masthmagaa.com: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ವಿರೋಧಿಸಿ 85 ವರ್ಷ ವಯಸ್ಸಿನ ವೃದ್ಧ ತಂಗವೇಲ್‌ ಅನ್ನೋರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಡಿಎಂಕೆ ಕಚೇರಿ ಬಳಿ ಮೈಗೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂಗವೇಲ್‌ ಅವ್ರು ಡಿಎಂಕೆಯ ಸಕ್ರಿಯ ಸದಸ್ಯರಾಗಿದ್ದು, ಶಿಕ್ಷಣ ಮಾಧ್ಯಮವಾಗಿ ಹಿಂದಿಯನ್ನ ಅನುಷ್ಠಾನಗೊಳಿಸೋ ಕೇಂದ್ರ ಸರ್ಕಾರದ ಕ್ರಮದಿಂದ ಆಘಾತಗೊಂಡಿದ್ದರು ಎನ್ನಲಾಗಿದೆ. ಹಾಗೂ ಆತ್ಮಹತ್ಯೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಉದ್ದೇಶಿಸಿ ಬರೆದ ಬ್ಯಾನರ್‌ ಹಿಡಿದಿದ್ರು. ಮೋದಿ ಸರ್ಕಾರವೇ, ಕೇಂದ್ರ ಸರ್ಕಾರವೇ ನಮಗೆ ಹಿಂದಿ ಬೇಡ. ನಮ್ಮ ಮಾತೃಭಾಷೆ ತಮಿಳು. ಹಿಂದಿ ವಿದೂಷಕರ ಭಾಷೆ. ಹಿಂದಿ ಹೇರಿಕೆಯಿಂದ ನಮ್ಮ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗಲಿದೆ. ಹಿಂದಿಯನ್ನ ತೊಲಗಿಸಿ ಅನ್ನೋ ಸಂದೇಶ ಬ್ಯಾನರ್‌ನಲ್ಲಿ ಇತ್ತು ಅಂತ ವರದಿಯಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಯೋಗ ಗುರು ಬಾಬಾ ರಾಮದೇವ್‌ ಮಹಿಳೆಯರ ಉಡುಪುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ. ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಸಲ್ವಾರ್‌ನಲ್ಲಿಯೂ ಚೆನ್ನಾಗಿ ಕಾಣ್ತಾರೆ ಹಾಗೂ ನನ್ನ ದೃಷ್ಟಿಯಲ್ಲಿ ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣ್ತಾರೆ ಅಂತ ಹೇಳಿದ್ದಾರೆ. ಪತಂಜಲಿ ಯೋಗಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ಥಾಣೆಯಲ್ಲಿ ಆಯೋಜಿಸಿದ್ದ ಯೋಗ ವಿಜ್ಞಾನ ಶಿಬಿರದಲ್ಲಿ ಮಾತಾಡುವಾಗ ಹೀಗೆ ಹೇಳಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದವರು ಮುಜುಗರಕ್ಕೀಡಾಗಿದ್ದಾರೆ. ಅವರ ಹೇಳಿಕೆಯ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ತೀವ್ರ ಆಕ್ರೋಶ ಹೊರಹಾಕಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಪುಣೆಯ ಪ್ರಸಿದ್ದ Serum Institute of India (SII) ಫಾರ್ಮಸಿಟಿಕಲ್‌ ಕಂಪನಿ ವಂಚಕರ ಬಲೆಗೆ ಬಿದ್ದು 1 ಕೋಟಿ ಹಣ ಕಳೆದುಕೊಂಡಿದೆ. ಕಂಪನಿಯ ಸಿಇಒ ಅದಾರ್‌ ಪೂನಾವಾಲಾ ಅಂತ ಹೇಳ್ಕೊಂಡು ವಂಚಕರು ಕಂಪನಿ ಡೈರಕ್ಟರ್‌ ಸತೀಶ್‌ ದೇಶ್‌ಪಾಂಡೆಗೆ ಮೆಸೇಜ್‌ ಮಾಡಿದ್ದಾರೆ. ಹಾಗೂ 7 ಅಕೌಂಟ್‌ಗಳಿಗೆ ಹಣ ಕಳಿಸಿ ಅಂತ ಮೆಸೇಜ್‌ನಲ್ಲಿ ಹೇಳಿದ್ದಾರೆ. ಇನ್ನು ಸಿಇಒ ಪೂನಾವಾಲಾ ಮೆಸೇಜ್‌ ಮಾಡಿರೋದು ಅಂತ ನಂಬಿದ್ದ ದೇಶ್‌ಪಾಂಡೆ 1.01 ಕೋಟಿ ಹಣವನ್ನ ಟ್ರಾನ್ಸ್‌ಫರ್‌ ಮಾಡಿದ್ದಾರೆ. ಅದು ಫೇಕ್‌ ಮೆಸೇಜ್‌ ಅಂತ ನಂತರ ತಿಳಿದು ಬಂದಿದೆ. ಕೇಸ್‌ ದಾಖಲಾಗಿದ್ದು ಈ ಸಂಬಂಧ 7 ಜನ ಆರೋಪಿಗಳನ್ನ ಬಂಧಿಸಲಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮುಂಬೈನಲ್ಲಿ ಮೀಸಲ್ಸ್‌ ಅಥ್ವಾ ದಡಾರ ಕೇಸ್‌ಗಳು ಹೆಚ್ಚಾಗ್ತಿರೊ ಹಿನ್ನಲೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕೋಕೆ ಮುಂಬೈ ಮಹಾನಗರ ಪಾಲಿಕೆ ಮುಂದಾಗಿದೆ. ದಡಾರ ಹೆಚ್ಚಿರೋ ಏರಿಯಾಗಳಲ್ಲಿ 6 ತಿಂಗಳಿನಿಂದ 5 ವರ್ಷದ ಒಳಗಿನ ಸುಮಾರು 1.2 ಲಕ್ಷ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ವ್ಯಾಕ್ಸಿನ್‌ ಹಾಕೋಕೆ ಪ್ಲಾನ್‌ ಮಾಡಿದೆ. 10% ಗಿಂತ ಜಾಸ್ತಿ ಕೇಸ್‌ಗಳು ಇರೋ ಏರಿಯಾದಲ್ಲಿ 6 ರಿಂದ 9 ತಿಂಗಳಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಹೊಂದಿರೋ MRCV ವ್ಯಾಕ್ಸಿನ್‌ ನೀಡೋಕೆ ಅಲ್ಲಿನ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ. ಆದರೆ ಕೆಲವು ಕಡೆ 10% ಗಿಂತ ಕಡಿಮೆ ಕೇಸ್‌ಗಳಿವೆ. ಹಾಗಂತ ಮಕ್ಕಳಿಗೆ ವ್ಯಾಕ್ಸಿನ್‌ ಕೊಡದೇ ಇರೋಕೆ ಆಗಲ್ಲ. ಹಾಗಾಗಿ ಈ ಶಿಫಾರಸ್ಸನ್ನ ಇನ್ನೊಮ್ಮೆ ಪರೀಶೀಲನೆ ಮಾಡಿ ಅಂತ ಬಿಎಂಸಿ, ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದೆ. ಅಂದ್ಹಾಗೆ ಇತ್ತೀಚೆಗೆ ಡಬ್ಲ್ಯೂಎಚ್‌ಒ ಕೂಡ ಜಾಗತಿಕವಾಗಿ ದಡಾರ ಕೇಸ್‌ಗಳು ಜಾಸ್ತಿಯಾಗೋ ಸಾಧ್ಯತೆ ಹೆಚ್ಚಿದೆ ಅಂತ ಎಚ್ಚರಿಸಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಓಷ್ಯನ್‌ಸ್ಯಾಟ್‌- 3 ಸೇರಿದಂತೆ ಇತರ 8 ನ್ಯಾನೋ ಉಪಗ್ರಹಗಳನ್ನ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಲಾಂಚ್‌ ಬಳಿಕ ಓಷ್ಯನ್‌ಸ್ಯಾಟ್‌ ಯಶಸ್ವಿಯಾಗಿ ನಿರ್ಧರಿತ ಕಕ್ಷೆಗೆ ಸೇರಿದೆ ಅಂತ ನಾಸಾ ಹೇಳಿದೆ. ಅಂದ್ಹಾಗೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಲಾಂಚ್‌ಪ್ಯಾಡ್‌ನಿಂದ ಉಪಗ್ರಹಗಳನ್ನ ಹೊತ್ತ PSLV-C54 ರಾಕೆಟ್ ಉಡಾವಣೆ ಆಗಿತ್ತು. ಇದ್ರಲ್ಲಿ ಓಷ್ಯನ್‌ಸ್ಯಾಟ್‌ ಹೊರತುಪಡಿಸಿ ಆನಂದ್‌, ಥೈಬೋಲ್ಟ್‌, INS2-B ಒಳಗೊಂಡ 8 ನ್ಯಾನೋ ಸ್ಯಾಟಲೈಟ್‌ಗಳಿವೆ. ಅಂದ್ಹಾಗೆ ಓಷ್ಯನ್‌ಸ್ಯಾಟ್‌ 1 ಉಪಗ್ರಹವನ್ನ 1999ರಲ್ಲಿ ಹಾಗೂ ಓಷ್ಯನ್‌ಸ್ಯಾಟ್‌ 2 ಅನ್ನ 2009ರಲ್ಲಿ ಉಡಾವಣೆ ಮಾಡಲಾಗಿತ್ತು. -masthmagaa.com Share on: WhatsAppContact Us for AdvertisementRead More →

mastmagaa.com: ಕರ್ನಾಟಕ-ಮಹಾರಾಷ್ಟ್ರಕ್ಕೆ ಸಂಬಂಧಿಸದಂತೆ ಬೆಳಗಾವಿ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಜಾಸ್ತಿಯಾಗ್ತಾನೇ ಇದೆ. ಪುಣೆಯಿಂದ ಅಥಣಿಗೆ ಬರ್ತಿದ್ದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿಗೆ ಮಹಾರಾಷ್ಟ್ರ ಗಡಿಯಲ್ಲಿ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದ್ರಿಂದ ಬಸ್ಸಿನ ಮುಂಭಾಗದ ಗಾಜು ಹಾಗೂ ಎರಡು ಕಿಟಕಿಗಳು ಒಡೆದಿವೆ. ಇತ್ತ ಗಡಿ ವಿವಾದ ಬಗ್ಗೆ ಮಾತಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾವು ಸಂವಿಧಾನ ಹಾಗೂ ಕಾನೂನು ಬದ್ದವಾಗಿ ಇದ್ದೇವೆ. ಕರ್ನಾಟಕದ ಭೂ ಪ್ರದೇಶದಲ್ಲಿ ಯಾವುದೇ ಬದಲಾವಣೆಗಳಾಗಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಬಗ್ಗೆ ಸರ್ವಪಕ್ಷ ಹಾಗೂ ಕಾನೂನು ತಜ್ಞರ ಸಭೆ ಕರೆದಿದ್ದೇನೆ. ಯಾವ ವಿಷಯಗಳನ್ನ ಮಂಡಿಸಬೇಕು ಅನ್ನೊ ಬಗ್ಗೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಮಹಾರಾಷ್ಟ್ರದಲ್ಲಿರೊ ಕನ್ನಡಿಗರು ಕರ್ನಾಟಕದ ಹೊಸ ನಕ್ಷೆ ತಯಾರಿಸಿ ಶೇರ್‌ ಮಾಡಿದ್ದಾರೆ. ಕರ್ನಾಟಕಕ್ಕೆ ಸೋಲಾಪುರ, ಉಸ್ಮನಬಾದ್​, ಲಾತೂರು, ಸಂಗಲ್ಕಿ ಮತ್ತು ಕೊಲ್ಹಾಪುರ ಜಿಲ್ಲೆಗಳನ್ನ ಸೇರಿಸಿರೊ ಹೊಸ ನಕ್ಷೆ ಎಲ್ಲಡೆ ವೈರಲ್‌ ಆಗ್ತಿದೆ. ಇನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮಗಳು ಕರ್ನಾಟಕ ರಾಜ್ಯRead More →

masthmagaa.com: ಗುಜರಾತ್‌ನ ವಿಧಾನಸಭಾ ಚುನಾವಣಾ ಭಾಗವಾಗಿ ಪಕ್ಷದ ಪ್ರಣಾಳಿಕೆಯನ್ನ ಬಿಜೆಪಿ ಬಿಡುಗಡೆ ಮಾಡಿದೆ. ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಿದ್ರೆ, ಏಕರೂಪ ನಾಗರಿಕ ಸಂಹಿತೆ ಅನುಷ್ಠಾನಗೊಳಿಸುವುದು, 20 ಲಕ್ಷ ಉದ್ಯೋಗ ಸೃಷ್ಟಿಸೋದು ಸೇರಿದಂತೆ ಹಲವು ಭರವಸೆಗಳನ್ನ ಮತದಾರರಿಗೆ ಬಿಜೆಪಿ ನೀಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿಆರ್ ಪಾಟೀಲ್ ಸೇರಿ ಪ್ರಣಾಳಿಕೆ ರಿಲೀಸ್‌ ಮಾಡಿದ್ದಾರೆ. ಇನ್ನು ನಾವು ಏನು ಭರವಸೆ ನೀಡಿದ್ದೇವೆವೋ ಅದನ್ನ ಮಾಡಿಯೇ ಸಿದ್ದ. ಇದುವೇ ನಮ್ಮ ವಿಶೇಷತೆ ಅಂತ ಪ್ರಣಾಳಿಕೆ ಬಿಡುಗಡೆ ಬಳಿಕ ನಡ್ಡಾ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಇಂದು ನವೆಂಬರ್‌ 26ರಂದು ಭಾರತದ ಸಂವಿಧಾನವನ್ನ ಅಂಗೀಕರಿಸಲ್ಪಟ್ಟ ದಿನ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಸಂವಿಧಾನ ದಿನವನ್ನ ಆಚರಿಸಲಾಗಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಮಾತಾಡಿದ ಪ್ರಧಾನಿ ಮೋದಿ, ಸಂವಿಧಾನವೇ ಭಾರತದ ಬಹುದೊಡ್ಡ ಶಕ್ತಿ. ಭಾರತ ಪ್ರಜಾಪ್ರಭುತ್ವದ ತಾಯಿ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಇಂದು ಮುಂಬೈ ಭಯೋತ್ಪಾದಕ ದಾಳಿ ನಡೆದು 14 ವರ್ಷಗಳಾಗಿವೆ. ಭಾರತ ತನ್ನ ಸಂವಿಧಾನ ಮತ್ತು ನಾಗರಿಕರ ಹಕ್ಕುಗಳನ್ನ ಸಂಭ್ರಮಿಸುತ್ತಿರೊ ಸಂದರ್ಭದಲ್ಲೇ, ಶತ್ರುಗಳು ಭಾರತದ ಮೇಲೆ ಅತಿದೊಡ್ಡ ದಾಳಿಯನ್ನ ನಡೆಸಿದ್ರು. ದಾಳಿಯಲ್ಲಿ ಜೀವ ಕಳೆದುಕೊಂಡವರಿಗೆ ನನ್ನ ಗೌರವ ನಮನಗಳನ್ನ ಸಲ್ಲಿಸುತ್ತೇನೆ ಅಂತ ಮೋದಿ ಹೇಳಿದ್ದಾರೆ. ಇತ್ತ ರಾಜ್ಯದಲ್ಲೂ ಸಂವಿಧಾನ ದಿನವನ್ನ ಆಚರಿಸಲಾಗಿದೆ. ಸಂವಿಧಾನದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸೋಕೆ, ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಗ್ರಂಥಾಲಯಗಳಿಗೆ ಸಂವಿಧಾನದ ಪ್ರತಿಯನ್ನ ಪೂರೈಸಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತದ ಇತಿಹಾಸವನ್ನು ಪಿತೂರಿ ಮಾಡಿ ತಿರುಚಲಾಗಿದ್ದು, ಸ್ವತಂತ್ರದ ನಂತರವೂ ಅದನ್ನೇ ಕಲಿಸಲಾಗಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಸ್ಸಾಂನ ಅಹೊಮ್‌ ಜನರಲ್‌ ಲಚಿತ್‌ ಬರ್ಫುಕನ್‌ ಅವ್ರ 400ನೇ ಜನ್ಮದಿನಾಚರಣೆ ವೇಳೆ ಮೋದಿ ಮಾತಾಡಿದ್ದಾರೆ. ದೇಶವನ್ನ ಲೂಟಿ ಮಾಡಲಾಯಿತು ಅಂತ ಹೇಳಲಾಗಿದೆ. ಆದ್ರೆ ಹಲವಾರು ವೀರರ ಬಗ್ಗೆ ಮಾಹಿತಿಯೇ ಇಲ್ಲ. ಉದ್ದೇಶ ಪೂರ್ವಕವಾಗಿ ಇತಿಹಾಸವನ್ನ ಮರೆಮಾಚಲಾಗಿದೆ. ಮೊಘಲರ ವಿರುದ್ಧ ಹೋರಾಡಿದ್ದ ವೀರ ಲಚಿತ್‌ ಬರ್ಫುಕನ್‌ ಪ್ರಮುಖರು ಅಲ್ವಾ? ಅವ್ರ ಬಗ್ಗೆ ಯಾಕೆ ಇತಿಹಾಸದಲ್ಲಿ ಮಾಹಿತಿ ಇಲ್ಲ. ಮೊಘಲರ ವಿರುದ್ಧ ಅಸ್ಸಾಂನ ಸಾವಿರಾರು ಜನರ ತ್ಯಾಗ ಮುಖ್ಯವಲ್ಲವೇ? ಅಂತ ಮೋದಿ ಪ್ರಶ್ನಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡ್ಬೇಕು ಅಂತ ಕೋರಿ ಸಲಿಂಗ ದಂಪತಿಯೊಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಮದುವೆ ಕಾಯಿದೆ ಅಡಿಯಲ್ಲಿ ತಮಗೆ ಮಾನ್ಯತೆ ನೀಡ್ಬೇಕು. ಶಾಸ್ತ್ರೋಕ್ತವಾಗಿ ಮದುವೆ ಆಗೋಕೆ ಅವಕಾಶ ನೀಡ್ಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದಾರೆ. LGBTQ+ ಸಮುದಾಯಕ್ಕೆ ಸೇರಿದವರು ತಮಗೆ ಇಷ್ಟವಾದ ವ್ಯಕ್ತಿಯ ಜೊತೆಗೆ ಮದುವೆ ಆಗೋ ಆಯ್ಕೆಯ ಹಕ್ಕನ್ನ ನೀಡ್ಬೇಕು ಅಂತ ಅರ್ಜಿಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ತಾವು ಪರಸ್ಪರ ಪ್ರೀತಿಸಿ 17 ವರ್ಷದಿಂದ ಒಟ್ಟಿಗೆ ಇದ್ರೂ ನಮ್ಮ ಮದುವೆಯನ್ನ ಪರಿಗಣಿಸೋ ಕಾನೂನು ಇಲ್ಲ. ಹಾಗೂ ನಾವು ಇಬ್ಬರು ಮಕ್ಕಳನ್ನ ಬೆಳೆಸುತ್ತಿದ್ದೇವೆ. ಆದ್ರೆ ಅವ್ರ ಜೊತೆ ನಮಗೆ ಪೋಷಕರ ಸಂಬಂಧ ಹೊಂದೋಕೆ ಅವಕಾಶ ಇಲ್ಲ ಅಂತ ಸಲಿಂಗ ದಂಪತಿ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರಕ್ಕೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. -masthmagaa.com Share on: WhatsAppContact Us for AdvertisementRead More →