BREAKING: CBSE 10, 12ನೇ ತರಗತಿ ಎಕ್ಸಾಂ ಡೇಟ್​ ಅನೌನ್ಸ್.. ಸಂಪೂರ್ಣ ಮಾಹಿತಿ

masthmagaa.com:

ಸಿಬಿಎಸ್​​ಇ 10 ಮತ್ತು 12ನೇ ತರಗತಿಯ ಎಕ್ಸಾಂ ಡೇಟ್​ ಅನೌನ್ಸ್ ಆಗಿದೆ. 2021ರ ಮೇ 4ರಿಂದ ಪರೀಕ್ಷೆಗಳು ಆರಂಭವಾಗಿ ಜೂನ್​ 10ರಂದು ಕೊನೇ ಪರೀಕ್ಷೆ ನಡೆಯಲಿದೆ. ಜುಲೈ 15ರಂದು ರಿಸಲ್ಟ್ ಅನೌನ್ಸ್ ಆಗಲಿದೆ ಅಂತ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್​ ಹೇಳಿದ್ದಾರೆ. ಪ್ರಾಕ್ಟಿಕಲ್ ಎಕ್ಸಾಂಗಳು ಮಾರ್ಚ್​ 1ನೇ ತಾರೀಖಿನಿಂದ ಆರಂಭವಾಗಲಿವೆ. ಪ್ರತೀ ವರ್ಷ ಜನವರಿ ತಿಂಗಳಲ್ಲಿ ಪ್ರಾಕ್ಟಿಕಲ್ ಎಕ್ಸಾಂ ಮತ್ತು ಫೆಬ್ರವರಿ-ಮಾರ್ಚ್​ನಲ್ಲಿ ಥಿಯರಿ ಎಕ್ಸಾಂ ನಡೀತಿತ್ತು. ಆದ್ರೆ ಈ ಬಾರಿ ಕೊರೋನಾ ಹಾವಳಿಯಿಂದ ಐದಾರು ತಿಂಗಳು ಮುಂದೆ ಹೋಗಿದೆ. 10ನೇ ಕ್ಲಾಸ್​ನ 18 ಲಕ್ಷ ವಿದ್ಯಾರ್ಥಿಗಳು ಮತ್ತು 12ನೇ ಕ್ಲಾಸ್​ನ 12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಕೊರೋನಾ ಹಿನ್ನೆಲೆ ಪರೀಕ್ಷೆಗಳನ್ನ ಕ್ಯಾನ್ಸಲ್ ಮಾಡಿ ವಿದ್ಯಾರ್ಥಿಗಳನ್ನ ಪ್ರಮೋಟ್ ಮಾಡೋದ್ರಿಂದ ಮಕ್ಕಳ ಮೇಲೆ ಒಂದು ಸ್ಟಾಂಪ್ ಹಾಕಿದಾಗೆ ಆಗುತ್ತೆ. ಇಂತಹ ವಿದ್ಯಾರ್ಥಿಗಳಿಗೆ ಮುಂದೆ ಜಾಬ್​ ಪಡೆಯೋವಾಗ ಅಥವಾ ಉನ್ನತ ಶಿಕ್ಷಣಕ್ಕೆ ಅಡ್ಮಿಷನ್​ ಪಡೆಯೋವಾಗ ಪ್ರಾಬ್ಲಂ ಆಗ್ಬೋದು. ಕೊರೋನಾ ಸಮಯದ ವಿದ್ಯಾರ್ಥಿಗಳು ಅಂತ ಪರಿಗಣಿಸಬಹುದು. ಹೀಗಾಗಬಾರದು ಅಂತ ಪರೀಕ್ಷೆಗಳನ್ನ ನಡೆಸುತ್ತಿದ್ದೇವೆ ಅಂತ ಕೇಂದ್ರ ಶಿಕ್ಷಣ ಸಚಿವರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply