ಇವತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನ ಗಡಿ ನಿಯಂತ್ರಣ ರೇಖೆವರೆಗೆ ಮೆರವಣಿಗೆ ನಡೆಸಲಿದ್ದಾರೆ. ಇನ್ನೊಂದು ವಿಷ್ಯ ಅಂದ್ರೆ ಈ ಮೆರವಣಿಗೆಗೆ ಪಾಕಿಸ್ತಾನ ಸೇನೆಯೇ ರಕ್ಷಣೆ ನೀಡಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ರದ್ದುಪಡಿಸಿದ ಭಾರತದ ಕ್ರಮವನ್ನು ವಿರೋಧಿಸುವ ಸಲುವಾಗಿ ಈ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇನ್ನು ನಾವು ಯಾವುದೇ ರೀತಿಯ ಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಭಾರತೀಯ ಸೇನೆ ಕೂಡ ಹೇಳಿದೆ. ಅತ್ತ ಜಮ್ಮು ಕಾಶ್ಮೀರ ವಿಚಾರದಲ್ಲಿ ಫುಲ್ ತಲೆಕೆಡಿಸಿಕೊಂಡಿರೋ ಇಮ್ರಾನ್ ಖಾನ್‍ಗೆ ಹೊಸ ಸಂಕಷ್ಟ ಎದುರಾಗಿದೆ. ಪ್ರಧಾನಿ ಕುರ್ಚಿಯ ಬುಡವೇ ಅಲುಗಾಡಲು ಆರಂಭಿಸಿದೆ. ಪಾಕಿಸ್ತಾನದ ಪ್ರಮುಖ ಬಲಪಂಥೀಯ ಸಂಘಟನೆ ಜಮೀಯತ್ ಉಲೇಮಾ ಇ ಇಸ್ಲಾಂ ಫಜಲ್ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಆಜಾದ್ ಮಾರ್ಚ್ ಹಮ್ಮಿಕೊಂಡಿದೆ. ಇದೇ ಅಕ್ಟೋಬರ್ 27ರಿಂದ ಆಜಾದ್ ಮಾರ್ಚ್ ಆರಂಭವಾಗಲಿದ್ದು, ಇಮ್ರಾನ್ ಖಾನ್ ಪ್ರಧಾನಿ ಹುದ್ದೆ ಬಿಟ್ಟು ಕೆಳಗಿಳಿಯಬೇಕು ಎಂದು ಒತ್ತಾಯಿಸಲಿದೆ. ಆರ್ಥಿಕ ಹಿಂಜರಿತ ಮತ್ತು ಇತರೆ ಸಮಸ್ಯೆಗಳಿಂದ ದೇಶವನ್ನು ಹೊರತರುವಲ್ಲಿ ಇಮ್ರಾನ್ ಖಾನ್ ಅಸಮರ್ಥರಾಗಿದ್ದಾರೆ ಅನ್ನೋದು ಜಮೀಯತ್ ಉಲೇಮಾ ಇRead More →

ನೆರೆ ಪರಿಹಾರ ಇವತ್ತು ಬರುತ್ತೆ ನಾಳೆ ಬರುತ್ತೆ ಅಂತ ನಾವೇ ಹಾರಿಸಿ ಕಳಿಸಿದ ನಮ್ ಸಂಸದರು, ಸಚಿವರು ಹೇಳಿದ್ದೆ ಹೇಳಿದ್ದು… ಆದ್ರೆ ಈಗ ನೋಡಿ ರಾಜ್ಯ ಸರ್ಕಾರದ ನೆರೆ ನಷ್ಟದ ವರದಿಯನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ.. ರಾಜ್ಯಕ್ಕೆ ಬಂದಿದ್ದ ಕೇಂದ್ರದ ಅಧ್ಯಯನ ತಂಡ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಿತ್ತು. ಅದೇ ರೀತಿ ರಾಜ್ಯ ಸರ್ಕಾರ ಕೂಡ ವರದಿ ಸಿದ್ಧಪಡಿಸಿ, 38 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ, ಅದರಲ್ಲೂ 3,500 ಕೋಟಿ ಪರಿಹಾರ ಈಗಲೇ ನೀಡುವಂತೆ ಮನವಿ ಮಾಡಿತ್ತು. ಆದ್ರೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ರಾಜ್ಯದ ವರದಿಗೂ ಕೇಂದ್ರದ ಅಧ್ಯಯನ ತಂಡ ನೀಡಿದ ವರದಿಗೂ ತಾಳೆಯಾಗುತ್ತಿಲ್ಲ. ರಾಜ್ಯದಲ್ಲಿ 38 ಸಾವಿರ ಕೋಟಿ ರೂಪಾಯಿ ನಷ್ಟವಾಗಿಲ್ಲ. ಕುಸಿದ ಮನೆಗಳೆಲ್ಲಾ 5 ಲಕ್ಷ ರೂಪಾಯಿ ಮೌಲ್ಯವನ್ನು ಹೊಂದಿದ್ದವಾ..? ಎಂದು ರಾಜ್ಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅದೂ ಅಲ್ಲದೆ ಎಲ್ಲವನ್ನು ಮತ್ತೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಸೂಚಿಸಿದೆ. ಇದರಿಂದ ರಾಜ್ಯಕ್ಕೆ ಕೇಂದ್ರಿದಂದ ಪರಿಹಾರ ಸಿಗೋದು ಮತ್ತಷ್ಟು ವಿಳಂಬವಾಗಲಿದೆ.Read More →

ಜಮ್ಮು ಕಾಶ್ಮೀರದ ವಿಚಾರದಲ್ಲಿ ನಮಗೆ ಯಾವುದೇ ಮಧ್ಯಸ್ಥಿಕೆ ಬೇಕಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ. ಮಧ್ಯಪ್ರದೇಶದ ಇಂದೋರ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮಗೆ ಪಾಕಿಸ್ತಾನದ ಜೊತೆ ಮಾತನಾಡಲು ಯಾವುದೇ ಸಮಸ್ಯೆ ಇಲ್ಲ. ಆದ್ರೆ ಅವರು ಒಂದು ಕೈಯಲ್ಲಿ ಬಂದೂಕು ಮತ್ತೊಂದು ಕೈಯಲ್ಲಿ ಬಾಂಬ್ ಹಿಡಿದಿದ್ರೆ ನಾವು ಮಾತುಕತೆ ನಡೆಸಲು ಸಾಧ್ಯವಿಲ್ಲ. ಅವರು ತಮ್ಮ ಬಂದೂಕನ್ನು ಕೆಳಗಿಡಬೇಕು ಮತ್ತು ಉಗ್ರರನ್ನು ಜೈಲಿಗೆ ಕಳುಹಿಸಬೇಕು. ಅವರು ನಮ್ಮ ಹಣೆ ಮೇಲೆ ಬಂದೂಕು ಇಟ್ಟರೆ ನಾವು ಮಾತನಾಡಲು ಸಾಧ್ಯವಿಲ್ಲ. ಇದು ಭಾರತದ ನಿಲುವು. ಇದರಲ್ಲಿ ಮೂರನೆಯವರ ಅಗತ್ಯವಿಲ್ಲ. ಪಾಕಿಸ್ತಾನದವರು ಉಗ್ರರನ್ನು ಬಳಸುತ್ತಿದ್ದಾರೆ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಪದೇ ಪದೇ ಮಧ್ಯಸ್ಥಿಕೆ ವಹಿಸಲು ಸಿದ್ಧ ಎನ್ನುತ್ತಿರುವ ಟ್ರಂಪ್ ಹೇಳಿಕೆಗೆ ಉತ್ತರಿಸಿದ್ದಾರೆ. Share on: WhatsAppContact Us for AdvertisementRead More →

ಶೀನಾ ಬೋರಾ ಹತ್ಯೆ ಕೇಸಲ್ಲಿ ಜೈಲಲ್ಲಿರುವ ಇಂದ್ರಾಣಿ ಮುಖರ್ಜಿ ಮತ್ತು ಪೀಠರ್ ಮುಖರ್ಜಿ ಪರಸ್ಪರ ತಲಾಕ್ ಪಡೆದಿದ್ದಾರೆ. ಗುರುವಾಗ ಅಂದ್ರೆ ನಿನ್ನೆ ಮುಂಬೈನ ಫ್ಯಾಮಿಲಿ ಕೋರ್ಟ್ ತಲಾಕ್‍ಗೆ ಅನುಮತಿ ಕೂಡ ನೀಡಿದೆ. 2017ರಲ್ಲೇ ಇಂದ್ರಾಣಿ ಮತ್ತು ಪೀಠರ್ ಮುಖರ್ಜಿ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು. ನಂತರ ಇಂದ್ರಾಣಿಯವರೇ ಪೀಠರ್ ಮುಖರ್ಜಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು. ಅದರಂತೆ 2018ರಲ್ಲಿ ಇಬ್ಬರು ಕೋರ್ಟ್ ಮುಂದೆ ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದರು. ಅದರಂತೆ ಈಗ ವಿಚ್ಛೇದನಕ್ಕೆ ಮುಂಬೈನ ಕೌಟುಂಬಿಕ ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ. ಶೀನಾ ಬೋರಾ ಅಂದ್ರೆ ಮಗಳ ಹತ್ಯೆ ಕೇಸಲ್ಲಿ ಇಂದ್ರಾಣಿ ಮತ್ತು ಆಕೆಯ ಪತಿ ಪೀಠರ್ 2015ರಿಂದ ಜೈಲಿನಲ್ಲಿದ್ದಾರೆ. Share on: WhatsAppContact Us for AdvertisementRead More →

