ಸಿಎಂ ಆದಾಗಿನಿಂದಲೂ ಅಗ್ನಿ ಪರೀಕ್ಷೆ ಎದುರಾಗಿದೆ ಅಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಚಿತ್ರದುರ್ಗದ ಸಿರಿಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನೆರೆ ಇದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಬರ ಇದೆ. ಪ್ರವಾಹದಿಂದಾಗಿ ಲಕ್ಷಾಂತರ ಮನೆಗಳು ನೆಲಸಮವಾಗಿವೆ. ನೆರೆಪೀಡಿತರಿಗೆ ನೆರವು ನೀಡಿ ನೆಮ್ಮದಿ ಜೀವನಕ್ಕೆ ವ್ಯವಸ್ಥೆ ಮಾಡಿಕೊಡಬೇಕಿದೆ. ಕೇಂದ್ರದಿಂದ ನಾಲ್ಕೈದು ದಿನಗಳಲ್ಲಿ ಪರಿಹಾರ ಬರೋ ವಿಶ್ವಾಸ ಇದೆ. ಅಲ್ಲದೆ ರಾಜ್ಯ ಸರ್ಕಾರದ ಕೆಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಸಂತ್ರಸ್ತರಿಗೆ ಪರಿಹಾರ ನೀಡಲಾಗುತ್ತೆ ಅಂದ್ರು. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಘೋಷಿಸಲಾಗಿದ್ದು, ಈಗಾಗಲೇ ಫೌಂಡೇಶನ್‍ಗೆ 1 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಮನೆ ಹಾನಿಯಾದವರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತೆ. ಅದರಲ್ಲಿ ಈಗಾಗಲೇ 25 ಸಾವಿರ ಬಿಡುಗಡೆಯಾಗಿದೆ ಅಂದ್ರು. ಇನ್ನು ಹಿಂದಿನ ಸರ್ಕಾರ ಮಾಡಿದ್ದ ಸಾಲಮನ್ನಾ ಯೋಜನೆಯನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗೋದಾಗಿ ಹೇಳಿದ್ದಾರೆ. Share on: WhatsAppContact Us for AdvertisementRead More →

ಮುಸ್ಲಿಮರು ಬಿಜೆಪಿಗೆ ಓಟ್ ಹಾಕೋದೇ ಬೇಕಿಲ್ಲ ಎಂದಿದ್ದ ಸಚಿವ ಕೆ.ಎಸ್.ಈಶ್ವರಪ್ಪಗೆ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಬಿಜೆಪಿಗೆ ಮುಸ್ಲಿಮರ ಓಟು ಬೇಡ ಅಂತ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಈ ಬಾರಿ ಮುಸ್ಲಿಮರು ಬಿಜೆಪಿಗೆ ಓಟ್ ಹಾಕಬೇಡಿ. ಈ ಮೂಲಕ ಬಿಜೆಪಿಗೆ ಪಾಠ ಕಲಿಸಿ ಅಂತ ಹೇಳಿದ್ದಾರೆ. ಈಶ್ವರಪ್ಪ ಓರ್ವ ರಾಜಕೀಯ ನಾಯಕನಾಗಿ ಹೀಗೆ ಮಾತನಾಡುತ್ತಾರೆ. ಮುಸ್ಲಿಮರು ಈ ದೇಶದವರಲ್ವಾ..? ಅವರೇನು ಹೊರಗಿನವರಾ..? ಅಂತ ಪ್ರಶ್ನಿಸಿದ್ರು. ಶ್ರೀರಾಮಸೇನೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಈಶ್ವರಪ್ಪ. ನಾನು ಈವರೆಗೆ ನಮ್ಮ ಕ್ಷೇತ್ರದಲ್ಲಿ ಮುಸ್ಲಿಮರ ಓಟು ಕೇಳಲು ಕೂಡ ಹೋಗಿಲ್ಲ. ದೇಶಭಕ್ತಿ ಇರುವ ಮುಸ್ಲಿಮರು ಬಿಜೆಪಿಗೆ ಓಟ್ ಹಾಕ್ತಾರೆ. ಪಾಕಿಸ್ತಾನ ಬೆಂಬಲಿಸುವ ಮುಸ್ಲಿಮರು ಬಿಜೆಪಿಗೆ ಓಟ್ ಹಾಕಲ್ಲ ಎಂದು ಹೇಳಿದ್ದರು. Share on: WhatsAppContact Us for AdvertisementRead More →

ಅನರ್ಹ ಶಾಸಕರಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಆರ್.ಶಂಕರ್‍ಗೆ ಬಿಜೆಪಿ ಟಿಕೆಟ್ ಕೊಡಬೇಡಿ. ಒಂದ್ವೇಳೆ ಕೊಟ್ಟರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಅಂತ ಬಸವರಾಜ್ ಕೇಲಗಾರ ಹೇಳಿದ್ದಾರೆ. ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಇಂಥಾ ಟೈಮಲ್ಲಿ ಶಂಕರ್‍ಗೆ ಟಿಕೆಟ್ ಕೊಡಬೇಡಿ. ಅನರ್ಹ ಶಾಸಕರೇನು ಸ್ವತಂತ್ರ ಹೋರಾಟಗಾರರಲ್ಲ. ಅವರು ಆಸೆ, ಆಕಾಂಕ್ಷೆ ಇಟ್ಟುಕೊಂಡೇ ರಾಜೀನಾಮೆ ಕೊಟ್ಟಿದ್ದರು. ಮಂತ್ರಿ, ಎಂಎಲ್‍ಸಿ, ನಿಗಮ ಮಂಡಳಿಯ ಬೇಡಿಕೆ ಮುಂದಿಟ್ಟಿದ್ದರು. ಅವರೇನೂ ತ್ಯಾಗ ಮಾಡಿಲ್ಲ ಅಂತ ಹೇಳಿದ್ದಾರೆ. ನಾನು ಪಕ್ಷದ ಪ್ರಾಮಾಣಿಕ ಕಾರ್ಯಕರ್ತ. ಹೀಗಾಗಿ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ನೀಡುತ್ತೆ ಅನ್ನೋ ವಿಶ್ವಾಸ ಇದೆ. ಟಿಕೆಟ್ ಕೊಡದಿದ್ದರೂ ಪಕ್ಷೇತರವಾಗಿ ನಿಲ್ಲುವುದಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ. Share on: WhatsAppContact Us for AdvertisementRead More →

15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದ್ದು, ಜನರೂ ಪಕ್ಷಾಂತರಿಗಳನ್ನು ಸೋಲಿಸಲು ತೀರ್ಮಾನ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಕೂಡಾ ಪಕ್ಷಾಂತರಿಗಳನ್ನು ಸೋಲಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದು ಸಾಕಿದ ಗಿಣಿಗಳು ಹದ್ದಾಗಿ ಕುಕ್ಕಿದವು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಯಾವ ಉದ್ದೇಶದಿಂದ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಮೈಸೂರು ಮತ್ತು ಕೊಡಗಿನಲ್ಲಿ ಬಿಜೆಪಿಗೆ ಓಟು ಹಾಕಿಸುವಂತೆ ಕುಮಾರಸ್ವಾಮಿ ನಮಗೆ ಹೇಳಿದ್ದರು ಅಂತ ಜೆಡಿಎಸ್‍ನ ಜಿ.ಟಿ.ದೇವೇಗೌಡರೇ ಹೇಳಿದ್ದಾರೆ. ಹಾಗಾದ್ರೆ ನಾಟಕ ಆಡ್ತಿರೋರು ಯಾರು ಅಂತ ಪ್ರಶ್ನಿಸಿದ್ರು. ಇನ್ನೇನು ಸಿದ್ದರಾಮಯ್ಯ ಹೊರಡಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಬಂದ ರೈತನೊಬ್ಬ ನನ್ನ ಸಾಲ ಇನ್ನೂ ಮನ್ನಾ ಆಗಿಲ್ಲ ಅಂದ್ರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಸರಿಯಾಗಿ ಮಾಡಿದ್ದೆ. ಕುಮಾರಸ್ವಾಮಿ ಮಾಡಿದ ಸಾಲಮನ್ನಾ ಸರಿ ಇಲ್ಲಪ್ಪಾ.. ನಾನೇನು ಮಾಡಲಿ ಅಂದ್ರು. Share on:Read More →

16 ವರ್ಷದ ಯುವತಿ ಮೇಲೆ ಮೂವರು ಯುವಕರು ಸೇರಿ ಗ್ಯಾಂಗ್ ರೇಪ್ ನಡೆಸಿ, ವಿಡಿಯೋ ಮಾಡಿದ್ದಾರೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಂತರ ಆ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿದ್ದಾರೆ. ಈ ಮೂವರಲ್ಲಿ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಭತ್ತದ ಗದ್ದೆಗೆ ಎಳೆದೊಯ್ದ ಗ್ರಾಮಸ್ಥರು ಸಾಯುವ ಹಾಗೆ ಥಳಿಸಿದ್ದಾರೆ. ಆದ್ರೆ ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು 20 ವರ್ಷದ ಮೊಹ್ಮದ್ ನಜೀಮ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಾದ ಮೊಹ್ಮದ್ ಚೊಟ್ಕಾ ಮತ್ತು ಮೊಹ್ಮದ್ ಬಡ್ಕಾ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ದೂರು ನೀಡಿರುವ ಯುವತಿ, ನಾನು ಮೇವು ಸಂಗ್ರಹಿಸಲು ಪಕ್ಕದ ಗ್ರಾಮಕ್ಕೆ ತೆರಳಿದ್ದೆ. ಈ ವೇಳೆ ಮೂವರು ಯುವಕರು ನನ್ನನ್ನು ಎಳೆದುಕೊಂಡುಹೋಗಿ ಅತ್ಯಾಚಾರ ಎಸಗಿದ್ದಾರೆ ಅಂತ ಹೇಳಿದ್ದಾರೆ. ದುರಂತ ಅಂದ್ರೆ ಪೊಲೀಸರು ಕೂಡ ಯುವತಿ ಮತ್ತು ಆಕೆಯ ಕುಟುಂಬಸ್ಥರ ಜೊತೆ ಅನುಚಿತವಾಗಿ ವರ್ತಿಸಿ, ಕೇಸ್ ದಾಖಲಿಸಲು ನಿರಾಕರಿಸಿದ್ದಾರೆ. ಹೀಗಾಗಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. Share on: WhatsAppContact UsRead More →

ಮೈತ್ರಿ ಸಾಕಾಗಿ ಹೋಗಿದೆ ಎಂದಿದ್ದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ನನ್ನದೇ ತಪ್ಪು, 4 ದಶಕಗಳ ರಾಜಕೀಯ ಒಡನಾಟದ ಅನುಭವದ ನಂತರವೂ ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡೆವು. ಕುಕ್ಕದೇ ಬಿಡುತ್ತಾ? ಅನುಭವಕ್ಕಿಂತ ದೊಡ್ಡ ಪಾಠ ಏನಿದೆ ಹೇಳಿ..? ಅಂತ ಹೇಳಿದ್ದಾರೆ. ಇತ್ತ ಬೈ ಎಲೆಕ್ಷನ್ ಬಳಿಕ ಹೊಸ ನಾಟಕ ಶುರುವಾಗಲಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಉಪಚುನಾವಣೆಗೆ 2 ದಿನಗಳಲ್ಲಿ ಪಟ್ಟಿ ಪೈನಲ್ ಮಾಡುತ್ತೇವೆ. ಈ ಬಾರಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡುತ್ತಿದ್ದೇವೆ ಅಂತ ಮಾಹಿತಿ ನೀಡಿದ್ರು. ಅಲ್ಲದೆ ಈ ಉಪಚುನಾವಣೆ ಆಡಳಿತ ಪಕ್ಷ ಸೇರಿದಂತೆ ಎಲ್ಲಾ ಪಕ್ಷಗಳಿಗೂ ಅಗ್ನಿಪರೀಕ್ಷೆಯಾಗಿದ್ದು, ಚುನಾವಣೆ ಬಳಿಕ ರಾಜ್ಯದಲ್ಲಿ ಹೊಸ ನಾಟಕ ಶುರುವಾಗಲಿದೆ ಅಂತ ಹೇಳಿದ್ದಾರೆ. Share on: WhatsAppContact Us for AdvertisementRead More →

ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‍ಗಾಗಿ ಶರತ್ ಬಚ್ಚೇಗೌಡ ಲಾಬಿ ಶುರು ಮಾಡಿದ್ದಾರೆ. ಇವತ್ತು ಬೆಂಗಳೂರಿನ ಡಾಲರ್ಸ್ ಕಾಲೋನಿಯಲಿಲೊರುವ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬೆಂಬಲಿಗರು ಭೇಟಿ ನೀಡಿದ್ದಾರೆ. ಅಲ್ಲದೆ ಶರತ್ ಬಚ್ಚೇಗೌಡಗೆ ಟಿಕೆಟ್ ನೀಡುವಂತೆ ಯಡಿಯೂರಪ್ಪ ಬಳಿ ಮನವಿ ಮಾಡಿದ್ದಾರೆ. ಆದ್ರೆ ಅಪಾರ ಸಂಖ್ಯೆಯ ಬೆಂಬಲಿಗರನ್ನು ಪೊಲೀಸರು ತಡೆದು ಕೇವಲ ಐವರನ್ನು ಮಾತ್ರ ಯಡಿಯೂರಪ್ಪ ನಿವಾಸದೊಳಗೆ ಬಿಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ಶರತ್ ಬಚ್ಚೇಗೌಡ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಹೊಸಕೋಟೆಯಲ್ಲಿ ಪಕ್ಷ ಕಟ್ಟಿದ್ದು ನಾವು, ಈಗ ಬೇರೆ ಪಕ್ಷದಿಂದ ಬಂದವರಿಗೆ ಟಿಕೆಟ್ ಕೊಡಬೇಡಿ ಎಂದು ಕೆಂಡಕಾರಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮನೆಗೆ ಬಿಗಿಭದ್ರತೆ ಏರ್ಪಡಿಲಾಗಿದೆ. ಇನ್ನು ಎಂಟಿಬಿ ನಾಗರಾಜ್ ಕೂಡ ಯಡಿಯೂರಪ್ಪರನ್ನು ಭೇಟಿಯಾಗಲು ಸಮಯ ಕೇಳಿದ್ದಾರೆ. Share on: WhatsAppContact Us for AdvertisementRead More →

ಸರ್ಕಾರಿ ಸ್ವಾಮ್ಯದ 10 ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಇದೇ 26, 27ರಂದು ಮುಷ್ಕರಕ್ಕೆ ಕರೆ ನೀಡಿದ್ದ ಬ್ಯಾಂಕ್ ಅಧಿಕಾರಿಗಳ ಒಕ್ಕೂಟಗಳು ನಿರ್ಧಾರ ಬದಲಿಸಿವೆ. ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಭರವಸೆ ನೀಡಿರೋದ್ರಿಂದ ಮುಷ್ಕರ ಕೈಬಿಟ್ಟಿರೋದಾಗಿ ಒಕ್ಕೂಟಗಳು ತಿಳಿಸಿವೆ. ಬ್ಯಾಂಕ್‍ಗಳ ವಿಲೀನದಿಂದ ಹಲವು ಸಮಸ್ಯೆಗಳು ಎದುರಾಗಲಿದ್ದು, ಅವುಗಳನ್ನು ಬಗೆಹರಿಸಲು ಸಮಿತಿ ರಚನೆ ಮಾಡುವ ಕುರಿತು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಕೆಲಸ ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. Share on: WhatsAppContact Us for AdvertisementRead More →

ಅಮೇರಿಕಾದ ಹೂಸ್ಟನ್‍ನಲ್ಲಿ ನಡೆದ ಹೌಡಿ ಮೋದಿಯಲ್ಲಿ ಮೋದಿ ಅಬ್ಬರ ಹೇಗಿತ್ತು ಅಂತ ನೀವೆಲ್ಲಾ ನೋಡಿದ್ದೀರಿ. ಆದ್ರೆ ಇದು ವಿಪಕ್ಷ ಕಾಂಗ್ರೆಸ್‍ಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಮ್ಮ ನಾಯಕರಿಗೂ ಸಹ ಅಂತಹ ಇದೇ ರೀತಿ ಬೆಂಬಲ ಸಿಕ್ಕಿತ್ತು ಅಂತ ಹೇಳುವಾಗ ಶಶಿ ತರೂರ್ ಎಡವಟ್ಟು ಮಾಡಿಕೊಂಡಿದ್ದಾರೆ. 1954ರಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ಅಮೆರಿಕಾಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಯಾವುದೇ ವಿಶೇಷ ಪಿಆರ್ ಅಭಿಯಾನ, NRI ಜನಸಮೂಹ ನಿರ್ವಹಣೆ ಅಥವಾ ಹೈಪ್-ಅಪ್ ಮಾಧ್ಯಮ ಪ್ರಚಾರವಿಲ್ಲದೆ, ಅಮೆರಿಕಾದ ಸಾರ್ವಜನಿಕರು ಭಾರಿ ಉತ್ಸಾಹ, ಸ್ವಯಂಪ್ರೇರಿತರಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಈ ಟ್ವೀಟ್‍ನಲ್ಲಿ ಇಂದಿರಾ ಅವರನ್ನು ಇಂಡಿಯಾ ಎಂದು ಹೇಳಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‍ಗೆ ಒಳಗಾಗುತ್ತಿದ್ದಾರೆ. Share on: WhatsAppContact Us for AdvertisementRead More →

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲು ಅಮೆರಿಕಾಗೆ ಹೋಗಿರೋ ಇಮ್ರಾನ್ ಖಾನ್‍ಗೆ ಡೊನಾಲ್ಡ್ ಟ್ರಂಪ್ ಶಾಕ್ ಕೊಟ್ಟಿದ್ದಾರೆ. ನಿನ್ನೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಡೊನಾಲ್ಡ್ ಟ್ರಂಪ್ ಭೇಟಿಯಾಗಿ ಮಾತುಕತೆ ನಡೆಸಿದ್ರು. ಈ ವೇಳೆ ಇಮ್ರಾನ್ ಖಾನ್ ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಈ ವಿಚಾರವಾಗಿ ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದ್ರೆ ನೀವು ಮಧ್ಯಸ್ಥಿಕೆ ವಹಿಸಬೇಕು ಅಂತ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಟ್ರಂಪ್, ಭಾರತದೊಂದಿಗೆ ನನ್ನ ಸಂಬಂಧ ತುಂಬಾ ಚೆನ್ನಾಗಿದೆ. ಮೋದಿ ಕಾಶ್ಮೀರ ಮತ್ತು 370ನೇ ವಿಧಿಯ ಬಗ್ಗೆ ಮಾತನಾಡಿದ ಭಾಷಣ ಆಕ್ರಮಣಕಾರಿಯಾಗಿತ್ತು. ಜನ ಕೂಡ ತುಂಬಾ ಚೆನ್ನಾಗಿ ಭಾಷಣ ಕೇಳುತ್ತಿದ್ದರು. ನನಗೆ ಪಾಕಿಸ್ತಾನದ ಮೇಲೆ ನಂಬಿಕೆ ಇದೆ ಆದ್ರೆ ನನ್ನ ಮುಂದೆ ಇರುವವರಿಗೆ ಪಾಕ್ ಮೇಲೆ ನಂಬಿಕೆ ಇಲ್ಲ. ಭಾರತ-ಪಾಕಿಸ್ತಾನ ರಾಜಿ ಮಾಡಿಕೊಂಡಲ್ಲಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಇದೇ ವೇಳೆ ಪಾಕ್ ಪತ್ರಕರ್ತನೊಬ್ಬ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದಾಗ ಇಂಥವರನ್ನೆಲ್ಲಾ ಎಲ್ಲಿಂದ ಕರೆತರುತ್ತೀರಿ ಎಂದು ಇಮ್ರಾನ್ ಖಾನ್ ಅವರನ್ನು ಟ್ರಂಪ್ ಕಿಚಾಯಿಸಿದ್ದಾರೆ. ಇನ್ನುRead More →