೇಔಟ್, ಶಿವರಾಜು Share on: WhatsAppContact Us for AdvertisementRead More →

ಅಯೋಧ್ಯೆಯ ವಿವಾದದ ವಿಚಾರಣೆ ಅಕ್ಟೋಬರ್ 18ರೊಳಗೆ ಮುಗಿಯಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮತ್ತೊಮ್ಮೆ ಸೂಚಿಸಿದ್ದಾರೆ. ಅಲ್ಲದೆ ಅ.18ರೊಳಗೆ ವಾದ-ಪ್ರತಿವಾದವನ್ನು ಮುಗಿಸುವಂತೆ ಹಿಂದೂ-ಮುಸ್ಲಿಂ ಸಂಘಟನೆಗಳಿಗೂ ಸೂಚಿಸಲಾಗಿದೆ. ಅಯೋಧ್ಯೆ ವಿಚಾರವಾಗಿ ಸುಪ್ರೀಂಕೋರ್ಟ್‍ನಲ್ಲಿ ನಿರಂತರವಾಗಿ ವಿಚಾರಣೆ ನಡೆಯುತ್ತಿದ್ದು, ಇವತ್ತು 32ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಕೂಡ ನ್ಯಾಯಾಲಯಕ್ಕೆ ಹಾಜರಾದ ಹಿಂದೂ ಹಾಗೂ ಮುಸ್ಲಿಂ ಪರ ವಕೀಲರು ಎಂದಿನಂತೆ ತಮ್ಮ ವಾದ ಮಂಡಿಸಿದ್ರು. ಇದೇ ವೇಳೆ ಮತನಾಡಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಅಕ್ಟೋಬರ್ 18ರೊಳಗೆ ವಾದ-ಪ್ರತಿವಾದ ಮುಗಿಯಬೇಕು. ನಂತರ 4 ವಾರಗಳಲ್ಲಿ ತೀರ್ಪು ಬರೆಯಲಾಗುತ್ತೆ. ಅದು ಅಷ್ಟೊಂದು ಸುಲಭದ ಮಾತಲ್ಲ. 4 ವಾರಗಳಲ್ಲಿ ತೀರ್ಪು ಬರೆಯೋದೇ ಒಂದು ಚಮತ್ಕಾರವಿದ್ದಂತೆ ಎಂದಿದ್ದಾರೆ. Share on:Read More →

ಭಯೋತ್ಪಾದನೆಗೆ ಸಹಕರಿಸಲ್ಲ ಅಂತ ಹೇಳುತ್ತಲೇ ಪಾಕಿಸ್ತಾನ ಭಯೋತ್ಪಾದಕರನ್ನು ಸಾಕುವ ತನ್ನ ಬುದ್ಧಿಯನ್ನು ಮುಂದುವರಿಸಿದೆ. ಈ ಹಿಂದೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧ ಹೇರಿ, ಬ್ಯಾಂಕ್ ಖಾತೆ ಸೀಜ್ ಮಾಡಿತ್ತು. ಆದ್ರೀಗ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ತಾನ ಹಫೀಜ್ ಸಯೀದ್ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದು ಅವರನ್ನು ಸಾಕಬೇಕಾಗಿದೆ. ಹೀಗಾಗಿ ಅವರ ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣ ತೆಗೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದೆ. ಈ ಬೇಡಿಕೆಗೆ ಯಾವುದೇ ವಿರೋಧ ವ್ಯಕ್ತವಾಗದ ಕಾರಣ, ವಿಶ್ವಸಂಸ್ಥೆಯ ಭದ್ರತಾಮಂಡಳಿ, ತಿಂಗಳಿಗೆ ಒಂದೂವರೆ ಲಕ್ಷ ಅಂದ್ರೆ 1 ಸಾವಿರ ಡಾಲರ್ ಹಣ ಬಳಕೆಗೆ ಅವಕಾಶ ನೀಡಿದೆ. ಕಳೆದ ಆಗಸ್ಟ್ 15ರಂದು ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈ ಪತ್ರ ಬರೆದಿತ್ತು ಅಂತ ತಿಳಿದುಬಂದಿದೆ. Share on: WhatsAppContact Us for AdvertisementRead More →

ಚಿದಂಬರಂ, ಡಿಕೆಶಿ ಜೈಲು ಪಾಲಾಗಿ ಆಗಿದೆ. ಈಗ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್ ವಾದ್ರಾಗೆ ನೀಡಿರುವ ಜಾಮೀನನ್ನು ರದ್ದುಪಡಿಸುವಂತೆ ದೆಹಲಿ ಹೈಕೋರ್ಟ್‍ನಲ್ಲಿ ಇಡಿ ಮನವಿ ಮಾಡಿದೆ. ಇಂದು ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯದ ರಾಬರ್ಟ್ ವಾದ್ರಾ ಅವರನ್ನು ಅರೆಸ್ಟ್ ಮಾಡಲಾಗಿತ್ತಾ..? ಎಂದು ಪ್ರಶ್ನಿಸಿದೆ. ಈ ವೇಳೆ ಪ್ರತಿಕ್ರಿಯಿಸಿದ ಇಡಿ ಪರ ವಕೀಲರು, ನಾವು ವಿಚಾರಣೆ ನಡೆಸುತ್ತಿದ್ದಾಗಲೇ ಪಟಿಯಾಲ ಹೌಸ್ ಕೋರ್ಟ್ ವಾದ್ರಾಗೆ ಮಧ್ಯಂತರ ಜಾಮೀನು ನೀಡಿತ್ತು. ಆದ್ರೆ ಅದರ ನಂತರವೂ ರಾಬರ್ಟ್ ವಾದ್ರಾ ವಿಚಾರಣೆಗೆ ಹಾಜರಾಗುತ್ತಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈವರೆಗೆ 12 ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ. ಜಾಮೀನು ರದ್ದುಗೊಳಿಸಿ ಎಂದು ಇಡಿ ಮನವಿ ಮಾಡಿದೆ. ಆದ್ರೆ ವಾದ್ರಾ ಪರ ವಕೀಲರು, ವಿಚಾರಣೆಗೆ ಹಾಜರಾಗಲು ಇನ್ನಷ್ಟು ದಿನ ಸಮಯ ನೀಡುವಂತೆ ಕೇಳಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.Read More →