ಬ್ರಿಟನ್‌ ರಾಣಿ ಅಧಿಕಾರಕ್ಕೆ 70 ವರ್ಷ, ನಾವು ನಿಮ್ಮ ಸಮ ಎಂದ ಆಸ್ಟ್ರೇಲಿಯಾ ಪ್ರಧಾನಿ

masthmagaa.com:

ಬ್ರಿಟನ್‌ ರಾಣಿ ಎಲಿಜಬೆತ್‌-2 ಅವ್ರ ಅಧಿಕಾರವಧಿಯ 70 ವರ್ಷದ ವಾರ್ಷಿಕೋತ್ಸವ ಅಥವಾ ಪ್ಲಾಟಿನಮ್‌ ಜುಬ್ಲೀಯನ್ನ ಲಂಡನ್‌ ಸಡಗರ ಸಂಭ್ರಮದಿಂದ ಆಚರಿಸಿದೆ. ಬಕಿಂಗ್‌ಹ್ಯಾಂ ಪ್ಯಾಲೇಸ್‌ನ ಬಾಲ್ಕನಿಯಲ್ಲಿ ನಿಂತಿದ್ದ 96 ವರ್ಷದ ರಾಣಿಗೆ ಬ್ರಿಟನ್‌ ಮಿಲಿಟರಿ ಪೆರೇಡ್‌, ಮಿಲಿಟರಿ ವಿಮಾನಗಳೊಂದಿಗೆ ಗೌರವ ಸಲ್ಲಿಸಿದೆ. ಇಂಗ್ಲೆಂಡ್‌ ಹಾಗೂ ಕಾಮನ್‌ವೆಲ್ತ್‌ ದೇಶಗಳಾದ್ಯಂತ ರಾತ್ರಿ ಸುಮಾರು 3 ಸಾವಿರ ಬೇಕನ್‌ ಅಂದ್ರೆ ಜ್ಯೋತಿಗಳನ್ನ ಬೆಳಗಲಾಗಿದೆ. ಇನ್ನು ಅತ್ತ ಆಸ್ಟ್ರೇಲಿಯಾ ಹಾಗು ನ್ಯೂಜಿಲೆಂಡ್‌ನಲ್ಲೂ ರಾಣಿಗೆ ಶುಭಕೋರಲಾಗಿದೆ. ಈ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌, ಅಸಿಸ್ಟಂಟ್‌ ಮಿನಿಸ್ಟರ್‌ ಫಾರ್‌ ದಿ ರಿಪಬ್ಲಿಕ್‌ ಅಂತ ಒಬ್ಬ ಸಚಿವರನ್ನ ನೇಮಿಸಿದ್ದು, ರಿಪಬ್ಲಿಕನ್‌ ಅಂತ ಪದ ಬಳಕೆ ಮಾಡಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲಿನ ರಾಜಪ್ರಭುತ್ವವಾದಿಗಳು ಅಂದ್ರೆ ಈ ಇಂಗ್ಲೆಂಡ್‌ ರಾಣಿಯೇ ತಮ್ಮ ಸುಪ್ರೀಂ ಅಂದುಕೊಳ್ಳೋರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ದೇಶವನ್ನ ಮಿಸ್‌ಲೀಡ್‌ ಮಾಡ್ತಾ ಇದ್ದಾರೆ ಅಂತ ಹೇಳಿದ್ದಾರೆ. ಈ ಆಸ್ಟ್ರೇಲಿಯ, ನ್ಯೂಜಿಲೆಂಡ್‌ಗಳು ರಿಪಬ್ಲಿಕ್‌ ದೇಶಗಳು ಹೌದಾ ಅಲ್ವಾ ಅನ್ನೋದು ಆವಾಗಾವಾಗ ಚರ್ಚೆಯಾಗ್ತಾನೇ ಇರುತ್ತೆ.

-masthmagaa.com

Contact Us for Advertisement

Leave a Reply