masthmagaa.com: ಅಮೆರಿಕದಲ್ಲಿ ನಿನ್ನೆ ಶಾಲೆಯೊಂದ್ರ ಮೇಲೆ ದಾಳಿ ನಡೆಸಿ 6 ಜನರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ, ಆರೋಪಿಯ ಬಳಿ ಲೀಗಲ್‌ ಆಗಿ ತೆಗೆದುಕೊಂಡಿದ್ದ 7 ಶಸ್ತ್ರಾಸ್ತ್ರಗಳಿದ್ದವು ಅಂತ ತಿಳಿದು ಬಂದಿದೆ. ಅದ್ರಲ್ಲಿ ಮೂರನ್ನ ಈ ದುಷ್ಕೃತ್ಯಕ್ಕೆ ಬಳಸಿದ್ದಳು ಅಂತ ಪೊಲೀಸರು ಹೇಳಿದ್ದಾರೆ. ಜೊತೆಗೆ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಆರೋಪಿಯನ್ನೂ ಹತ್ಯೆ ಮಾಡಲಾಗಿದೆ. ಈ ಭಯಾನಕ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಯನ್ಮಾರ್‌ನ ಉಚ್ಛಾಟಿತ ನಾಯಕಿ ಆಂಗ್‌ ಸಾನ್‌ ಸೂಕಿ ಅವ್ರ ಪಕ್ಷವಾದ National League for Democracy(NLD) ಅನ್ನ ಅಲ್ಲಿನ ಆಡಳಿತವಹಿಸಿರುವ ಜುಂಟಾ ರದ್ಧು ಮಾಡಿದೆ. ಜುಂಟಾ ಆಡಳಿತದಲ್ಲಿ ತಯಾರಿಸಲಾಗಿರುವ ಕಠಿಣ ಎಲೆಕ್ಶನ್‌ ಕಾನೂನುಗಳ ಅಡಿಯಲ್ಲಿ NLD ಪಕ್ಷ ಪುನಃ ರಿಜಿಸ್ಟರ್‌ ಮಾಡುವಲ್ಲಿ ವಿಫಲವಾಗಿದೆ. ಈ ಕಾರಣಕ್ಕೆ ಪಕ್ಷವನ್ನ ಡಿಸಾಲ್ವ್‌ ಮಾಡಲಾಗಿದೆ ಅಂತ ವರದಿಯಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಫ್ರಾನ್ಸ್‌ನಲ್ಲಿ ನೂತನ ಪಿಂಚಣಿ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಮತ್ತೊಮ್ಮೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಗಲಾಟೆ ಉಂಟಾಗಿದೆ. ಲಕ್ಷಾಂತರ ಜನ ಜನರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಗಲಾಟೆ ನಡೆದಿದ್ದು, 27 ಜನ್ರನ್ನ ಅರೆಸ್ಟ್‌ ಮಾಡಿರೋದಾಗಿ ಪೊಲೀಸರು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವ್ರ ಸಂಸತ್‌ ಸದಸ್ಯ ಸ್ಥಾನ ಅನರ್ಹತೆ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕ, ಕಾನೂನಿಗೆ ಗೌರವ ಮತ್ತ ನ್ಯಾಯಾಂಗ ಸ್ವಾತಂತ್ರ್ಯ ಯಾವುದೇ ಪ್ರಜಾಪ್ರಭುತ್ವದ ಮೂಲ ಆಧಾರಸ್ಥಂಭ ಅಂತ ಹೇಳಿದೆ. ಭಾರತೀಯ ಕೋರ್ಟ್‌ಗಳಲ್ಲಿ ರಾಹುಲ್‌ ಕೇಸ್‌ ಕುರಿತ ಬೆಳವಣಿಗೆಯನ್ನ ನಾವು ಗಮನಿಸುತ್ತಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಇರುವ ನಮ್ಮ ಬದ್ಧತೆ ಕುರಿತು ಭಾರತದ ಜೊತೆ ಮಾತನಾಡ್ತೀವಿ. ಡೆಮಾಕ್ರಸಿಯ ತತ್ವಗಳು, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನ ಒತ್ತಿ ಹೇಳ್ತೀವಿ. ಇವು ನಮ್ಮ ಪ್ರಜಾಪ್ರಭುತ್ವವನ್ನ ಸ್ಟ್ರಾಂಗ್‌ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿವೆ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಉಪವಕ್ತಾರ ವೇದಾಂತ್‌ ಪಟೇಲ್‌ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ʻಡೆಮಾಕ್ರೆಸಿ ಸಮಿಟ್‌ʼಗೆ ಪಾಕಿಸ್ತಾನ ಗೈರಾಗಿದೆ. ಪಾಕಿಸ್ತಾನದ ದೋಸ್ತ್‌ಗಳಾದ ಚೀನಾ ಹಾಗೂ ಟರ್ಕಿಗೆ ಈ ಸಭೆಯಲ್ಲಿ ಭಾಗವಹಿಸಲು ಅಹ್ವಾನಿಸಿಲ್ಲ. ಹೀಗಾಗಿ ಈ ಸಭೆಯಿಂದ ಹಿಂದೆ ಸರಿದಿರೋದಾಗಿ ಪಾಕಿಸ್ತಾನ್‌ ಅಧಿಕಾರಿಗಳು ಹೇಳಿದ್ದಾರೆ. ನಮ್ಮನ್ನ ಈ ಸಮಿಟ್‌ಗೆ ಇನ್ವೈಟ್‌ ಮಾಡಿದಕ್ಕೆ ಧನ್ಯವಾದ. ಬೈಡೆನ್‌ ಆಡಳಿತದಲ್ಲಿ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧದಲ್ಲಿ ಅಭಿವೃದ್ಧಿಯಾಗಿದೆ. ನಮ್ಮ ಸಂಬಂಧವನ್ನ ಇನ್ನಷ್ಟು ಬಲಗೊಳಿಸಲು ನಾವು ಬದ್ಧವಾಗಿದ್ದೀವಿ ಅಂತ ಪಾಕ್‌ ವಿದೇಶಾಂಗ ಅಧಿಕಾರಿಗಳು ತಿಳಿಸಿದ್ದಾರೆ. ಅಂದ್ಹಾಗೆ ಈ ಸಮಿಟ್‌ ನೆನ್ನೆ ಪ್ರಾರಂಭವಾಗಿದ್ದು, ಮೂರುದಿನಗಳ ಕಾಲ ವರ್ಚುವಲ್‌ ಆಗಿ ನಡೆಯಲಿದೆ. ಇನ್ನೊಂದ್‌ ಕಡೆ ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರ ಅಧಿಕಾರವನ್ನ ಮೊಟಕುಗೊಳಿಸುವ ಕಾನೂನನ್ನ ಜಾರಿಗೆ ತರದಿದ್ರೆ, ಇತಿಹಾಸ ನಮ್ಮನ್ನ ಕ್ಷಮಿಸುವುದಿಲ್ಲ ಅಂತ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಹೇಳಿದ್ದಾರೆ. ಅಂದ್ಹಾಗೆ ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿನ ಚುನಾವಣೆಗಳ ಕುರಿತು ಫೆಬ್ರವರಿ 22ರಂದು ಅಲ್ಲಿನ ಮುಖ್ಯ ನ್ಯಾಯಮೂರ್ತಿ ಉಮರ್ ಅವ್ರು ಸ್ವಯಂಪ್ರೇರಿತವಾಗಿ ನಿರ್ಧಾರವನ್ನ ತೆಗೆದುಕೊಂಡಿದ್ರು. ಈ ನಿರ್ಧಾರವನ್ನ ಉಳಿದ ಜಡ್ಜ್‌ಗಳು ಆಕ್ಷೇಪಿಸಿದ್ರು. ಈ ಹಿನ್ನಲೆಯಲ್ಲಿ ಚೀಫ್‌ ಜಸ್ಟೀಸ್‌ರRead More →

