ಬಕಾಸುರನ ಹೊಟ್ಟೆರೆ ಅರೆಕಾಸಿನ ಮಜ್ಜಿಗೆ: ಸಿದ್ದು ಸಿಡಿಮಿಡಿ
ಕರ್ನಾಟಕದಲ್ಲಿರೋದು ಬೇಜವಾಬ್ದಾರಿ ಸರ್ಕಾರ ಅಂತ ಜನ ವಿರೋಧಿ ಸರ್ಕಾರ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನವಿರೋಧಿ ಸರ್ಕಾರವಿದೆ. ಅದನ್ನು ಕಿತ್ತು ಎಸೆಯೋದೊಂದೇ ನಮ್ಮ ಮುಂದಿರುವ ಆಯ್ಕೆ. ನಾವೇನು ಪ್ರಜಾಪ್ರಭುತ್ವಲ್ಲಿ ಇದ್ದೇವಾ..? ನೆರೆ ಪರಿಹಾರ ಬಗ್ಗೆ ಚರ್ಚಿಸಲು 3 ದಿನ ಸಾಲುವುದಿಲ್ಲ ಅಂತ ಹೇಳಿದ್ರು. ಅಲ್ಲದೆ ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಜನ ಎಲ್ಲವನ್ನೂ ಕಳೆದುಕೊಂಡಿದ್ದಾರೆ. 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ಕೇಂದ್ರ ಕೇವಲ 1200 ಕೋಟಿ ರೂಪಾಯಿ ಪರಿಹಾರ ನೀಡಿದೆ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ರಾಜ್ಯ ಸರ್ಕಾರ ಇದ್ದೂ ಸತ್ತು ಹೋಗಿದೆ ಅಂತ ಹೇಳಿದ್ದಾರೆ. Share on: WhatsAppContact Us for AdvertisementRead More →