ಕರ್ನಾಟಕದಲ್ಲೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಹೊರಗೆ ಕಳುಹಿಸಲು ಸರ್ಕಾರ ಪ್ಲಾನ್ ಮಾಡ್ತಿದೆ. ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ ಅಂದ್ರೆ ಎನ್‍ಆರ್‍ಸಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಲು ಪ್ಲಾನ್ ಮಡ್ತಿದೆ. ಎನ್‍ಆರ್‍ಸಿ ಲಿಸ್ಟ್‍ಗೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದ್ದು, ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ನಂತರ ಒಂದೆರಡು ವಾರದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಮಾತನಾಡಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಅಲ್ಲದೆ ಬೆಂಗಳೂರು ಮತ್ತು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತ ಕೊಡಗಿನ ಕೆಲ ಭಾಗಗಳಲ್ಲಿ ಅಕ್ರಮವಾಗಿ ವಲಸಿಗರು ನೆಲೆಸಿದ್ದಾರೆ. ಇಲ್ಲಿನ ಕಾಫಿ ಎಸ್ಟೇಟ್‍ಗಳಲ್ಲಿ ಕೆಲಸ ಮಾಡಲು ವಿದೇಶಿಗರು ಬರ್ತಿದ್ದಾರೆ ಅಂತ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈಗಾಗಲೇ ಹಲವು ಬಾರಿ ಸಭೆ ನಡೆಸಿರುವ ಬಸವರಾಜ್ ಬೊಮ್ಮಾಯಿ, ಅಕ್ರಮವಾಗಿ ನೆಲೆಸಿರುವ ವಲಸಿಗರ ಕುರಿತು ಮಾಹಿತಿ ಕಲೆಹಾಕುವಂತೆ ಸೂಚಿಸಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೂಡ ಬೆಂಗಳೂರಿನಲ್ಲಿ ಬಾಂಗ್ಲಾದೇಶದ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಕರ್ನಾಟಕಕ್ಕೂ ಎನ್‍ಆರ್‍ಸಿಯನ್ನ ವಿಸ್ತರಿಸುವಂತೆ ಮನವಿ ಮಾಡಿದ್ದರು. ಅಲ್ಲದೆ ಕುಮಾರಸ್ವಾಮಿ ಕೂಡ ರಾಜ್ಯದಲ್ಲಿRead More →

ದಸರಾ ಮುಗಿದ ಬಳಿಕ ಆಗಸ್ಟ್ 10ರಿಂದ 3 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದೆ. ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಅಧಿವೇಶನ ಕೇವಲ ಬಜೆಟ್‍ಗೆ ಮಾತ್ರವೇ ಸೀಮಿತವಾಗಿರಲಿದೆ. ಆದ್ರೆ ಇನ್ನೂ ಕೂಡ ಕಾಂಗ್ರೆಸ್ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಅಲ್ಲದೆ ಅಧಿವೇಶನದ ಒಳಗೆ ಪ್ರತಿಪಕ್ಷ ನಾಯಕನನ್ನು ನೇಮಿಸುವಲ್ಲಿಯೂ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆಯೋ ಸಾಧ್ಯತೆ ಇದೆ. ಮತ್ತೊಂದ್ಕಡೆ ವಿವಿಧ ವಿಷಯಗಳನ್ನು ಮುಂದಿಟ್ಟು ಬಿಜೆಪಿ ಸರ್ಕಾರವನ್ನು ಹಣಿಯಲು ಮಾಜಿ ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿಕೊಂಡಿದ್ದಾರೆ. ನೆರೆ ಪರಿಸ್ಥಿತಿ, ಅನುದಾನ ಕಡಿತದ ವಿಚಾರ ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಲು ತಂತ್ರ ಹೂಡಿದ್ದಾರೆ. ಇದಕ್ಕಾಗಿಯೇ ಅಕ್ಟೋಬರ್ 9ರಂದು ಶಾಸಕಾಂಗ ಸಭೆ ಕರೆದಿದ್ದಾರೆ. Share on: WhatsAppContact Us for AdvertisementRead More →

ಭಾರತದ ಸೇನೆಗೆ ಮೂರು ವಸ್ತುಗಳು ತುಂಬಾನೇ ಮುಖ್ಯ. ಇವುಗಳಿಂದ ಯಾವುದೇ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಬಹುದು. ಯಾವುದೇ ಪ್ರಕರಣವನ್ನು ಇತ್ಯರ್ಥಗೊಳಿಸಬಹುದು. ಮಾದಕ ವಸ್ತುಗಳ ಸ್ಮಗ್ಲಿಂಗ್ ಅನ್ನು ಸಂಪೂರ್ಣವಾಗಿ ತಡೆಯಬಹುದು. ಅಲ್ಲದೆ ಯೋಧರ ಪ್ರಾಣವನ್ನೂ ಉಳಿಸಬಹುದು.. ಹೀಗಂತ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ವಿವೇಕ್ ಬಾರಧ್ವಜ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಇಂಡಿಯಾ ಇಂಟರ್ ನ್ಯಾಷನಲ್ ಸೆಕ್ಯೂರಿಟಿ ಎಕ್ಸ್‍ಪೋದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಭಾರತೀಯ ಸೇನೆಗೆ ಮೂರು ವಸ್ತುಗಳ ಅಗತ್ಯವಿದೆ. ಅದೇ ಉಪಗ್ರಹ, ಡ್ರೋನ್ ಮತ್ತು ನಾಯಿಗಳು. ಈಗಾಗಲೇ ಡ್ರೋನ್ ಮತ್ತು ಉಪಗ್ರಹಗಳ ಸಹಾಯದಿಂದ ಹಲವು ಕಾರ್ಯಾಚರಣೆ ನಡೆಸಿದ್ದೇವೆ. ಉಪಗ್ರಹ ಮತ್ತು ಡ್ರೋನ್ ಮೂಲಕ ಕಾರ್ಯಾಚರಣೆಗೆ ಸರಿಯಾದ ರೀತಿಯಲ್ಲಿ ರೂಪುರೇಷೆ ಸಿದ್ಧಪಡಿಸಬಹುದು ಎಂದಿದ್ದಾರೆ. ಅಲ್ಲದೆ ದೇಶದ ಸುರಕ್ಷತೆಗೆ ನಾಯಿಗಳ ಅಗತ್ಯತೆಯೂ ತುಂಬಾ ಇದೆ. ನಾಯಿಗಳು ಸೇನೆಯ ಬೆಸ್ಟ್ ಫ್ರೆಂಡ್ ಎನ್ನಬಹುದು. ಭಾರತೀಯ ಸೇನೆಯ ಕೆ-9 ತಂಡದಲ್ಲಿ ಸ್ನಿಫರ್ಸ್ ನಾಯಿಗಳು ಇರುತ್ತವೆ. ಅವುಗಳ ಸಹಾಯದಿಂದಲೇ ಹಲವಾರು ಉಗ್ರ ದಾಳಿಗಳನ್ನು ತಡೆಯಲಾಗಿದೆ. ಆದ್ರೆ ಇನ್ನೂ 35 ಸಾವಿರ ನಾಯಿಗಳ ಅಗತ್ಯವಿದೆRead More →

ಸಿಎಂ ಯಡಿಯೂರಪ್ಪ ವಿರುದ್ಧ ಜೆಡಿಎಸ್ ನಾಯಕ ಎಸ್.ಆರ್.ಶ್ರೀನಿವಾಸ್ ನಾಲಗೆ ಹರಿಬಿಟ್ಟಿದ್ದಾರೆ. ಅಧಿಕಾರ ಸಿಗದೇ ಇದ್ದಿದ್ದರೆ ಸತ್ತೇ ಹೋಗುತ್ತಿದ್ದ ಎಂದು ಯಡಿಯೂರಪ್ಪ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆಯ ಅಂಗಡಿ ಇಟ್ಟಿದ್ದಾರೆ. ಬಿ.ಎಸ್.ಯಡಿಯೂರಪ್ಪನವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಅವರು ಏನ್ ಹೇಳ್ತಾರೋ ಅವರಿಗೇ ಗೊತ್ತಾಗಲ್ಲ. ಅಮಿತ್ ಶಾ ಮುಂದೆ ಹೋಗಿ ನಿಲ್ಲುವ ಧೈರ್ಯವೂ ಅವರಿಗೆ ಇಲ್ಲ. ಕಳ್ಳನಿಗೆ ಮತ ಹಾಕಿ ಅಧಿಕಾರ ಕೊಟ್ಟಂತಾಗಿದೆ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇನ್ನು ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಮೋದಿ ಮುಂದೆ ನಿಲ್ಲೋ ಗಂಡಸು ಒಬ್ಬನೂ ಇಲ್ಲ. ಎಲ್ಲರೂ ಸೇರಿ ತುಮಕೂರಿನಲ್ಲಿ ನೀಚನನ್ನು ಗೆಲ್ಲಿಸಿದ್ರಿ. ತಾಕತ್ ಇದ್ದರೆ ಜಿ.ಎಸ್.ಬಸವರಾಜು ನನ್ನ ಮುಂದೆ ಬಂದು ಮಾತನಾಡಲಿ ಅಂತ ಹೇಳಿದ್ದಾರೆ. Share on: WhatsAppContact Us for AdvertisementRead More →

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಭಾರತ-ಜಮ್ಮು ಕಾಶ್ಮೀರದ ಸಂಬಂಧ ಸರಿಯಾಗಿಲ್ಲ. ಆದ್ರೆ ಈ ಟೆನ್ಶನ್ ನಡುವೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಕರ್ತಾರ್‍ಪುರ್ ಸಾಹಿಬ್ ಗುರುದ್ವಾರದಲ್ಲಿ ನಡೆಯಲಿರೋ ಗುರುನಾನಕ್ ಜಯಂತಿಯಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ. ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಾಕ್‍ಗೆ ಹೋಗಲು ಮನಮೋಹನ್ ಸಿಂಗ್ ಅವರಿಗೆ ಆಮಂತ್ರಣ ನೀಡಿದ್ದರು. ಅದರಂತೆ ಮಾಜಿ ಪ್ರಧಾನಿ ಗುರುನಾನಕ್ ಜಯಂತಿಯಲ್ಲಿ ಭಾಗಿಯಾಗಲು ಒಪ್ಪಿದ್ದಾರೆ. ಈ ಹಿಂದೆ ಪಾಕಿಸ್ತಾನ ಕೂಡ ಮನಮೋಹನ್ ಸಿಂಗ್ ಅವರಿಗೆ ಆಮಂತ್ರಣ ನೀಡಿತ್ತು. ಆದ್ರೆ ಆ ಆಮಂತ್ರಣವನ್ನು ಸಿಂಗ್ ತಿರಸ್ಕರಿಸಿದ್ದರು. ಅಲ್ಲದೆ ಪ್ರಧಾನಿ ಮೋದಿಯವರಿಗೂ ಪಾಕ್ ಸರ್ಕಾರ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿತ್ತು. ನವೆಂಬರ್ 9ರಂದು ಭಾರತೀಯ ಸಿಖ್ ಯಾತ್ರಿಗಳು ಕರ್ತಾರ್‍ಪುರ್‍ಗೆ ತೆರಳಲಿದ್ದಾರೆ. Share on: WhatsAppContact Us for AdvertisementRead More →

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜೈಲು ಸೇರಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸೋಮವಾರವಷ್ಟೇ ದೆಹಲಿ ಹೈಕೋರ್ಟ್ ಚಿದಂಬರಂ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಂ ಪರ ವಕೀಲರು ದೆಹಲಿ ಹೈಕೊರ್ಟ್ ಆದೇಶ ಪ್ರಶ್ನಿಸಿ ಇವತ್ತು ಸುಪ್ರೀಂಕೊರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾ.ರಮಣ ನೇತೃತ್ವದ ಪೀಠದ ಮುಂದೆ ಅರ್ಜಿ ಸಲ್ಲಿಸಿರುವ ಕಪಿಲ್ ಸಿಬಲ್, ಅರ್ಜಿಯನ್ನು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ. ಆದ್ರೆ ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಪೀಠದ ಮುಂದಿಡೋದಾಗಿ ನ್ಯಾ.ರಮಣ ನೇತೃತ್ವದ ಪೀಠ ತಿಳಿಸಿದೆ. ಚಿದಂಬರಂ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ದೆಹಲಿ ಹೈಕೋರ್ಟ್ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಈ ಪ್ರಕರಣದಲ್ಲಿ ಚಿದಂಬರಂ ಅವರು ಸೆಪ್ಟೆಂಬರ್ 5ರಿಂದ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದಾರೆ. Share on: WhatsAppContact Us for AdvertisementRead More →