masthmagaa.com: ಕೆನಡಾದ ಸೈಮನ್ ಫ್ರೇಸರ್ ವಿಶ್ವವಿದ್ಯಾಲಯದಲ್ಲಿದ್ದ ಮಹಾತ್ಮ ಗಾಂಧೀಜಿಯವ್ರ ಪ್ರತಿಮೆಯನ್ನ ದ್ವಂಸ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರಾಯಭಾರ ಕಚೇರಿ ಕೆನಡಾ ಅಧಿಕಾರಿಗಳು ಈ ಕುರಿತು ಆದಷ್ಟು ಬೇಗ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡಿದೆ. ಅಂದ್ಹಾಗೆ ಕಳೆದ ವಾರವಷ್ಟೇ ಖಲಿಸ್ತಾನಿ ಬೆಂಬಲಿಗರು ಕೆನಡಾದ ಒಂಟಾರಿಯೋದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ದ್ವಂಸಗೊಳಿಸಿ ಖಲಿಸ್ತಾನ ಪರ ಘೋಷಣೆ ಬರೆದಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ರಷ್ಯಾ- ಯುಕ್ರೇನ್‌ ಯುದ್ಧದಲ್ಲಿ ಯುಕ್ರೇನ್‌ಗೆ ಗೆಲುವು ಸಿಕ್ಕಿದೆ ಅನ್ನೊ ರೀತಿಯಲ್ಲಿ ಹುಡುಗಿಯೊಬ್ಭಳು ಒಂದು ಚಿತ್ರ ಬಿಡಿಸಿದ್ಲು. ಈಗ ಆ ಹುಡುಗಿಯ ತಂದೆಗೆ 2 ವರ್ಷ ಜೈಲು ಸಿಕ್ಷೆ ವಿಧಿಸಲಾಗಿದೆ. ಮಶಾ ಅನ್ನೋ 13 ವರ್ಷದ ಬಾಲಕಿ ಬಿಡಿಸಿರುವ ಡ್ರಾಯಿಂಗ್‌ನಲ್ಲಿ ಯುಕ್ರೇನ್‌ ಧ್ವಜದ ಮೇಲೆ ʻಯುಕ್ರೇನ್‌ಗೆ ಜಯʼ ಹಾಗೂ ರಷ್ಯಾದ ಫ್ಲಾಗ್‌ ಮೇಲೆ ʻಯುದ್ಧ ಬೇಡʼ ಅಂತ ಬರೆಯಲಾಗಿದೆ. ಈ ಚಿತ್ರವನ್ನ ಬಾಲಕಿಯ ತಂದೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ರು ಎನ್ನಲಾಗಿದೆ. ರಷ್ಯಾದ ಸೇನೆಯನ್ನ ಅವಮಾನ ಮಾಡಿದ್ದಾರೆ ಅಂತ ಆರೋಪಿಸಿ ವ್ಯಕ್ತಿಯನ್ನ ಗೃಹಬಂಧನದಲ್ಲಿ ಇರಿಸಲಾಗಿತ್ತು. ಆದ್ರೆ ಈಗ ಆ ವ್ಯಕ್ತಿ ಕಾಣೆಯಾಗಿದ್ದು, ಆತ ಎಲ್ಲಿದ್ದಾನೆ ಅನ್ನೋದ್ರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಅಂತ ವರದಿಯಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ರಷ್ಯಾ ತನ್ನ ಮಿತ್ರ ರಾಷ್ಟ್ರ ಬೆಲಾರೂಸ್‌ನಲ್ಲಿ ನ್ಯೂಕ್ಲಿಯಾರ್‌ ಶಸ್ತ್ರಾಸ್ತ್ರ ನಿಯೋಜನೆ ಮಾಡೋದಾಗಿ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇದು ಅತ್ಯಂತ ಅಪಾಯಕಾರಿ ಹೇಳಿಕೆ, ಜಗತ್ತನ್ನ ಆತಂಕಕ್ಕೀಡು ಮಾಡುತ್ತೆ ಅಂತ ಹೇಳಿದ್ದಾರೆ. ಇದೇ ವೇಳೆ ರಷ್ಯಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನ ಸಾಗಿಸುತ್ತಿರೋದಕ್ಕೆ ಯಾವುದೇ ಸಾಕ್ಷ್ಯ ಕಂಡುಬಂದಿಲ್ಲ ಅಂತ ಕೂಡ ಬೈಡೆನ್‌ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಡೊಕ್ಲಾಮ್‌ ವಿವಾದವನ್ನು ಪರಿಹರಿಸುವಲ್ಲಿ ಚೀನಾ-ಭಾರತ ಎರಡೂ ದೇಶಗಳು ಸಮಾನ ಹಕ್ಕು ಹೊಂದಿದೆ ಅಂತ ಭೂತಾನ್ ಪ್ರಧಾನಿ ಹೇಳಿದ್ದಾರೆ. ಬೆಲ್ಜಿಯಂ ಮೂಲದ ಸುದ್ದಿ ಮಾಧ್ಯಮ ಡೈಲಿ ಲಾ ಲಿಬ್ರೆಗೆ ಕೊಟ್ಟ ಸಂದರ್ಶನದಲ್ಲಿ ಭೂತಾನ್ ಪ್ರಧಾನಿ ಲೋಟೆ ಶೆರಿಂಗ್ ಈ ಹೇಳಿಕೆ ಕೊಟ್ಟಿದ್ದಾರೆ. ಡೋಕ್ಲಾಮ್ ಅನ್ನೋದು ಮೂರು ದೇಶಗಳ ಜಂಕ್ಷನ್‌ ಪಾಯಿಂಟ್. ಸಮಸ್ಯೆಯ ಪರಿಹಾರ ಕೇವಲ ಭೂತಾನ್‌ಗೆ ಬಿಟ್ಟದ್ದು ಅಲ್ಲ. ನಾವು ಮೂರು ಜನ ಇದ್ದೀವಿ. ಇದ್ರಲ್ಲಿ ದೊಡ್ಡ ಅಥವಾ ಚಿಕ್ಕ ದೇಶ ಅನ್ನೋದಿಲ್ಲ, ನಾವು ಚರ್ಚೆಗೆ ಸಿದ್ಧವಿದ್ದೇವೆ. ಈ ವಿವಾದ ಬಗೆಹರಿಸುವಲ್ಲಿ ಮೂರೂ ಕೂಡ ಪಾಲುದಾರ ದೇಶಗಳು ಅಂತ ಭೂತಾನ್‌ ಪ್ರಧಾನಿ ಹೇಳಿದ್ದಾರೆ.‌ ಅಂದ್ಹಾಗೆ ವಿವಾದಿತ ಡೊಕ್ಲಾಮ್‌ ಪ್ರದೇಶ ಭೌಗೋಳಿಕವಾಗಿ ಚೀನಾ ಹಾಗೂ ಭೂತಾನ್‌ನ ನಡುವೆನೇ ಇದೆ. ಹಾಗಿದ್ರೂ ಕೂಡ ಭಾರತಕ್ಕೆ ಈ ವಿಚಾರದಲ್ಲಿ ಇಂಟ್ರೆಸ್ಟ್‌ ಯಾಕೆ ಅಂದ್ರೆ ಈ ಡೊಕ್ಲಾಮ್‌ ಪ್ರದೇಶ ಭಾರತಕ್ಕೆ ತುಂಬಾ ಹತ್ತಿರದಲ್ಲಿದೆ. ಹೀಗಾಗಿ ಚೀನಾ ಅಲ್ಲಿ ಯಾವುದೇ ಹೆಜ್ಜೆ ಇಟ್ರೂ ಕೂಡ ಅದು ಭಾರತದ ಪಾಲಿಗೆ ತುಂಬಾ ಚಿಂತೆ ಮಾಡುವ ವಿಚಾರ. ಡೊಕ್ಲಾಮ್‌ನಲ್ಲಿRead More →

masthmagaa.com: ಅಮೆರಿಕ ಹಾಗೂ ಇಸ್ರೇಲ್‌ ನಡುವೆ ಮೊದಲಿನಂತೆ ಸಂಬಂಧ ಸರಿ ಇಲ್ಲ ಅನ್ನೋ ಗುಸು ಗುಸು ಓಡಾಡ್ತಿರೋ ಹೊತ್ತಲ್ಲೇ ಆ ಮುನಿಸು ಬೀದಿ ಜಗಳವಾಗಿ ಮಾರ್ಪಟ್ಟಿದೆ. ಅದ್ರಲ್ಲೂ ಬೈಡೆನ್‌ ನೇತೃತ್ವದ ಅಮೆರಿಕ ಹಾಗೂ ನೆತನ್ಯಾಹು ನೇತೃತ್ವದ ಇಸ್ರೇಲ್‌ ನಡುವೆ ಟಾಕ್‌ ವಾರ್‌ ಫುಲ್‌ ಜೋರಾಗಿದೆ. ಹೊಸ ಕಾನೂನು ಸುಧಾರಣೆಯನ್ನ ವಿರೋಧಿಸಿ ಇಸ್ರೇಲ್‌ನಲ್ಲಿ ನಡೀತಿದ್ದ ಪ್ರತಿಭಟನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮೂಗು ತೂರಿಸಿ ಹೊಸ ಕಾನೂನು ಸುಧಾರಣೆಯನ್ನ ಹಿಂತೆಗೆದುಕೊಳ್ಳಬೇಕು. ಜನ ಈ ರೀತಿ ರೋಡಲ್ಲಿ ಸ್ಟ್ರೈಕ್‌ ಮಾಡ್ಕೊಂಡು ನಿಂತ್ಕೋಬಾರ್ದು. ಇಸ್ರೇಲ್‌ ಸರ್ಕಾರ ಇದನ್ನ ಆದಷ್ಟು ಬೇಗ ಬಗೆಹರಿಸುತ್ತೆ ಅಂತ ಭಾವಿಸ್ತೀನಿ ಅಂತ ಬೈಡೆನ್‌ ಹೇಳಿಕೆ ಕೊಟ್ಟಿದ್ರು. ಇದಕ್ಕೆ ಈಗ ತಿರುಗೇಟು ಕೊಟ್ಟಿರೋ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಒಂದು ಸ್ವತಂತ್ರ ಸಾರ್ವಭೌಮ ದೇಶ. ನಮ್ಮ ಜನರಿಗೆ ಏನ್‌ ಬೇಕು ಏನ್‌ ಬೇಡ ಅನ್ನೋದನ್ನ ನಮ್ಮ ಜನಾನೇ ಡಿಸೈಡ್‌ ಮಾಡ್ತಾರೆ. ನಮಗೆ ಹೊರಗಿನಿಂದ ಆದೇಶ ಬರಬೇಕಿಲ್ಲ. ಅದು ನಮ್ಮ ಬೆಸ್ಟ್‌ ಫ್ರೆಂಡ್‌ ಆದ್ರೂ ಸರಿ. ಒತ್ತಡ ಮಾಡೋಕಾಗಲ್ಲ ಅಂತRead More →