ರಾಹುಲ್‌ ಗಾಂಧಿ ಆಪ್ತ ಕೆ ಸಿ ವೇಣುಗೋಪಾಲ್‌ಗೆ ಸಿಬಿಐ ಡ್ರಿಲ್!

masthmagaa.com:

ಕೇರಳ ಸೋಲರ್‌ ಹಗರಣದ ಪ್ರಮುಖ ಆರೋಪಿ ಆಗಿರುವ ಸಂಸದ, ಕಾಂಗ್ರೆಸ್‌ ನಾಯಕ ಕೆ ಸಿ ವೇಣುಗೋಪಾಲ್‌, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ರು ಅನ್ನುವ ಆರೋಪದ ಮೇಲೆ ಅವರನ್ನ ಸಿಬಿಐ ವಿಚಾರಣೆ ನಡೆಸಿರೋದು ಬೆಳಕಿಗೆ ಬಂದಿದೆ. 2012ರಲ್ಲಿ ಸೋಲಾರ್‌ ಎನರ್ಜಿ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಿಳೆಯೊಬ್ಬರ ಮೇಲೆ ಎಫ್‌ ಐ ಆರ್‌ ದಾಖಲಾಗಿತ್ತು. ಸೋಲಾರ್‌ ಹಗರಣ ಕೇರಳದಲ್ಲಿ ಭಾರಿ ಸದ್ದು ಮಾಡಿದ ಕಾರಣ ಸಿಎಂ ಪಿಣರಾಯ್‌ ವಿಜಯನ್‌ ಈ ಕೇಸ್‌ ಅನ್ನ ಸಿಬಿಐಗೆ ಹಸ್ತಾಂತರಿಸಿದ್ರು.ನಂತರ ಸಿಬಿಐ ತನಿಖೆ ವೇಳೆ ಮಹಿಳೆ ತನ್ನ ಮೇಲೆ ಅತ್ಯಾಚಾರ ಮಾಡಿರೋದಾಗಿ ಹೇಳಿಕೆ ನೀಡಿದ್ರು. ಹಾಗಾಗಿ ಹೇಳಿಕೆಯ ಆಧಾರಮೇಲೆ ಕೆ ಸಿ ವೇಣುಗೋಪಾಲ್‌ ಅವರ ಸುದೀರ್ಘ ವಿಚಾರಣೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply