masthmagaa.com: ಆರ್​ಎಸ್​​ಎಸ್​​​ಗೆ ಇವತ್ತು 96ನೇ ಹುಟ್ಟುಹಬ್ಬ. ಜೊತೆಗೆ ವಿಜಯದಶಮಿ ಹಬ್ಬ.. ಇದ್ರ ಅಂಗವಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್​ಎಸ್​​​ಎಸ್​​​ ಮುಖ್ಯಸ್ಥ ಮೋಹನ್ ಭಾಗವತ್​​ ದೇಶದ ಕೆಲವೊಂದು ಪರಿಸ್ಥಿತಿಗಳ ಕುರಿತು ಇವತ್ತು ಮಾತಾಡಿದ್ದಾರೆ. ಒಟಿಟಿ ಪ್ಲಾಟ್​ಫಾರ್ಮ್​​ಗಳಲ್ಲಿ ಏನೇನೋ ತೋರಿಸಲಾಗ್ತಿದೆ. ಅದಕ್ಕೆ ಯಾವುದೇ ನಿಯಂತ್ರಣ ಇಲ್ಲ.. ಕೊರೋನಾದಿಂದಾಗಿ ಮಕ್ಕಳ ಕೈಗೂ ಮೊಬೈಲ್ ಬಂದಿದೆ. ಅವರು ಅದ್ರಲ್ಲಿ ಏನೇನ್ ನೋಡ್ತಾರೆ ಅನ್ನೋದು ಕೂಡ ನಮಗೊತ್ತಿಲ್ಲ ಅಂದ್ರು. ಜೊತೆಗೆ ದೇಶದಲ್ಲಿ ನಶೆ ಪದಾರ್ಥಗಳ ಬಳಕೆ ಹೆಚ್ಚಾಗ್ತಿದೆ. ಇದ್ರಿಂದ ಬಂದ ದುಡ್ಡು ದೇಶ ವಿರೋಧಿ ಚಟುವಟಿಕೆಗಳಿಗೆ ಹೋಗ್ತಿದೆ. ಇದನ್ನು ನಿಯಂತ್ರಿಸೋದು ಅನಿವಾರ್ಯ ಅಂದ್ರು. ಬಿಟ್​​ಕಾಯಿನ್​ನಂತರ ರಹಸ್ಯವಾದ ಕರೆನ್ಸಿ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಬಹುದು. ಜಾಗತಿಕ ಹಿತಾಸಕ್ತಿಗಳು ದೇಶದ ಪ್ರಗತಿಯನ್ನು ತಡೆಯೋ ಉದ್ದೇಶ ಹೊಂದಿವೆ ಅಂತ ಕೂಡ ಕಿರಿಕಾರಿದ್ರು. ಇದೇ ವೇಳೆ ತಾಲಿಬಾನಿಗಳ ವಿಚಾರ ತೆಗೆದ ಮೋಹನ್ ಭಾಗವತ್​, ನಮಗೆ ತಾಲಿಬಾನ್ ಹಿಸ್ಟರಿ ಚೆನ್ನಾಗಿ ಗೊತ್ತು. ಅಂಥಹ ತಾಲಿಬಾನ್​ಗೆ ಪಾಕಿಸ್ತಾನ, ಚೀನಾ ಬೆಂಬಲ ಕೊಡ್ತಿದೆ. ತಾಲಿಬಾನ್ ಬದಲಾದ್ರೂ ಪಾಕ್ ಬದಲಾಗಲ್ಲ. ಭಾರತದ ವಿಚಾರವಾಗಿ ಚೀನಾದ ಉದ್ದೇಶ ಕೂಡRead More →

masthmagaa.com: ಕೋಟಿಗೊಬ್ಬ ಫ್ರಾಂಚೈಸ್ ಮೂರನೇ ಭಾಗದವರೆಗೂ ಬಂದಿರೋದಕ್ಕೆ ಪ್ರಮುಖ ಕಾರಣನೆ 2001 ರಲ್ಲಿ ವಿಷ್ಣುವರ್ಧನ್ ಅವರ ಅಭಿನಯದಲ್ಲಿ ಬಿಡುಗಡೆ ಆದ ಕೋಟಿಗೊಬ್ಬ ಸಿನಿಮಾ. ಸೋ ವಿಷ್ಣುವರ್ಧನ್ ಅವರನ್ನ ನೆನಪಿಸಿಕೊಳ್ಳದೆ ಕೋಟಿಗೊಬ್ಬ 3 ಸಿನಿಮಾದ ರಿವ್ಯೂ ಸಂಪೂರ್ಣ ಆಗಲ್ಲ. ವಿಷ್ಣುವರ್ಧನ ಅಭಿನಯದ ಕೋಟಿಗೊಬ್ಬ ಮತ್ತು ಸುದೀಪ್ ರ ಕೋಟಿಗೊಬ್ಬ 2 ಸಿನಿಮಾದ ನಾಯಕ ದುಡ್ಡನ್ನ ಕೊಳ್ಳೆ ಹೊಡೆಯೋದು   ಕಳ್ಳ ಹಣ ಅಥವಾ ಬ್ಲಾಕ್ ಮನಿ ಮಾತ್ರ ಅನ್ನೋದು ಕಾಮನ್ ಅಜೆಂಡಾ, ಇದು ಕೋಟಿಗೊಬ್ಬ 3 ನಲ್ಲೂ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದಿದೆ. ಬಶೀರ್ ಭೈ ಅನ್ನೋ ಲೋಕಲ್ ಸ್ಮಗ್ಲರ್ ಅನ್ನ ಹಿಡಿಯೋಕೆ ಪೊಲೀಸರಿಗೆ ಸಹಾಯ ಮಾಡುವ ಸತ್ಯ ತನ್ನ ಹಳೇ ಚಾಳಿಯನ್ನ ಇನ್ನೂ ಬಿಟ್ಟಿಲ್ಲ, ಸೋ ಅದಕ್ಕೇನೆ ಕೋಟಿಗೊಬ್ಬ 2 ನಲ್ಲಿ ಇರುವ ಪ್ರೇಯಸಿ ನಿತ್ಯ ಮೆನನ್ ಕೂಡ ಇಲ್ಲಿ ಸತ್ಯನ ಜೊತೆಗೆ ಇಲ್ಲ ಅಂತ ಅಂದುಕೊಬಹುದು. ಆದ್ರೇ ಈ ಸತ್ಯ ಪೊಲೀಸ್ ಕಮಿಷನರ್ ಸೋಮಶೇಖರ್ ಅಲಿಯಾಸ್ ದೊಡ್ಡಣ್ಣ ಅವರಿಗೆ ಹೇಗೆ ಆಪ್ತ ಅಂತ ಗೊತ್ತಾಗಬೇಕು ಅಂದ್ರೆ ನೀವು ಸಿನಿಮಾನ ಥೇಟರ್ ನಲ್ಲೇRead More →

masthmagaa.com: ಈ ಸೃಷ್ಟಿಯಲ್ಲಿ ಭೂಮಿ ಮೇಲೆ ಮಾತ್ರ ಜೀವಿಗಳಿರೋದಾ ಅಥವಾ ಬೇರೆ ಗ್ರಹಗಳಲ್ಲೂ ಜೀವಿಗಳಿವೆಯೋ ಅನ್ನೋದು ಇನ್ನೂ ಕೂಡ ನಿಗೂಢ ಪ್ರಶ್ನೆಯಾಗಿದೆ. ಇದೀಗ ದೂರದ 19 ನಕ್ಷತ್ರಗಳಿಂದ ಸಿಗ್ನಲ್​ಗಳನ್ನು ವಿಶ್ವದ ಅತಿ ಶಕ್ತಿಶಾಲಿ ರೇಡಿಯೋ ಆಂಟೆನಾ ಬಳಸೋ ಖಗೋಳ ತಜ್ಞರು ಹೇಳಿದ್ದಾರೆ. ಈ ನಕ್ಷತ್ರಗಳಿಂದ ಬಂದಿರೋ ಸಿಗ್ನಲ್​​ಗಳು ಈ ನಕ್ಷತ್ರಗಳ ಸುತ್ತ ಗ್ರಹಗಳು ಸುತ್ತತ್ತವೆ ಅನ್ನೋದನ್ನ ತೋರಿಸುತ್ತೆ. ಇವೆಲ್ಲವೂ ಕೆಂಪು ಕುಬ್ಜ ನಕ್ಷತ್ರಗಳಾಗಿದ್ದು, ಭೂಮಿಯಿಂದ 165 ಲೈಟ್ ಇಯರ್ಸ್ ದೂರದಲ್ಲಿವೆ. ಇವುಗಳ ಪೈಕಿ 4 ನಕ್ಷತ್ರಗಳಿಂದ ಬಂದ ಸಿಗ್ನಲ್ ಅಂತೂ ತಮ್ಮ ಸುತ್ತಲೂ ಗ್ರಹಗಳು ಸುತ್ತುತ್ತಿವೆ ಅನ್ನೋದನ್ನು ಸುಂದರವಾಗಿ ವರ್ಣಿಸಿವೆ ಅಂತ ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿರೋ ಕ್ವೀನ್ಸ್​​ಲ್ಯಾಂಡ್ ಯೂನಿವರ್ಸಿಟಿಯ ತಜ್ಞರ ತಂಡವೊಂದು ತಿಳಿಸಿದ್ದಾರೆ. ಇದ್ರಲ್ಲಿ ಡಚ್ ನ್ಯಾಷನಲ್ ಅಬ್ಸರ್ವೇಟರಿಯ ತಜ್ಞರು ಕೂಡ ಇದ್ದಾರೆ. ಅಂದಹಾಗೆ ಗ್ರಹದ ಕಾಂತೀಯ ಶಕ್ತಿ ಮತ್ತು ಸೌರ ಮಾರುತಗಳ ನಡುವೆ ಘರ್ಷಣೆಯಾಗಿ ರೇಡಿಯೋ ತರಂಗಗಳು ಬಿಡುಗಡೆಯಾಗುತ್ತವೆ. ನಮ್ಮ ಸೌರ ಮಂಡಲದ ಅಧ್ಯಯನದ ಮೂಲಕ ತಜ್ಞರು ಈ ಬಗ್ಗೆ ತಿಳಿದುಕೊಂಡಿದ್ದಾರೆ. ಆದ್ರೆ ಇದೇ ಮೊದಲ ಬಾರಿಗೆ ಸೌರRead More →

masthmagaa.com: ಇಟಲಿಯ ರೋಮ್​ನಲ್ಲಿ ನಡೆಯಲಿರೋ ಜಿ-20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗೋದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಫ್ರಾನ್ಸ್ ಜೊತೆ ಮಾಡಿಕೊಂಡಿದ್ದ ಒಪ್ಪಂದ ಕಟ್ ಮಾಡ್ಕೊಂಡು ಅಮೆರಿಕ ಜೊತೆ ಸಬ್​ಮರೀನ್ ಒಪ್ಪಂದ ಮಾಡ್ಕೊಂಡ್ಮೇಲೆ ಫ್ರಾನ್ಸ್ ಕೆಂಡಾಮಂಡಲವಾಗಿತ್ತು. ಉಭಯದೇಶಗಳ ನಡುವಿನ ಸಂಬಂಧದಲ್ಲಿ ಹುಳಿ ಹಿಂಡಿದಂತಾಗಿತ್ತು. ಆದ್ರೆ ಅಕ್ಟೋಬರ್ 30-31ರಂದು ನಡೆಯಲಿರೋ ಜಿ20 ಶೃಂಗಸಭೆ ವೇಳೆ ಭೇಟಿಯಾದಾಗ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ವಿಶ್ವಾಸ ಇದೆ ಅಂತ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಆರ್ಯನ್​ ಖಾನ್​ ಎನ್​ಸಿಬಿ ವಶದಲ್ಲಿರೋ ನಡುವೆಯೇ ತಂದೆ ಶಾರುಖ್​ ಖಾನ್​ ಈ ಹಿಂದೆ ಹೇಳಿದ ಮಾತುಗಳು ವೈರಲ್ ಆಗಿವೆ. ಸಂದರ್ಶನವೊಂದರಲ್ಲಿ ಶಾರುಖ್​ ಖಾನ್, ನನ್ನ ಮಗ ಎಷ್ಟು ಬೇಕೋ ಅಷ್ಟು ಸಿಗ್ರೇಟ್‌ ಸೇದಲಿ, ಮಾದಕ ವಸ್ತು ಸೇವಿಸಲಿ, ಹುಡುಗಿರ ಜೊತೆ ಸುತ್ತಲಿ, ಲೈಂಗಿಕ ಸಂಬಂದ ಹೊಂದಲಿ, ನಾನೇನು ಮಾಡಲು ಸಾಧ್ಯ ಆಗಿಲ್ಲವೋ ಅದೆಲ್ಲವನ್ನ ಮಾಡ್ಲಿ, ಚಿಕ್ಕ ವಯಸ್ಸಿನಲ್ಲೆ ಎಲ್ಲವನ್ನು ಪ್ರಾರಂಭಿಸಲಿ, ಎಂಜಾಯ್‌ ಮಾಡ್ಲಿ ಅಂತ ಹೇಳಿದ್ದಾರೆ. ಈ ವೀಡಿಯೋ ವೈರಲ್‌ ಆಗಿದೆ. ಹಾಗೇ ಸಾಕಷ್ಟು ಜನರಿಂದ ಉಗಿಸಿಕೊಂಡಿದ್ದಾರೆ ಕೂಡ. -masthmagaa.com Share on: WhatsAppContact Us for AdvertisementRead More →

masthmagaa.com: ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್ ನಟ ನವಾಬ್ ಶಾ ಸೇರಿದಂತೆ ಹಲವು ಖ್ಯಾತ ನಟರು ಚಿತ್ರೀಕರಣದಲ್ಲಿ ಭಾಗಿ. ಭಾರತದಾದ್ಯಂತ ಸದ್ದು ಮಾಡುತ್ತಿರುವ, ಬಹು ನಿರೀಕ್ಷಿತ “ಕಬ್ಜ” ಚಿತ್ರದ ಐದನೇ ಹಂತದ ಚಿತ್ರೀಕರಣ ಅಕ್ಟೋಬರ್ 4 ರಿಂದ ಆರಂಭವಾಗಲಿದೆ. ಈ ಹಂತದ ಚಿತ್ರೀಕರಣಕ್ಕಾಗಿ *ಕೆ.ಜಿ.ಎಫ್* ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಸುಮಾರು ಒಂದು ತಿಂಗಳಿನಿಂದ ಮಿನರ್ವ ಮಿಲ್ ನಲ್ಲಿ ಅದ್ದೂರಿಯಾಗಿ ಸೆಟ್ ನಿರ್ಮಾಣವಾಗಿದೆ. ಇದೇ ಸೆಟ್ ನಲ್ಲಿ ಸುಮಾರು 42ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ರಿಯಲ್ ಸ್ಟಾರ್ *ಉಪೇಂದ್ರ* , ಬಾಲಿವುಡ್ ನಟ *ನವಾಬ್ ಶಾ* ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.ಈ ಹಂತದ ಚಿತ್ರೀಕರಣ ಮುಗಿದರೆ, ಬಹುತೇಕ ಚಿತ್ರೀಕರಣ ಮುಗಿದಂತೆ.ಕೊನೆಯ ಹಂತದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯಲಿದೆ. ಖ್ಯಾತ ನಿರ್ದೇಶಕ *ಆರ್.ಚಂದ್ರು* ನಿರ್ದೇಶಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಿಯಲ್ ಸ್ಟಾರ್ *ಉಪೇಂದ್ರ* ಹಾಗೂ ‌ *ಕಿಚ್ಚ‌ ಸುದೀಪ* ಅವರು ಅಭಿನಯಿಸುತ್ತಿರುವುದು ಅಭಿಮಾನಿಗಳ ಕಾತುರವನ್ನು ಇನ್ನಷ್ಟು ಹೆಚ್ಚಿಸಿದೆ. ಚಿತ್ರ ಬಿಡುಗಡೆಗೆ ಕರ್ನಾಟಕವಷ್ಟೇRead More →

masthmagaa.com: ರಾಜ್ಯದಲ್ಲಿ ಇಂದು 664 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 08 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,77,889 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 37,819 ಆಗಿದೆ. ಇಂದು 711 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,27,740 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 12,301 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.26 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.80 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 5.69 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ. ಇಂದು ಮೃತಪಟ್ಟವರು: ಬೆಂಗಳೂರು ನಗರ 3 ದಕ್ಷಿಣ ಕನ್ನಡ 1 ಹಾಸನ 1 ಕೊಡಗು 1 ಮೈಸೂರು 1 ತುಮಕೂರು 1 Share on: WhatsAppContact Us for AdvertisementRead More →

masthmagaa.com: ಈ ವಾರದಲ್ಲಿ ಉತ್ತರ ಕೊರಿಯಾ ಎರಡೆರಡು ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಹಸ್ಯ ಸಭೆ ನಡೆದಿದೆ. ಮುಚ್ಚಿದ ಕೋಣೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಸಭೆಯಲ್ಲಿ ಯಾವುದೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಜಂಟಿ ಹೇಳಿಕೆ ಕೂಡ ಬಿಡುಗಡೆ ಮಾಡಿಲ್ಲ. ಅಮೆರಿಕ, ಫ್ರಾನ್ಸ್​ ಮತ್ತು ಬ್ರಿಟನ್ ಒತ್ತಾಯದ ಮೇರೆಗೆ ಈ ಸಭೆ ಕರೆಯಲಾಗಿತ್ತು. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ಕುರಿತು ಸಾರ್ವಜನಿಕವಾಗಿ ಹೇಳಿಕೆ ಬಿಡುಗಡೆ ಮಾಡಬೇಕು ಅನ್ನೋದು ಫ್ರಾನ್ಸ್ ಒತ್ತಾಯವಾಗಿತ್ತು. ಆದ್ರೆ ಯಾವುದೇ ಹೇಳಿಕೆ ಬಿಡುಗಡೆ ಮಾಡಲು ಇದು ಸರಿಯಾದ ಸಮಯವಲ್ಲ. ಪರಿಸ್ಥಿತಿಯನ್ನು ಅನಾಲೈಜ್ ಮಾಡೋಕೆ ಇನ್ನೂ ಟೈಂ ಬೇಕು ಅಂತ ರಷ್ಯಾ ಮತ್ತು ಚೀನಾ ಅಡ್ಡಗಾಲು ಹಾಕಿತು ಅಂತ ಮಾಹಿತಿ ಲಭ್ಯವಾಗಿದೆ. ಅಂದಹಾಗೆ ಮಂಗಳವಾರ ಹೈಪರ್​ಸೋನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ, ಗುರುವಾರ ಆ್ಯಂಟಿ ಏರ್​ಕ್ರಾಫ್ಟ್​ ಕ್ಷಿಪಣಿಯ ಪರೀಕ್ಷೆ ನಡೆಸಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಅಫ್ಘಾನಿಸ್ತಾನದಲ್ಲಿ ಇಂದಿನಿಂದ ಶಾಲೆಗಳು ಶುರುವಾಗಿವೆ. ಈ ಬಗ್ಗೆ ನಿನ್ನೆಯೇ ಹೇಳಿಕೆ ಬಿಡುಗಡೆ ಮಾಡಿರೋ ಶಿಕ್ಷಣ ಇಲಾಖೆ, ನಾಳೆಯಿಂದ ಹುಡುಗರಿಗೆ ಶಾಲೆ ಶುರುವಾಗುತ್ತೆ ಅಂತ ಹೇಳಿದೆ. ಆದ್ರೆ ಹುಡುಗಿಯರು ಶಾಲೆಗಳಿಗೆ ಹೋಗ್ಬೋದಾ..? ಇಲ್ವಾ..? ಏನು ಅಂತ ಮಾಹಿತಿ ನೀಡಿಲ್ಲ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಕಂಪ್ಲೀಟಾಗಿ ವಶಕ್ಕೆ ಪಡೆದ ಬಳಿಕ ದೇಶದ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್ ಆಗಿವೆ. ಕೆಲವೊಂದು ಶಾಲೆಗಳು ತೆರೆದ್ರೂ 6ನೇ ತರಗತಿವರೆಗಿನ ಹೆಣ್ಮಕ್ಕಳು ಮತ್ತು ಯುನಿವರ್ಸಿಟಿಯ ವಿದ್ಯಾರ್ಥಿನಿಯರು ತಾಲಿಬಾನ್ ರೂಲ್ಸ್ ಪ್ರಕಾರ ಕ್ಲಾಸ್​​ಗೆ ಹಾಜರಾಗ್ತಿದ್ದಾರೆ. ಆದ್ರೆ ಹೈಸ್ಕೂಲ್ ಹುಡುಗಿಯರ ಕ್ಲಾಸ್​​ಗಳಿಗೆ ಹಾಜರಾಗ್ತಿಲ್ಲ. ಇವರ ಬಗ್ಗೆ ತಾಲಿಬಾನಿಗಳು ಕೂಡ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಗೊಂದಲ ಮುಂದುವರಿದಿದೆ. -masthmagaa.com   Share on: WhatsAppContact Us for AdvertisementRead More →

masthmagaa.com: ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 347 ರುಪಾಯಿ ಕಡಿಮೆಯಾಗಿ, ₹46,310 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 600 ರುಪಾಯಿ ಕಡಿಮೆಯಾಗಿ 43,400 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,127 ರುಪಾಯಿ ಕಡಿಮೆಯಾಗಿ ₹61,131ಆಗಿದೆ. -masthmagaa.com Share on: WhatsAppContact Us for AdvertisementRead More →