2023-24ರ ಕೇಂದ್ರ ಬಜೆಟ್‌ಗೆ ಸಾರ್ವಜನಿಕರಿಂದ ಸಲಹೆ ಆಹ್ವಾನ: ಹಣಕಾಸು ಸಚಿವಾಲಯ

masthmagaa.com:

ಮುಂದಿನ ವರ್ಷ ಫೆಬ್ರುವರಿಯಲ್ಲಿ ಮಂಡಿಸಲಿರೋ 2023-24ರ ಕೇಂದ್ರ ಬಜೆಟ್‌ಗೆ ಜನರ ಸಲಹೆಯನ್ನ ಕೇಂದ್ರ ಸರ್ಕಾರ ಆಹ್ವಾನಿಸಿದೆ. ʻಮೈ ಗವ್‌ʼ ಪ್ಲಾಟ್‌ಫಾರ್ಮ್‌ನಲ್ಲಿ 2023-24ರ ಕೇಂದ್ರ ಬಜೆಟ್‌ಗೆ ಐಡಿಯಾ ಮತ್ತು ಸಲಹೆಗಳನ್ನ ಆಹ್ವಾನಿಸಲಾಗ್ತಿದೆ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಟ್ವೀಟ್‌ ಮಾಡಿದ್ದಾರೆ. ಬಜೆಟ್‌ ತಯಾರಿಕೆಯಲ್ಲಿ ಜನರೂ ಕೂಡ ಭಾಗವಹಿಸಬೇಕು ಅನ್ನೋ ಮನೋಭಾವವನ್ನ ಮೂಡಿಸೋಕೆ ಪ್ರತಿ ವರ್ಷ ಹಣಕಾಸು ಸಚಿವಾಲಯ ಸಾರ್ವಜನಿಕರನ್ನ ಇನ್ವೈಟ್‌ ಮಾಡುತ್ತೆ ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಂದ್ಹಾಗೆ ಸಲಹೆಗಳನ್ನ ಸಬ್‌ಮಿಟ್‌ ಮಾಡೋಕೆ ಡಿಸೆಂಬರ್‌ 10 ಕೊನೆ ದಿನಾಂಕ. ಇತ್ತ ಕೇಂದ್ರ ಕಾರ್ಮಿಕರ ಸಂಘಟನೆಗಳ ಜೊತೆಗೆ ಬಜೆಟ್‌ನ ಪೂರ್ವಭಾವಿ ಸಭೆಯನ್ನ ವರ್ಚುಯಲ್‌ ಆಗಿ ನವೆಂಬರ್‌ 28ರಂದು ನಡೆಸೋಕೆ ನಿರ್ಧರಿಸಲಾಗಿದೆ. ಆದ್ರೆ ಈ ಸಭೆಯನ್ನ ಕೇಂದ್ರ ಕಾರ್ಮಿಕ ಸಂಘಟನೆಗಳು ಬಹಿಷ್ಕಾರ ಮಾಡೋಕೆ ನಿರ್ಧಾರ ಮಾಡಿದ್ದಾರೆ. ಯಾಕಂದ್ರೆ ಟ್ರೇಡ್‌ ಯೂನಿಯನ್‌ಗೆ ತಮ್ಮ ಸಲಹೆ ನೀಡೋಕೆ ಕೇವಲ 3 ನಿಮಿಷ ನೀಡಲಾಗಿದೆ. ಅದು ಸಾಕಾಗೊದಿಲ್ಲ ಹಾಗಾಗಿ ಆನ್‌ಲೈನ್‌ ಮೀಟಿಂಗ್‌ ಬೇಡ ಆಫ್‌ಲೈನ್‌ ಸಭೆ ಆಯೋಜನೆ ಮಾಡ್ಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply