masthmagaa.com: ಸ್ಟಾರ್‌ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋಗೆ ಭರ್ಜರಿ ಆಫರ್‌ ಬಂದಿದೆ. ಸೌದಿ ಅರೇಬಿಯನ್‌ ಕ್ಲಬ್‌ ಅಲ್‌ ನಸ್ಸರ್‌, ಫಿಫಾ ವರ್ಲ್ಡ್‌ಕಪ್‌ ಮುಗಿದ ನಂತರ 3 ವರ್ಷ ತಮ್ಮ ಕ್ಲಬ್‌ ಪರ ಆಡೋಕೆ 225 ಮಿಲಿಯನ್‌ ಡಾಲರ್‌ ಅಂದ್ರೆ ಸುಮಾರು 1.8 ಸಾವಿರ ಕೋಟಿ ರೂಪಾಯಿ ಆಫರ್‌ ನೀಡಿದೆ ಅಂತ ವರದಿಯಾಗಿದೆ. ಈ ಸಂಬಂಧ ಸೌದಿ ಕ್ಲಬ್‌ ಮತ್ತು ರೊನಾಲ್ಡೊ ಸಂಪರ್ಕದಲ್ಲಿದ್ದು, ಈ ಆಫರ್‌ನ್ನ ರೊನಾಲ್ಡೊ ಫೈನಲ್‌ ಮಾಡೋದು ಬಾಕಿ ಇದೆ. ಸೌದಿ ಅರೇಬಿಯನ್‌ ಕ್ಲಬ್‌ ಅಲ್‌ ನಸ್ಸರ್‌, ಏಷ್ಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್‌ ಕ್ಲಬ್‌ ಆಗಿದ್ದು 9 ಲೀಗ್‌ ಟೈಟಲ್ಸ್‌ನ್ನ ಗೆದ್ದಿದೆ. ಅಂದ್ಹಾಗೆ ಇತ್ತೀಚೆಗೆ ರೊನಾಲ್ಡೊ, ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ ಇಂದ ಹೊರ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್‌ ನಸ್ಸರ್‌ ಈ ಆಫರ್‌ ನೀಡಿದೆ ಎನ್ನಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬೆಲ್ಜಿಯಂ ರಾಜಧಾನಿ ಬ್ರುಸೆಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕತಾರ್‌ನಲ್ಲಿ ನಡೀತಿರೋ ಪುಟ್ಬಾಲ್‌ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ ಮೊರಾಕ್ಕೋ ವಿರುದ್ದ 2-0 ಅಂತರದಲ್ಲಿ ಹೀನಾಯವಾಗಿ ಸೋತಿದೆ. ಇದಕ್ಕೆ ಸಿಡಿದಿರೋ ಬೆಲ್ಜಿಯಂ ಅಭಿಮಾನಿಗಳು ಮೊರಾಕ್ಕೋ ಬಾವುಟಗಳನ್ನ ವಿರೂಪಗೊಳಿಸಿ, ತಮ್ಮ ತಂಡದ ವಿರುದ್ದವೂ ಆಕ್ರೋಶ ಹೊರಹಾಕಿದ್ದಾರೆ. ಸಾಲದೂ ಅಂತ ಬಸ್‌ಗೆ ಕಲ್ಲು ತೂರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನ ನಿಯಂತ್ರಿಸೋಕೆ ಅಲ್ಲಿನ ಭದ್ರತಾ ಪಡೆಗಳು ಹರಸಾಹಸ ಮಾಡ್ತಿದ್ದು ಈಗಾಗಲೇ ಅನೇಕರನ್ನ ಬಂಧಿಸಿ ಎಳೆದುಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಪತ್ರಕರ್ತರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಬೆಲ್ಜಿಯನ್‍ನಲ್ಲಿ ಹಲವು ನಿರ್ಬಂಧಗಳನ್ನ ವಿಧಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವತ್ತಾ ಸಾಗ್ತಿದೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಕತಾರ್‌ನಲ್ಲಿ ನಡಿತಿರೋ ಫಿಫಾ ವಿಶ್ವಕಪ್‌ನಲ್ಲಿ ಸೌದಿ ಅರೇಬಿಯಾ, ಇತ್ತೀಚೆಗೆ 2 ಬಾರಿ ಚಾಂಪಿಯನ್ಸ್‌ ಟೀಂ ಅರ್ಜಂಟಿನಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಗಳಿಸಿತ್ತು. ಇದ್ರಿಂದ ಖುಷಿಯಾದ ಸೌದಿ ಯುವರಾಜ ಅವತ್ತು ಸರ್ಕಾರಿ ರಜಾದಿನ ಬೇರೆ ಘೋಷಿಸಿದ್ರು. ಇದೀಗ ಫುಟ್‌ಬಾಲ್‌ ಲೆಜೆಂಡ್‌ ಲಿಯೋನಲ್‌ ಮೆಸ್ಸಿ ನೇತೃತ್ವದ ಅರ್ಜಂಟೀನಾ ತಂಡವನ್ನ ಸೋಲಿಸಿ ಭರ್ಜರಿಯಾಗಿ ಗೆಲವು ಸಾಧಿಸಿದ ಎಲ್ಲಾ ಆಟಗಾರರಿಗೆ ರೋಲ್ಸ್‌ ರಾಯ್ಸ್ ಕಾರ್‌ ನೀಡೋದಾಗಿ ಸೌದಿ ಯುವರಾಜ ಅನೌನ್ಸ್‌ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ನಿನ್ನೆ ನಡೆದ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ ತಂಡದ ನಾಯಕ, ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ವಿಶ್ವದಾಖಲೆಯೊಂದನ್ನ ತಮ್ಮ ಹೆಸರನಲ್ಲಿ ಬರೆದುಕೊಂಡಿದ್ದಾರೆ. ಘಾನಾ ತಂಡದ ವಿರುದ್ದದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ 5 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ದೇ ಘಾನಾ ವಿರುದ್ದ ಪೋರ್ಚುಗಲ್‌ ತಂಡದ ಗೆಲುವಿಗೂ ಕಾರಣರಾಗಿದ್ದಾರೆ. ಈ ಮೊದಲು 2006, 2010, 2014 ಹಾಗೂ 2018ರಲ್ಲಿ ಆಡಿದ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿ ಬ್ರೆಜಿಲ್‌ನ ಪೆಲೆ, ಜರ್ಮನಿಯ ಉವೆ ಸೀಲೆರ್‌ ಮತ್ತು ಮೆರೊಸ್ಲಾವ್‌ ಕ್ಲೋಸ್‌ ಅವರೊಂದಿಗೆ ದಾಖಲೆಯನ್ನ ಹಂಚಿಕೊಂಡಿದ್ರು. ಇದೀಗ 5ನೇ ವಿಶ್ವಕಪ್‌ ಪಂದ್ಯದಲ್ಲಿ ಗೋಲು ಗಳಿಸಿ ಉಳಿದ ಅಟಗಾರರನ್ನ ಹಿಂದಿಕ್ಕಿದ್ದಾರೆ. ಅಂದ್ಹಾಗೆ ಸ್ಟಾರ್‌ ಆಟಗಾರ ಇತ್ತೀಚಿಗಷ್ಟೇ ಮ್ಯಾಂಚೆಸ್ಟರ್‌ ಯುನೈಟೆಡ್‌ ಕ್ಲಬ್‌ನ್ನ ತೊರೆದಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಮೂರನೇ ಮತ್ತು ಅಂತಿಮ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನ 1-0 ಅಂತರದಿಂದ ಭಾರತ ಕೈವಶ ಮಾಡಿಕೊಂಡಿದೆ. ಅಂದ್ಹಾಗೆ ಮಳೆಯಿಂದಾಗಿ ಮೊದಲ ಪಂದ್ಯವನ್ನ ರದ್ದುಗೊಳಿಸಲಾಗಿತ್ತು. ಇದಾದ ಬಳಿಕ 2ನೇ ಪಂದ್ಯವನ್ನ ಭರ್ಜರಿಯಾಗಿ ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಇಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲ್ಯಾಂಡ್‌ 19.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟ್‌ ಆಯ್ತು. ಆದರೆ ಈ ನಂತರ ಮಳೆ ಬಂದ ಕಾರಣದಿಂದಾಗಿ ಪಂದ್ಯವನ್ನ ಆಡೋಕೆ ಆಗ್ಲಿಲ್ಲ. ಹೀಗಾಗಿ ಅಂಪೈರ್‌ಗಳು ಪಂದ್ಯವನ್ನ ಟೈ ಅಂತ ಘೋಷಿಸಿದ್ರು. -masthmagaa.com Share on: WhatsAppContact Us for AdvertisementRead More →

masthmagaa.com: ಪಾಕಿಸ್ತಾನಕ್ಕೆ ಕ್ರಿಕೆಟ್‌ ಟೀಮ್‌ಗಳು ಪ್ರವಾಸ ಮಾಡೋದೆ ಹೆಚ್ಚು ಅಂತದ್ರಲ್ಲಿ ಇಂಗ್ಲೆಂಡ್‌ ಟೀಮ್‌ ತಮ್ಮ ಜೊತೆಗೆ ಶೆಫ್‌ ಒಬ್ರನ್ನ ಅಂದ್ರೆ ಅಡುಗೆ ಮಾಡೋರನ್ನ ಕರೆದುಕೊಂಡು ಹೋಗಿದೆ. ಯಾಕಂದ್ರೆ ಕಳೆದ ಬಾರಿ ಟಿ20 ಸೀರೀಸ್‌ಗೆ ಅಂತ ಬಂದಾಗ ಅಲ್ಲಿಯ ಫುಡ್‌ ತಿಂದು, ಊಟ ಸೆಟ್‌ ಆಗದೇ ಆಟಗಾರರು ಹೊಟ್ಟೆ ಸಮಸ್ಯೆಗಳನ್ನ ಅನುಭವಿಸಿದ್ರು. ಈ ಬಾರಿ ಇವ್ರ ಸವಾಸನೇ ಬೇಡ ಅಂತ ಇಂಗ್ಲೆಂಡಿಂದಲೇ ಒಬ್ಬ ಭಟ್ರನ್ನ ಕರ್ಕೊಂಡು ಹೋಗಿದಾರೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಇದೇ ಮೊದಲ ಬಾರಿಗೆ ಶೆಫ್‌ ಒಬ್ರನ್ನ ವಿದೇಶಿ ಪ್ರವಾಸಕ್ಕೆ ನೇಮಕ ಮಾಡಿದೆ ಎನ್ನಲಾಗಿದೆ. ಅಂದ್ಹಾಗೆ ಇದೇ ಡಿಸೆಂಬರ್‌ನಿಂದ ಇಂಗ್ಲೆಂಡ್‌ ಪಾಕ್‌ನಲ್ಲಿ ಮೂರು ಟೆಸ್ಟ್‌ ಪಂದ್ಯಗಳನ್ನ ಆಡಲಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ನಾಳೆಯಿಂದ ಆರಂಭವಾಗಲಿವೆ. ಇದ್ರ ನಡುವೆಯೇ ಸ್ಟಾರ್‌ ಫುಟ್ಬಾಲ್‌ ಆಟಗಾರ ಹಾಗೂ ಪೋರ್ಚುಗಲ್‌ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ವಿಶ್ವಕಪ್ ಪ್ರಾರಂಭವಾಗುವ ಮೊದಲು, ರೊನಾಲ್ಡೊ ಸಂದರ್ಶನವೊಂದನ್ನ ನೀಡಿದ್ದು, ತಮ್ಮ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಮ್ಯಾನೇಜರ್ ಬಗ್ಗೆ ಆರೋಪಗಳ ಸುರಿಮಳೆಗೈದಿದ್ದರು. ರೊನಾಲ್ಡೊ ಅವರ ಈ ಆರೋಪ ಫುಟ್ಬಾಲ್ ಲೋಕದಲ್ಲಿ ಸಂಚಲನ ಮೂಡಿಸಿದ್ದು, ಇದೀಗ ಕ್ಲಬ್ ಕೂಡ ರೊನಾಲ್ಡೊ ವಿರುದ್ಧ ಕ್ರಮಕ್ಕೆ ನಿರ್ಧರಿಸಿದೆ. ಈ ಬಗ್ಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಹೇಳಿಕೆ ಬಿಡುಗಡೆ ಮಾಡಿದೆ. ಅದ್ರಲ್ಲಿ ರೊನಾಲ್ಡೊ ಕ್ಲಬ್‌ಗೆ ತಿಳಿಸದೆ ಸಂದರ್ಶನ ನೀಡಿದ್ದಲ್ಲದೇ, ಒಪ್ಪಂದದ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ಹೀಗಾಗಿ ಕ್ಲಬ್ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ವಕೀಲರನ್ನ ನಿಯೋಜಿಸಿದೆ. ಅವರನ್ನ ಕ್ಲಬ್‌ನಿಂದ ಬ್ಯಾನ್ ಮಾಡಲು ಚಿಂತಿಸಿದೆ. ವಿಶ್ವಕಪ್ ಬಳಿಕ ಕ್ಲಬ್​ನ ತರಬೇತಿ ಮೈದಾನಕ್ಕೆ ಬರದಂತೆ ರೊನಾಲ್ಡೊಗೆ ಸೂಚಿಸಲಾಗಿದೆ ಅಂತ ಉಲ್ಲೇಖಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: 2028ರ ಲಾಸ್‌ ಏಂಜಲಿಸ್‌ ಓಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸೋ ಐಸಿಸಿ ಕನಸು ಇನ್ನಷ್ಟು ಹತ್ತಿರ ಆಗ್ತಿದೆ. ಟೆಲಿಗ್ರಾಫ್‌ ಪತ್ರಿಕೆ ವರದಿ ಮಾಡಿರೋ ಪ್ರಕಾರ ಓಲಿಂಪಿಕ್ಸ್‌ಗೆ ಸೇರಿಸೋಕೆ ಈಗ 9 ಕ್ರೀಡೆಗಳು ಶಾರ್ಟ್‌ಲಿಸ್ಟ್‌ ಆಗಿದ್ದು ಅದ್ರಲ್ಲಿ ಕ್ರಿಕೆಟ್‌ ಕೂಡ ಇದೆ. ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಇದು ಫೈನಲ್‌ ಆಗುತ್ತೆ. ಇನ್ನು ಓಲಿಂಪಿಕ್ಸ್‌ಗೆ ಐಸಿಸಿ 6 ತಂಡಗಳ ಟಿ20ಯನ್ನ ಪ್ರಪೋಸ್‌ ಮಾಡಿದೆ ಎನ್ನಲಾಗಿದೆ. ಟೀಂ ಸೈಜ್‌ ದೊಡ್ಡದಾಗ್ಬಾರ್ದು ಅಂತ ಒಂದು ಟೀಂಗೆ 14 ಜನ ಆಟಗಾರರ ಮಿತಿ ಹೇರಿದೆ. ಬೇಗ ಬೇಗ ಆಡಿಸೋಕೆ ಒಂದು ಪುರುಷರ ಪಂದ್ಯ ಆದ ತಕ್ಷಣ ಮಹಿಳೆಯರ ಪಂದ್ಯ ಆಡಿಸಲಾಗುತ್ತೆ. ಇನ್ನು ಈ 6 ತಂಡಗಳನ್ನ ಎರಡು ಗ್ರೂಪ್‌ಗಳಾಗಿ ಡಿವೈಡ್‌ ಮಾಡ್ಬಹುದು, ಟಾಪ್‌ 2 ಸೆಮಿಫೈನಲ್‌ ಆಡ್ಬಹುದು ಎನ್ನಲಾಗಿದೆ. ಅತ್ತ ಇಂಗ್ಲೆಂಡ್‌ ತಂಡ, ಗ್ರೇಟ್‌ ಬ್ರಿಟನ್‌ ಆಗಿ ಅಂದ್ರೆ ಈ ಸ್ಕಾಟ್ಲೆಂಡ್‌, ನಾರ್ದರ್ನ್‌ ಐರ್ಲೆಂಡ್‌ ಆಟಗಾರರನ್ನ ಕೂಡ ಒಳಗೊಂಡಿರುತ್ತೆ ಎನ್ನಲಾಗಿದೆ. ಅತ್ತ ಟಾಪ್‌ 6ನಲ್ಲಿ ಭಾರತ ಇರೋದ್ರಿಂದ ಓಲಿಂಪಿಕ್ಸ್‌ಗು ಕೂಡ ಸೌತ್‌ ಏಷ್ಯಾದಲ್ಲಿ ಒಳ್ಳೇ ಪಾಪುಲಾರಿಟಿ ಸಿಗುತ್ತೆRead More →

masthmagaa.com: ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಎರಡನೇ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ. ಬಾರ್ಕ್ಲೇ ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಐಸಿಸಿ ಅಧ್ಯಕ್ಷ ಹುದ್ದೆಗಾಗಿ ಬಾರ್ಕ್ಲೇ ಜೊತೆಗೆ ಜಿಂಬಾಬ್ವೆಯ ತವೆಂಗ್ವಾ ಮುಕುಹಲಾನಿ ಕೂಡ ಸ್ಪರ್ಧಿಸಲಿದ್ದಾರೆ ಅನ್ನೊ ಮಾತು ಆರಂಭದಲ್ಲಿ ಕೇಳಿಬಂದಿತ್ತು. ಆದರೆ ತವೆಂಗ್ವಾ ಮುಕುಹಲಾನಿ ತಮ್ಮ ನಿರ್ಧಾರದಿಂದ ಹಿಂದೆ ಸರಿದ ಕಾರಣ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17 ಸದಸ್ಯರ ಮಂಡಳಿಯಲ್ಲಿ ಬಿಸಿಸಿಐ ಕೂಡ ಅವರಿಗೆ ಸಂಪೂರ್ಣ ಬೆಂಬಲವನ್ನ ನೀಡಿದೆ. ಅಂದ್ಹಾಗೆ ಮೊದಲ ಬಾರಿಗೆ ಬಾರ್ಕ್ಲೇ ನವೆಂಬರ್ 2020ರಲ್ಲಿ ಐಸಿಸಿ ಅಧ್ಯಕ್ಷ ಕುರ್ಚಿ ಏರಿದ್ದರು. ಇತ್ತ ಬಿಸಿಸಿಐನ ಕಾರ್ಯದರ್ಶಿಯಾಗಿರೊ ಜಯ್‌ ಶಾ ಅವ್ರನ್ನ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ICC) ನೀಡುವ ತಿಂಗಳ ಶ್ರೇಷ್ಠ ಪ್ರದರ್ಶನ ಗೌರವ ʻPlayer Of the Month’ ಪ್ರಶಸ್ತಿಗೆ ವಿರಾಟ್‌ ಕೊಹ್ಲಿ ಭಾಜನರಾಗಿದ್ದಾರೆ. ಅಕ್ಟೋಬರ್‌ ತಿಂಗಳ ಶ್ರೇಷ್ಠ ಪ್ರದರ್ಶನಕ್ಕೆ ಈ ಗೌರವ ಸಂದಿದೆ. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನದ ನಿದಾ ದಾರ್‌ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಂದ್ಹಾಗೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಕ್ಟೋಬರ್‌ 23ರಂದು ಪಾಕ್‌ ಎದುರು ಅಬ್ಬರಿಸಿದ್ದ ಕೊಹ್ಲಿ ಅಜೇಯ 82 ರನ್‌ ಸಿಡಿಸಿ ಭಾರತಕ್ಕೆ ರೋಚಕ ಜಯ ತಂದಿದ್ರು. ಈ ಅಮೋಘ ಪ್ರದರ್ಶನಕ್ಕೆ ಈ ಪ್ರಶಸ್ತಿ ಒಲಿದಿದೆ. -masthmgaa.com Share on:Read More →