masthmagaa.com:

ಹಬ್ಬ ಮತ್ತು ಚಳಿಗಾಲ ಆರಂಭವಾದ ಬಳಿಕ ಕೆಲವೊಂದು ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇದನ್ನ ನಿಯಂತ್ರಿಸುವ ಸಂಬಂಧ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿ ಡಿಸೆಂಬರ್ 1ರಿಂದ ಡಿಸೆಂಬರ್ 31ರವರಗೆ ಜಾರಿಯಲ್ಲಿರಲಿದೆ.

  • ಜಿಲ್ಲಾಡಳಿತದ ಸಹಾಯ ಪಡೆದು ರಾಜ್ಯ ಸರ್ಕಾರಗಳು ಮೈಕ್ರೋ ಕಂಟೈನ್​ಮೆಂಟ್​ ಝೋನ್​ಗಳನ್ನ ಗುರುತಿಸಬೇಕು. ಇಂತಹ ಕಂಟೈನ್​ಮೆಂಟ್ ಝೋನ್​ಗಳ ಪಟ್ಟಿಯನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಗಳು ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಬೇಕು. ಜೊತೆಗೆ ಕೇಂದ್ರ ಆರೋಗ್ಯ ಇಲಾಖೆಗೂ ಈ ಪಟ್ಟಿ ಕಳಿಸಿಕೊಡಬೇಕು.
  • ಕಂಟೈನ್​ಮೆಂಟ್​ ಝೋನ್​ಗಳ ಒಳಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕು. ಕಂಟೈನ್​ಮೆಂಟ್​ ಝೋನ್​ನ ಒಳಗೆ ಅಥವಾ ಹೊರಗೆ ಯಾರೂ ಹೋಗದಂತೆ ನೋಡಿಕೊಳ್ಳಬೇಕು. ಆದ್ರೆ ಆರೋಗ್ಯ ಮತ್ತು ಅಗತ್ಯ ಸೇವೆಗಳಿಗೆ ಅವಕಾಶ ನೀಡಬೇಕು.
  • ಕಂಟೈನ್​ಮೆಂಟ್​ ಝೋನ್​ನಲ್ಲಿರುವ ಪ್ರತಿಯೊಂದು ಮನೆ ಮೇಲೂ ನಿಗಾ ಇಡಬೇಕು. ಇದಕ್ಕಾಗಿ ತಂಡವನ್ನ ರಚಿಸಬೇಕು.
  • ಕಂಟೈನ್​ಮೆಂಟ್​ ಝೋನ್​​ಗಳಲ್ಲಿ ಕೊರೋನಾ ಪರೀಕ್ಷೆಗಳನ್ನ ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನ ಪತ್ತೆಹಚ್ಚಬೇಕು. ಅವರನ್ನ ಕ್ವಾರಂಟೈನ್​ಗೆ ಒಳಪಡಿಸಿ 14 ದಿನಗಳ ಕಾಲ ನಿಗಾ ಇಡಬೇಕು.
  • ಈ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗ್ತಿದೆಯಾ ಅನ್ನೋದನ್ನ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳದ್ದಾಗಿರುತ್ತದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾರಾ ಅನ್ನೋದನ್ನ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು.
  • ಎಲ್ಲರೂ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು. ಅಗತ್ಯಬಿದ್ದರೆ ರಾಜ್ಯ ಸರ್ಕಾರಗಳು ದಂಡ ಕೂಡ ವಿಧಿಸಬಹುದು.
  • ಮಾರುಕಟ್ಟೆ, ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲಿ ದೈಹಿಕ ಅಂತರ ಕಾಪಾಡುವ ಸಂಬಂಧ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ನಿಯಮಗಳನ್ನ ಪಾಲಿಸಬೇಕು.
  • ಪರಿಸ್ಥಿತಿ ಅವಲೋಕಿಸಿ ಸ್ಥಳೀಯ ಮಟ್ಟದಲ್ಲಿ ರಾಜ್ಯ ಸರ್ಕಾರಗಳು ಕೆಲವೊಂದು ನಿರ್ಬಂಧಗಳನ್ನ ವಿಧಿಸಬಹುದು. ನೈಟ್​ ಕರ್ಫ್ಯೂ, ಇತ್ಯಾದಿ. ಆದ್ರೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸದೇ  ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ನಗರ ಮಟ್ಟದಲ್ಲಿ ಲಾಕ್​ಡೌನ್ ಹೇರಬಾರದು.
  • ಕಚೇರಿಗಳಲ್ಲಿ ದೈಹಿಕ ಅಂತರ ಕಾಪಾಡಬೇಕು. ಪಾಸಿಟಿವಿಟಿ ರೇಟ್​ 10 ಪರ್ಸೆಂಟ್​ಗೂ ಹೆಚ್ಚಿರುವ ನಗರಗಳಲ್ಲಿ ಸಿಬ್ಬಂದಿ ಸಂಖ್ಯೆಯನ್ನ ಕಮ್ಮಿ ಮಾಡುವ ಉದ್ದೇಶದಿಂದ  ಬೇರೆ ಬೇರೆ ಸಮಯದಲ್ಲಿ ಕಚೇರಿಗೆ ಬರುವಂತೆ ನಿಯಮ ರೂಪಿಸಬೇಕು.
  • ರಾಜ್ಯ-ರಾಜ್ಯಗಳ ನಡುವೆ ಮತ್ತು ರಾಜ್ಯದ ಒಳಗೆ ಜನರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಬಾರದು.
  • 65 ವರ್ಷ ಮೇಲ್ಪಟ್ಟವರು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಮನೆಯಲ್ಲೇ ಇರುವಂತೆ ನೋಡಿಕೊಳ್ಳಬೇಕು.
  • ಆರೋಗ್ಯ ಸೇತು ಅಪ್ಲಿಕೇಶನ್ ಬಳಸುವಂತೆ ಜನರಿಗೆ ಉತ್ತೇಜನ ನೀಡಬೇಕು.

-masthmagaa.com

Contact Us for Advertisement

Leave a Reply