CBSE 10ನೇ ತರಗತಿ ಪರೀಕ್ಷೆ ರದ್ದು.. ಇಲ್ಲಿದೆ ಸಂಪೂರ್ಣ ಮಾಹಿತಿ

masthmagaa.com:

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಜೋರಾಗಿ ಎದ್ದಿರೋ ಹಿನ್ನೆಲೆ ಮಕ್ಕಳ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು CBSE 10ನೇ ತರಗತಿಯ ಬೋರ್ಡ್​ ಎಕ್ಸಾಂ ಅನ್ನ ರದ್ದು ಮಾಡಲಾಗಿದೆ. ಅವರ ರಿಸಲ್ಟ್ ಅನ್ನ ಇಂಟರ್​ನಲ್​ ಅಸೆಸ್​ಮೆಂಟ್ ಆಧಾರದ ಮೇಲೆ ನಿರ್ಧರಿಸಲಾಗುತ್ತೆ. ಯಾವುದಾದ್ರೂ ವಿದ್ಯಾರ್ಥಿಯ ಇಂಟರ್​ನಲ್ ಅಸೆಸ್​ಮೆಂಟ್​ ಚೆನ್ನಾಗಿ ಇಲ್ಲದಿದ್ರೆ ಅಂಥವರಿಗೆ ಕೊರೋನಾ ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಇನ್ನು ಮೇ 4ರಿಂದ ಆರಂಭವಾಗಬೇಕಿದ್ದ CBSE 12ನೇ ತರಗತಿ ಪರೀಕ್ಷೆಗಳನ್ನ ಮುಂದೂಡಲಾಗಿದೆ. 12ನೇ ತರಗತಿ ಪರೀಕ್ಷೆ ಬಗ್ಗೆ ಜೂನ್​ 1ನೇ ತಾರೀಖು ಮತ್ತೊಮ್ಮೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಾಗುತ್ತೆ ಅಂತ ರಮೇಶ್ ಪೋಖ್ರಿಯಾಲ್ ಹೇಳಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಕೇಂದ್ರ ಶಿಕ್ಷಣ ಸಚಿವರು ಮತ್ತು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು.
ಇನ್ನು CBSE 10ನೇ ತರಗತಿ ಎಕ್ಸಾಂ ರದ್ದಾದ ಬೆನ್ನಲ್ಲೇ SSLC ಪರೀಕ್ಷೆ ಕೂಡ ರದ್ದಾಗುತ್ತೆ, ಮುಂದೂಡಿಕೆಯಾಗುತ್ತೆ ಅನ್ನೋ ಊಹಾಪೋಹ ಎದ್ದಿದೆ. ಆದ್ರೆ SSLC ಪರೀಕ್ಷೆ ರದ್ದು ಮಾಡುವ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಈ ಸಂಬಂಧ ನಿರ್ಧರಿಸಲಾಗುತ್ತೆ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply