ರೈಲಿಗೆ ಡಿಕ್ಕಿಯಾಗಿ ಸತ್ತ ಭಿಕ್ಷುಕ..ಗುಡಿಸಲಲ್ಲಿ ಸಿಕ್ಕ ದುಡ್ಡೆಷ್ಟು..?
ಮುಂಬೈನ ಗೋವಂಡಿಯಲ್ಲಿ ರೈಲು ಡಿಕ್ಕಿ ಹೊಡೆದು ಓರ್ವ ಭಿಕ್ಷುಕ ಸಾವನ್ನಪ್ಪಿದ್ದಾರೆ. ಆತನ ಗುರುತು ಪತ್ತೆ ಹಚ್ಚಿ ಮನೆಗೆ ಹೋದ ರೈಲ್ವೆ ಪೊಲೀಸರು ಶಾಕ್ ಆಗಿದ್ದಾರೆ. ಆತನ ಗುಡಿಸಲಿನಲ್ಲಿದ್ದ ಚೀಲಗಳನ್ನು ತೆಗೆದು ನೋಡಿದಾಗ ಬರೋಬ್ಬರಿ 2 ಲಕ್ಷ ರೂಪಾಯಿಯಷ್ಟು ಚಿಲ್ಲರೆ ಮತ್ತು ನೋಟುಗಳು ಪತ್ತೆಯಾಗಿವೆ. ಇಷ್ಟೇ ಅಲ್ಲ. ಭಿಕ್ಷುಕನ ಮನೆಯಲ್ಲಿ ಬ್ಯಾಂಕ್ ಪಾಸ್ ಬುಕ್ ಸಿಕ್ಕಿದೆ. ಅದರಲ್ಲಿ 8 ಲಕ್ಷದ 77 ಸಾವಿರ ರೂಪಾಯಿ ಜಮೆ ಮಾಡಿರುವ ರಶೀದಿ ಕೂಡ ಸಿಕ್ಕಿದೆ. ಈತ ಮುಂಬೈನ ಲೋಕಲ್ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ರೈಲ್ವೆ ಹಳಿ ದಾಟುವಾಗ ಡಿಕ್ಕಿಯಾಗಿ ಆತ ಸಾವನ್ನಪ್ಪಿದ್ದ. ಪೊಲೀಸರಿಗೆ ಭಿಕ್ಷುಕ ಆಜಾದ್ ಗೆ ಸೇರಿದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಸೀನಿಯರ್ ಸಿಟಿಜನ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ರಾಜಸ್ಥಾನದ ವಿಳಾಸ ಬರೆಯಲಾಗಿದೆ. Share on: WhatsAppContact Us for AdvertisementRead More →