masthmagaa.com: ರಾಜ್ಯದಲ್ಲಿ ಇಂದು 1,875 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 25 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,06,999 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,587ಆಗಿದೆ. ಇಂದು 1,502 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,46,244 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 24,144 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1.55 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3.88 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 3.06 ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 8 ದಕ್ಷಿಣ ಕನ್ನಡ 6 ಹಾಸನ 3 ಕೋಲಾರ 2 ಉತ್ತರ ಕನ್ನಡ 2 ಚಾಮರಾಜನಗರ 1 ಚಿಕ್ಕಬಳ್ಳಾಪುರ 1 ಶಿವಮೊಗ್ಗ 1 ಉಡುಪಿ 1 -masthmagaa.com   Share on: WhatsAppContact Us for AdvertisementRead More →

masthmagaa.com: ದೇಶದಲ್ಲಿರೋ ಹಣದುಬ್ಬಕ್ಕೆ ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಕಾರಣ ಅಂತ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಬೆಲೆಯೇರಿಕೆ ಖಂಡಿಸಿ ವಿಪಕ್ಷಗಳ ಪ್ರತಿಭಟನೆ ಕುರಿತು ಮಾತನಾಡಿದ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್​​​, ಇದು ಒಂದೆರಡು ದಿನಗಳ ಸಮಸ್ಯೆ ಅಲ್ಲ.. ದೇಶದ ಆರ್ಥಿಕತೆಯ ಪತನ 1947ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಜವಾಹರ್​ ಲಾಲ್ ನೆಹರು ಭಾಷಣ ಮಾಡಿದ್ರಲ್ವಾ ಅವತ್ತೇ ಶುರುವಾಯ್ತು ಅಂತ ಹೇಳಿದ್ದಾರೆ. ಅದೇ ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರ ಬಂದ ಬಳಿಕ ಆರ್ಥಿಕತೆ ಬಲಿಷ್ಠವಾಗಿದೆ. ಹಣದುಬ್ಬರ ಕಡಿಮೆಯಾಗಿದೆ. ಜನರ ಆದಾಯ ಜಾಸ್ತಿಯಾಗಿದೆ. ಕಾಂಗ್ರೆಸ್ಸಿಗರು ಸೋನಿಯಾ ಗಾಂಧಿ ಮನೆ ಮುಂದೆ ಹೋಗಿ ಪ್ರೊಟೆಸ್ಟ್​ ಮಾಡ್ಬೇಕು ಅಂತ ಹೇಳಿದ್ದಾರೆ. ಅಂದಹಾಗೆ ಇವತ್ತು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 105 ರೂಪಾಯಿ ಆಗಿದೆ. ಇನ್ನು ಡೀಸೆಲ್ ಬೆಲೆ ಪ್ರತಿ ಲೀಟರ್​​​ಗೆ 95 ರೂಪಾಯಿಯಷ್ಟಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಇಡೀ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರೋ ಪೆಗಾಸಸ್ ಸಂಬಂಧ ಸಲ್ಲಿಕೆಯಾಗಿರೋ ಅರ್ಜಿಗಳನ್ನು ಗುರುವಾರದಿಂದ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್​ ತಿಳಿಸಿದೆ. ಇಸ್ರೇಲಿ ಮೂಲದ ಸ್ಪೈವೇರ್ ಪೆಗಾಸಸ್ ಮೂಲಕ ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಫೋನ್ ಹ್ಯಾಕ್ ಮಾಡಲಾಗಿದೆ ಅನ್ನೋ ವಿಚಾರ ಇತ್ತೀಚೆಗಷ್ಟೇ ಬಹಿರಂಗವಾಗಿತ್ತು. ಈ ಸಂಬಂಧ ವಿಶೇಷ ತನಿಖೆ ನಡೆಯಬೇಕು ಅಂತ ಒತ್ತಾಯಿಸಿ ಸುಪ್ರೀಂಕೋರ್ಟ್​​​ಗೆ ಅರ್ಜಿಗಳು ಸಲ್ಲಿಕೆಯಾಗಿದ್ವು. ಈ ಸಂಬಂಧ ಗುರುವಾರದಿಂದ ಮುಖ್ಯನ್ಯಾಯಮೂರ್ತಿ ಎನ್​​ವಿ ರಮಣ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಈ ಬೆಂಚ್​​​ನ ಮತ್ತೋರ್ವ ಜಡ್ಜ್ ಆಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಗೂಢಚರ್ಯೆ ಮಾಡೋದ್ರಲ್ಲಿ ಕಾಂಗ್ರೆಸ್ ಜೇಮ್ಸ್ ಬಾಂಡ್ ಆಗಿತ್ತು ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತ ಮತ್ತು ಬಾಂಗ್ಲಾದೇಶದ ಹಲ್ದಿಬಾರಿ–ಚಿಲ್ಹಾಹಟಿ ನಡುವಿನ ಸರಕು ಸಾಗಣೆ ರೈಲ್ವೆ ಸಂಚಾರ ಇಂದಿನಿಂದ ಪ್ರಾರಂಭವಾಗಿದೆ. 1965ರಿಂದ ಈ ಸೇವೆಯು ಸ್ಥಗಿತವಾಗಿತ್ತು. ಆದ್ರೆ ಇತ್ತೀಚೆಗೆ ಮರು ಅಭಿವೃದ್ಧಿಪಡಿಸಲಾಗಿದ್ದ ರೈಲು ಮಾರ್ಗವನ್ನು ಕಳೆದ ವರ್ಷ ಡಿಸೆಂಬರ್ 17ರಂದು ಪ್ರಧಾನಿ ಮೋದಿ ಮತ್ತು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಉದ್ಘಾಟಿಸಿದ್ರು. ಅದರಂತೆ ಇಂದಿನಿಂದ ಸಂಚಾರ ಶುರುವಾಗಿದ್ದು, ಜಲ್ಲಿಕಲ್ಲು ಹೊತ್ತ ರೈಲು ಪಶ್ಚಿಮ ಬಂಗಾಳದ ಚಿಲಾಹಟಿಯಿಂದ ಬಾಂಗ್ಲಾದೇಶದ ನಿಲ್‌ಫಮಾರಿ ಜಿಲ್ಲೆಗೆ ತೆರಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ತಿದೆ. ಇಂದಿನಿಂದ ಆಗಸ್ಟ್​ ಅಂತ್ಯದವರೆಗೆ ಈ ಹುದ್ದೆಯಲ್ಲಿ ಭಾರತ ಮುಂದುವರಿಯಲಿದೆ. ಈ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರವಾಗಲಿದ್ದಾರೆ. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಫ್ರಾನ್ಸ್ ಈ ಹುದ್ದೆಯನ್ನು ಅಲಂಕರಿಸಿತ್ತು. ಇದೀಗ ಅಧ್ಯಕ್ಷತೆ ವಹಿಸಿಕೊಂಡಿರೋ ಭಾರತ ಈ ಹಿಂದೆ ಇದ್ದ ಫ್ರಾನ್ಸ್​​ ತನಗೆ ನೀಡಿದ ಸಹಕಾರಕ್ಕೆ ಧನ್ಯವಾದ ತಿಳಿಸಿದೆ. ಇನ್ನು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಭಾರತ ಮೂರು ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತೆ. ಸಾಗರ ಭದ್ರತೆ, ಶಾಂತಿ ಪಾಲನೆ, ಭಯೋತ್ಪಾದನೆ ನಿಗ್ರಹವನ್ನು ಒಳಗೊಂಡಿದೆ ಅಂತ ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರೋ ಟಿಎಸ್ ತಿರುಮೂರ್ತಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಝೇರೈ ಜಿಲ್ಲೆಯಲ್ಲಿ ಹತ್ತಾರು ಉಗ್ರರನ್ನು ಹೊಡೆದುರುಳಿಸಲಾಗಿದೆ. ತಾಲಿಬಾನಿಗಳ ಅಡಗುದಾಣಗಳ ಮೇಲೆ ಏರ್​​ಸ್ಟ್ರೈಕ್ ಮಾಡಿರೋ ವಿಡಿಯೋವೊಂದನ್ನು ಅಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ. ಕಳೆದ 24 ಗಂಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 254 ಉಗ್ರರು ಪ್ರಾಣ ಕಳೆದುಕೊಂಡಿದ್ದು, 97ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅಂತ ಸಚಿವಾಲಯ ತಿಳಿಸಿದೆ. ಇನ್ನು ನಿನ್ನೆ ರಾತ್ರಿ ಕಂದಹಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮೂರ್ಮೂರು ರಾಕೆಟ್ ದಾಳಿ ನಡೆದಿದೆ. ಇದ್ರಲ್ಲಿ ಎರಡು ರಾಕೆಟ್​​ಗಳು ರನ್​​ವೇಗೆ ಬಂದು ಅಪ್ಪಳಿಸಿದ್ದು, ಏರ್​ಪೋರ್ಟ್​​ನಿಂದ ಎಲ್ಲಾ ವಿಮಾನಗಳನ್ನು ರದ್ದುಪಡಿಸಲಾಗಿದೆ. ತಾಲಿಬಾನಿಗಳು ದಿನೇ ದಿನೇ ಹೊಸ ಹೊಸ ಪ್ರದೇಶಗಳನ್ನು ವಶಕ್ಕೆ ಪಡೆಯುತ್ತಿದೆ. ಹೇರಾತ್​, ಲಷ್ಕರ್ ಗಾಹ್​​ ಮತ್ತು ಕಂದಹಾರ್​​ನ್ನು ಕಂಪ್ಲೀಟಾಗಿ ತಾಲಿಬಾನಿಗಳು ಸುತ್ತುವರಿದಿದ್ದು, ಇದ್ರ ನಡುವೆಯೇ ಈ ದಾಳಿ ನಡೆದಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಗ್ರೀನ್​ಲ್ಯಾಂಡ್​​​ನಲ್ಲಿ ನಿರಂತರವಾಗಿ ಮಂಜುಗಡ್ಡೆ​ ಕರಗುತ್ತಿದ್ದು, ಕಳೆದೊಂದು ವಾರದಲ್ಲಿ ಇಡೀ ಫ್ಲೋರಿಡಾವನ್ನು 2 ಇಂಚು ನೀರಿನಿಂದ ಮುಚ್ಚಲು ಸಾಕಾಗುವಷ್ಟು ನೀರು ಬಿಡುಗಡೆ ಮಾಡಿದೆ ಅಂತ ಡೆನ್ಮಾರ್ಕ್​​​​ ಸಂಶೋಧಕರು ತಿಳಿಸಿದ್ದಾರೆ. ತಮ್ಮ ಪೋಲಾರ್ ಪೋರ್ಟಲ್​​​​ ಟ್ವಿಟ್ಟರ್​ ಖಾತೆಯಲ್ಲಿ ಸಂಶೋಧಕರು ತಾವು ಮಾನಿಟರಿಂಗ್ ಮಾಡಿರೋ ವರದಿಯನ್ನು ಹಾಕಿದ್ದಾರೆ. ಅದ್ರಲ್ಲೂ ಕಳೆದ ಬುಧವಾರ ಒಂದೇ ದಿನ ದೊಡ್ಡ ಮಟ್ಟದಲ್ಲಿ ಐಸ್​ ಶೀಟ್ ಕರಗಿದೆ. ಇದು 1950ರ ಬಳಿಕ ಒಂದೇ ದಿನದಲ್ಲಿ ಇಷ್ಟು ಐಸ್​ ಶೀಟ್ ಕರಗಿರೋದು ಇದೇ ಮೊದಲು ಅಂತ ಕೂಡ ತಜ್ಞರು ಮಾಹಿತಿ ನೀಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತದ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಟೋಕ್ಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಮ್ಮೆ ಪದಕ ತಂದು ಕೊಟ್ಟಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾದ ಬಿಂಗ್​​ಜಿಯಾವೋರನ್ನು 21-13, 21-15 ನೇರ ಸೆಟ್​​​ಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ಮೂಲಕ ಟೋಕ್ಯೋ ಒಲಿಂಪಿಕ್ಸ್​​ನಲ್ಲಿ ಭಾರತ 2 ಪದಕ ಗೆದ್ದಂತಾಗಿದೆ. ಈ ಹಿಂದೆ ವೇಯ್ಟ್​ಲಿಫ್ಟರ್ ಮೀರಾಭಾಯಿ ಚಾನು ಸಿಲ್ವರ್ ಪದಕ ಗೆದ್ದುಕೊಂಡಿದ್ರು. ಅಂದಹಾಗೆ ಪಿವಿ ಸಿಂಧು 2016ರ ರಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟಿದ್ದರು. ಇದೀಗ ಕಂಚು ಗೆದ್ದಿದ್ದು ಒಲಿಂಪಿಕ್ಸ್​ನಲ್ಲಿ ಎರಡು ಪದಕಗಳನ್ನು ಪಡೆದ ಏಕೈಕ ಭಾರತೀಯ ಯುವತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಪ್ರಧಾನಿ ಮೋದಿ, ಪಿವಿ ಸಿಂಧು ಭಾರತದ ಹೆಮ್ಮೆ. ನಮ್ಮ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಅಂತ ಹೇಳಿದ್ದಾರೆ. ಇನ್ನು ಪುರುಷರ ವಿಭಾಗದ ಹಾಕಿ ಕ್ವಾರ್ಟರ್​​ಫೈನಲ್ ಪಂದ್ಯದಲ್ಲಿ ಭಾರತ ಬ್ರಿಟನ್​​ನ್ನು ಸೋಲಿಸಿ, ಸೆಮಿಫೈನಲ್​​ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ರೋಚಕ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ವಿಜಯಪತಾಕೆ ಹಾರಿಸಿದೆ. ಆಗಸ್ಟ್​​ 3ರಂದುRead More →

masthmagaa.com: ಕೊರೋನಾ ಎರಡನೇ ಅಲೆಯಿಂದ ಕಂಗೆಟ್ಟು ಹೋಗಿದ್ದ ಮಹಾರಾಷ್ಟ್ರದಲ್ಲೀಗ ಮೊಟ್ಟ ಮೊದಲ ಝೀಕಾ ವೈರಸ್ ಪತ್ತೆಯಾಗಿದೆ. ಪುಣೆಯ ಪುರಂದರ ಮೂಲದ 50 ವರ್ಷದ ಮಹಿಳೆಯಲ್ಲಿ ಝೀಕಾ ಮತ್ತು ಚಿಕನ್ ಗುನ್ಯ ಒಟ್ಟೊಟ್ಟಿಗೆ ಕಾಣಿಸಿಕೊಂಡಿದೆ. ಸದ್ಯ ಮಹಿಳೆ ಕಂಪ್ಲೀಟಾಗಿ ಚೇತರಿಸಿಕೊಂಡಿದ್ದು, ಆಕೆ ಮತ್ತು ಆಕೆಯ ಕುಟುಂಬದವರಲ್ಲಿ ಯಾವುದೇ ಲಕ್ಷಣಗಳಿಲ್ಲ ಅಂತ ಮಹಾರಾಷ್ಟ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಅಂದಹಾಗೆ ಜುಲೈ ಮೊದಲ ವಾರದಲ್ಲಿ ಇಲ್ಲಿನ ಹಲವು ಜನರಲ್ಲಿ ಜ್ವರ ಕಾಣಿಸಿಕೊಂಡಿತ್ತು. ಇವರ ಪೈಕಿ ಐವರ ಸ್ಯಾಂಪಲ್​​ನ್ನು ಪರೀಕ್ಷೆಗೆ ಅಂತ ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಇವರ ಪೈಕಿ ಮೂವರಲ್ಲಿ ಚಿಕನ್​ಗುನ್ಯಾ ಪತ್ತೆಯಾಗಿತ್ತು. ಹೀಗಾಗಿ ಜುಲೈ 27 ಮತ್ತು 29ರ ನಡುವೆ ಈ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿ, 41 ಮಂದಿಯ ಸ್ಯಾಂಪಲ್ ಸಂಗ್ರಹಿಸಿತ್ತು. ಇವರ ಪೈಕಿ 25 ಮಂದಿಗೆ ಚಿಕನ್ ಗುನ್ಯಾ, ಮೂವರಲ್ಲಿ ಡೆಂಗ್ಯು ಮತ್ತು ಒಬ್ಬರಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಕಳೆದ ಹಲವು ದಿನಗಳಿಂದ ಅಬ್ಬರಿಸಿದ್ದ ಮಳೆರಾಯ ರಾಜ್ಯದಲ್ಲಿ ಶಾಂತವಾಗ್ತಿದ್ದಾನೆ. ಮುಂದಿನ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಕಡಿಮೆಯಾಗಲಿದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಆದ್ರೆ ಉತ್ತರ ಭಾರತದಲ್ಲಿ ಮಳೆಯಬ್ಬರ ತುಂಬಾ ಜೋರಾಗಿದೆ. ದೆಹಲಿಯಲ್ಲಿ ಭಾರಿ ಮಳೆಗೆ ರಸ್ತೆಗಳೆಲ್ಲಾ ನೀರಲ್ಲಿ ಮುಳುಗಿಹೋಗಿವೆ. ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಂದಿನ 4 ದಿನಗಳ ಕಾಲ ಉತ್ತರ ಮತ್ತು ಮಧ್ಯಭಾರತದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. -masthmagaa.com Share on: WhatsAppContact Us for AdvertisementRead More →