ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆ ಅಕ್ಟೋಬರ್ 1ರಂದು ಆರಂಭವಾಗಲಿದೆ. ನ್ಯಾ.ಎನ್.ವಿ ರಮಣ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಆಗಸ್ಟ್‍ನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿತ್ತು. ಇದ್ರ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ಹಲವು ವಿಪಕ್ಷಗಳು ಈ ಕ್ರಮವನ್ನು ಖಂಡಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆಯನ್ನು ಈಗಾಗಲೇ ಆರಂಭಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ. ಉಳಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಅಕ್ಟೋಬರ್ 1ರಿಂದ ವಿಚಾರಣೆ ನಡೆಸೋದಾಗಿ ರಮಣ ನೇತೃತ್ವದ ಪೀಠ ಹೇಳಿದೆ. Share on: WhatsAppContact Us for AdvertisementRead More →

ಒಬ್ಬರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಿರ್ನಾಮ ಮಾಡ್ತಿದ್ದಾರೆ ಅಂತ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಒಬ್ಬರು ತನ್ನ ಸ್ವಾರ್ಥಕ್ಕಾಗಿ ಪಕ್ಷವನ್ನೇ ನಿರ್ನಾಮ ಮಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ. ಸಿದ್ದರಾಮಯ್ಯ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಈಗಲೇ ಅವನ್ನು ಪಕ್ಷದಿಂದ ಕಿತ್ತು ಎಸೆಯದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ ಅಂತ ಕೆಂಡಕಾರಿದ್ದಾರೆ. ಅಲ್ಲದೆ ಹೈಕಮಾಂಡ್ ಈಗಲೇ ಈ ಬಗ್ಗೆ ಗಮನ ಹರಿಸಬೇಕು. ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ನಮ್ಮನ್ನು ಅವರ ಶಿಷ್ಯ ಎಂದು ಹೇಳುತ್ತಿದ್ದರು. ಆದ್ರೆ ಒಮ್ಮೆಯೂ ನಮ್ಮನ್ನು ಕರೆಸಿ ಮಾತನಾಡಲಿಲ್ಲ. ಹೈಕಮಾಂಡ್ ಕೂಡ ನಮಗೆ ತಿಳಿ ಹೇಳಲಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 80 ಸ್ಥಾನಗಳು ಬಂದಿವೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಬಾರಿ 30 ಕ್ಷೇತ್ರಗಳಲ್ಲೂ ಗೆಲುವು ಕಷ್ಟ ಅಂತ ಹೇಳಿದ್ದಾರೆ. Share on: WhatsAppContact Us for AdvertisementRead More →

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಈ ನಡುವೆ ಬಿಜೆಪಿ ಮತ್ತು ಶಿವಸೇನೆ ನಡುವೆ ಸೀಟು ಹಂಚಿಕೆ ವಿಚಾರ ಅಂತಿಮವಾಗಿದೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ಸೀಟು ಹಂಚಿಕೆ ಬಗ್ಗೆ ಅಮಿತ್ ಶಾ ಅವರೊಂದಿಗೆ ಅಂತಿಮ ಹಂತದ ಮಾತುಕತೆ ಮುಗಿದಿದ್ದು, ಇವತ್ತೇ ಘೋಷಿಸಲಾಗುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ನಾನು ಈ ಹಿಂದೆ ತಂದೆ ಬಾಲಾಸಾಹೇಬ್ ಅವರಿಗೆ ಒಂದು ದಿನ ನಮ್ಮದೇ ಪಕ್ಷದವರು ಸಿಎಂ ಆಗುತ್ತಾರೆ ಎಂದು ಮಾತುಕೊಟ್ಟಿದ್ದೆ. ಸಿಎಂ ದೇವೇಂದ್ರ ಫಡ್ನಾವಿಸ್ ಜೊತೆ ಸೀಟು ಹಂಚಿಕೆ ವಿಚಾರ ಮಾತನಾಡುವಾಗ ಪಿತೃಪಕ್ಷದ ವಿಚಾರ ಬಂತು. ಆಗ ನನಗೆ ಪಕ್ಷವೇ ಪಿತೃ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತರು ಪಕ್ಷವಿದ್ದಂತೆ ಎಂದು ನಾನು ಹೇಳಿದೆ ಅಂದ್ರು. Share on: WhatsAppContact Us for AdvertisementRead More →

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದ ಇಮ್ರಾನ್ ಖಾನ್ ವಾಪಸ್ಸಾಗುವಾಗ ಅರ್ಧಕ್ಕೆ ಮತ್ತೆ ಅಮೆರಿಕಾಗೆ ತೆರಳಿದ್ದಾರೆ. ನ್ಯೂಯಾರ್ಕ್‍ನಿಂದ ಹೊರಟ ವಿಮಾನದಲ್ಲಿ ಕೆನಡಾದ ಬಳಿ ಬರೋವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಹೀಗಾಗಿ ಕೆನಡಾದ ಟೊರೆಂಟೋದಲ್ಲಿ ವಿಮಾನವನ್ನು ತಿರುಗಿಸಿ ವಾಪಸ್ ನ್ಯೂಯಾರ್ಕ್‍ಗೆ ತೆರಳಲಾಯ್ತು. ಆದ್ರೆ ಯಾವ ರೀತಿಯ ತಾಂತ್ರಿಕ ಸಮಸ್ಯೆ ಅನ್ನೋದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ವಿಮಾನ ಸರಿಯಾಗೋವರೆಗೆ ಇಮ್ರಾನ್ ಖಾನ್ ನ್ಯೂಯಾರ್ಕ್‍ನಲ್ಲೇ ಉಳಿಯಲಿದ್ದಾರೆ. ಆದ್ರೆ ವಿಮಾನ ಸಮಸ್ಯೆ ನಿವಾರಣೆಗೆ ಎಷ್ಟು ಸಮಯ ಬೇಕು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಅಮೆರಿಕಾಗೆ ತೆರಳುವಾಗ ಇಮ್ರಾನ್ ಖಾನ್ ತನ್ನ ಫ್ಲೈಟ್‍ನಲ್ಲಿ ತೆರಳಿರಲಿಲ್ಲ. ಸೌದಿಯಲ್ಲಿದ್ದ ಅವರು ಕಮರ್ಷಿಯಲ್ ಫ್ಲೈಟ್‍ನಲ್ಲಿ ಅಮೆರಿಕಾಗೆ ತೆರಳಬೇಕಿತ್ತು. ಆದ್ರೆ ಸೌದಿ ರಾಜಕುಮಾರ ತನ್ನ ವಿಮಾನ ನೀಡಿದ್ದರಿಂದ ಅದರಲ್ಲಿ ಹೋದ್ರು ಅಂತ ತಿಳಿದುಬಂದಿದೆ. Share on: WhatsAppContact Us for AdvertisementRead More →

ಸಂಘಟನೆ ಮೀರಿ ಬೆಳೆಯಲು ಹೋದ್ರೆ ನಾಶ ಆಗೋದು ಗ್ಯಾರಂಟಿ ಅಂತ ಪರೋಕ್ಷವಾಗಿ ಯಡಿಯೂರಪ್ಪಗೆ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ತಾವೇ ಸಿಎಂ, ಏನು ಬೇಕಾದ್ರೂ ಮಾಡಬಹುದು ಎಂಬ ಸವಾಧಿಕಾರಿ ಧೋರಣೆಯಿಂದ ಕಾಂಗ್ರೆಸ್ಸೇ ನಿರ್ನಾಮ ಆಗೋಯ್ತು. ಕೇವಲ ಸಿದ್ದರಾಮಯ್ಯ ಮಾತ್ರವಲ್ಲ. ಈ ಮಾತು ಜೆಡಿಎಸ್‍ನ ಕುಮಾರಸ್ವಾಮಿ ಆಗಿರಬಹುದು, ಬಿಜೆಪಿಯ ಯಡಿಯೂರಪ್ಪ ಆಗಿರಬಹುದು. ಎಲ್ಲರಿಗೂ ಈ ಮಾತು ಅನ್ವಯಿಸುತ್ತೆ. ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಿ ಬೇರೆ ಪಕ್ಷ ಮಾಡಿ 3-4 ಸ್ಥಾನಗಳನ್ನು ಗೆದ್ದರು. ಹೀಗಾಗಿ ಒಂದು ಪಕ್ಷದಿಂದ ಗೆದ್ದು ಬಂದ ಬಳಿಕ, ಅದನ್ನು ಮೀರಿ ಹೋಗಲು ಯತ್ನಿಸಬಾರದು. ನಾನೇ ಗೆಲ್ಲಿಸಿದ್ದು, ನಾನೇ ಎಲ್ಲರಿಗೂ ನಾಯಕ ಅಂತ ಭಾವಿಸಬಾರದು ಅಂತ ಯಡಿಯೂರಪ್ಪಗೆ ಇನ್ ಡೈರೆಕ್ಟ್ ಆಗಿ ಡಿಚ್ಚಿ ಚಿವುಟಿದ್ದಾರೆ. ಮುನಿಯಪ್ಪ ಅವರ ಸೋಲಿಗೆ ಕಾರಣವಾದ ರಮೇಶ್ ಕುಮಾರ್ ವಿರುದ್ಧ ದೂರು ನೀಡಿದರೂ ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಅವರನ್ನು ಜೊತೆಯಲ್ಲಿಟ್ಟುಕೊಂಡು ಸಭೆ ನಡೆಸಿದ್ರು. ಪಕ್ಷದ್ರೋಹಿಗಳನ್ನು ದೂರವಿಟ್ಟು, ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಿದಾಗಲೇ ಉದ್ಧಾರ ಸಾಧ್ಯ ಎಂದಿದ್ದಾರೆ. Share on: WhatsAppContact Us for AdvertisementRead More →

ನಿನ್ನೆಯಷ್ಟೇ ಅಣ್ವಸ್ತ್ರ ದಾಳಿ ಎಚ್ಚರಿಕೆ ನೀಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವ್ಯಂಗ್ಯವಾಡಿದ್ದಾರೆ. ವಡಗಾಂವ್ ಹಡಗುಕಟ್ಟೆಯಲ್ಲಿ ಸ್ಕಾರ್ಪೀನ್ ಸರಣಿಯ 2ನೇ ಸಮರ ಜಲಾಂತರ್ಗಾಮಿ ಐಎನ್‍ಎಸ್ ಖಾಂಡೇರಿಯನ್ನು ನೌಕಾಪಡೆಯ ಸೇವೆಗೆ ನಿಯೋಜಿಸಿ ರಾಜನಾಥ್ ಸಿಂಗ್ ಮಾತನಾಡಿದ್ರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ವದ ಎಲ್ಲಾ ರಾಷ್ಟ್ರಗಳ ಬಾಗಿಲು ತಟ್ಟುವ ಮೂಲಕ ವ್ಯಂಗ್ಯಚಿತ್ರಗಳಿಗೆ ವಿಷಯ ಸೃಷ್ಟಿಸುತ್ತಿದ್ದಾರೆ. ಮತ್ತೆ ಮುಂಬೈ ಮಾದರಿಯಲ್ಲಿ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಹೊಂಚು ಹಾಕ್ತಿದ್ದಾರೆ. ಆದ್ರೆ ಅವರಿಗೆ ಅದು ಸಾಧ್ಯವಿಲ್ಲ. ನಮ್ಮ ನೌಕಾಪಡೆ ಸ್ಟ್ರಾಂಗ್ ಇದೆ. ಅದನ್ನ ಪಾಕಿಸ್ತಾನ ಅರ್ಥ ಮಾಡಿಕೊಳ್ಳಲಿ ಅಂದ್ರು. Inside ‘INS Khanderi’ The commissioning of Khanderi marks yet another significant and historic step in showcasing the will and intent of the Government. pic.twitter.com/AbzAr550zz — Rajnath Singh (@rajnathsingh) September 28, 2019 Share on:Read More →

ಅಮೆರಿಕಾದಲ್ಲಿ ಭಾರತೀಯ ಮೂಲದ ಸಿಖ್ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಂಡಿಟ್ಟು ಹತ್ಯೆಗೈಯ್ಯಲಾಗಿದೆ. ಅಮೆರಿಕಾದ ಸಿಖ್ ಪೊಲೀಸ್ ಅಧಿಕಾರಿಯಾಗಿದ್ದ ಇವರನ್ನು ಕಾರಿನಲ್ಲಿ ಬಂದ ದುಷ್ಟರು ಹತ್ಯೆಗೈದಿದ್ದಾರೆ. ಟೆಕ್ಸಾಸ್‍ನ ಹ್ಯಾರಿಸ್ ಪ್ರಾಂತ್ಯದ ಪೊಲೀಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್ ಧಲಿವಲ್ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ನಿನ್ನೆ ಟ್ರಾಫಿಕ್ ಸಿಗ್ನಲ್‍ನಲ್ಲಿ ಕೆಲಸ ಮಾಡುತ್ತಿದ್ದ ಇವರು ಕಾರೊಂದನ್ನು ತಡೆದಿದ್ದಾರೆ. ಆದ್ರೆ ಕಾರೊಳಗೆ ಓರ್ವ ವ್ಯಕ್ತಿ ಮತ್ತು ಮಹಿಳೆ ಇದ್ದರು. ಅವರಲ್ಲಿ ಒಬ್ಬರು ಕಾರಿನಿಂದ ಇಳಿದು ಹಲವಾರು ಬಾರಿ ಸಂದೀಪ್ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 47 ವರ್ಷದ ರಾಬರ್ಟ್ ಸೋಲಿಸ್ ಎಂದು ಗುರುತಿಸಲಾಗಿದ್ದು, ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಪೊಲೀಸ್ ಅಧಿಕಾರಿ ಸಂದೀಪ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. Share on: WhatsAppContact Us for AdvertisementRead More →

ಸ್ವಪಕ್ಷೀಯರ ವಿರೋಧದ ನಡುವೆಯೂ ಬಿಜೆಪಿ ಬಳ್ಳಾರಿ ವಿಭಜಿಸಿ ಹೊಸ ಜಿಲ್ಲೆ ಹುಟ್ಟುಹಾಕಲು ಮುಂದಾಗಿದೆ. ಈಗಾಗಲೇ ಹೊಸ ಜಿಲ್ಲೆ ರಚನೆ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿದೆ. ವಿಜಯನಗರ ಜಿಲ್ಲೆ ರಚನೆ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ವಿಸ್ತಾರವಾದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಅಕ್ಟೋಬರ್ 3ರಂದೇ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲೇ ಪ್ರಸ್ತಾವನೆ ಮಂಡನೆಯಾಗುವ ಸಾಧ್ಯತೆ ಇದೆ. ಆದ್ರೆ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. Share on: WhatsAppContact Us for AdvertisementRead More →

ದಿವಂಗತ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಅವರ ಪುತ್ರಿ ಬಾನ್ಸುರಿ ಈಡೇರಿಸಿದ್ದಾರೆ. ಪಾಕ್‍ನಲ್ಲಿ ಬಂಧಿತನಾಗಿರುವ ಕುಲಭೂಷಣ್ ಜಾಧವ್ ಕೇಸ್‍ನಲ್ಲಿ ವಾದಿಸಿದ್ದಕ್ಕಾಗಿ 1 ರೂಪಾಯಿ ಮಾತ್ರ ಸಂಭಾವನೆ ಪಡೆಯೋದಾಗಿ ಹರೀಶ್ ಸಾಳ್ವೆ ಹೇಳಿದ್ದರು. ಹೀಗಾಗಿ ಸುಷ್ಮಾ ಸ್ವರಾಜ್ ಕೊನೆಯುಸಿರೆಳೆಯುವ 1 ಗಂಟೆ ಮುನ್ನ ಕರೆಮಾಡಿ 1 ರೂಪಾಯಿ ಸಂಭಾವನೆ ಪಡೆಯುವಂತೆ ಮನವಿ ಮಾಡಿದ್ದರು ಎಂದು ಹರೀಶ್ ಸಾಳ್ವೆ ತಿಳಿಸಿದ್ದರು. ಇದೀಗ ಸುಷ್ಮಾ ಅವರ ಪುತ್ರಿ ಬಾನ್ಸುರಿ, ಹರೀಶ್ ಸಾಳ್ವೆಗೆ 1 ರೂಪಾಯಿ ಸಂಭಾವನೆ ನೀಡಿ ತಾಯಿಯ ಆಸೆ ಈಡೇರಿಸಿದ್ದಾರೆ. ಈ ಬಗ್ಗೆ ಸುಷ್ಮಾ ಸ್ವರಾಜ್ ಪತಿ, ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. @sushmaswaraj Bansuri has fulfilled your last wish. She called on Mr.Harish Salve and presented the One Rupee coin that you left as fees for Kulbhushan Jadhav's case. pic.twitter.com/eyBtyWCSUD — Governor Swaraj (@governorswaraj) September 27, 2019 ShareRead More →

ಬಿಜೆಪಿಯಲ್ಲಿ ಇಬ್ಬರು ಸೇರಿಕೊಂಡು ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಚು ಮಾಡುತ್ತಿದ್ದಾರೆ ಅಂತ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಮತ್ತು ಬಿ.ಎಲ್.ಸಂತೋಷ್ ಸೇರಿಕೊಂಡು ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಮುಗಿಸಲು ನೋಡ್ತಿದ್ದಾರೆ. ನಳಿನ ಕುಮಾರ್ ಕಟೀಲ್‍ಗೆ ಉತ್ತರ ಕರ್ನಾಟಕ ಜನ ಪರಿಚಯವೇ ಇಲ್ಲ. ಉತ್ತರದ ಜನ ಯಡಿಯೂರಪ್ಪ ಮುಖ ನೋಡಿಕೊಂಡು ಬಿಜೆಪಿಗೆ ಓಟ್ ಹಾಕಿದ್ದಾರೆ. ಅಲ್ಲದೆ ಬಹುಮತವಿಲ್ಲದ ಸರ್ಕಾರವನ್ನು ಅಧಿಕಾರಕ್ಕೆ ತರಲು ಕಷ್ಟಪಟ್ಟಿದ್ದಾರೆ. ಆದ್ರೆ ಜನರ ಆಶೀರ್ವಾದ ಪಡೆಯದ ಕೆಲವರು ಬಿಜೆಪಿಯಲ್ಲಿ ಕೂತಿದ್ದಾರೆ. ಇವರ ನಡುವೆ ಸಿಲುಕಿ ಬಿ.ಎಸ್.ಯಡಿಯೂರಪ್ಪ ಅಸಹಾಯಕರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ. Share on: WhatsAppContact Us for AdvertisementRead More →