ಚಂದನ್ ಶೆಟ್ಟಿಗೆ ಎಂಗೇಜ್ಮೆಂಟ್ ಸಂಕಷ್ಟ..! ಕೇಸ್ ಫಿಕ್ಸ್..!

ವೇದಿಕೆ ಮೇಲೆ ನಿಶ್ಚಿತಾರ್ಥ ಮಾಡಿಕೊಂಡ ಚಂದನ್ ಶೆಟ್ಟಿ ವಿರುದ್ಧ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಪಾರಂಪರಿಕ ನಾಡಹಬ್ಬದಲ್ಲಿ ಈ ರೀತಿ ವರ್ತಿಸಿರೋದು ಅಕ್ಷಮ್ಯ ಅಪರಾಧ. ಕ್ಷಮಿಸಲು ಸಾಧ್ಯವೇ ಇಲ್ಲ. ತಾಯಿ ಏನ್ ತೀರ್ಮಾನ ಕೊಡ್ತಾರೋ ಕೊಡಲಿ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರಿಗೂ ನೋಟಿಸ್ ನೀಡಲಾಗಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳಾಗುತ್ತೆ. ಇದು ಹುಡುಗಾಟಿಕೆ ಆಡೋ ಜಾಗವಲ್ಲ. ಆ ಹುಡುಗ ನನಗೆ ಪರಿಚಯದವನೇ..ಯಾಕೆ ಹೀಗೆ ಮಾಡಿದ್ನೋ ಗೊತ್ತಿಲ್ಲ. ಇದಕ್ಕೆ ಉಪಸಮಿತಿ ಹೊಣೆಯಲ್ಲ ಎಂದು ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂದನ್ ಶೆಟ್ಟಿ, ನಾವು ಎಂಗೇಜ್ಮೆಂಟ್ ಆಗಿಲ್ಲ. ಜಸ್ಟ್ ಪ್ರಪೋಸ್ ಮಾಡಿದ್ದೇನೆ. ನಾವು ಮನರಂಜನೆಗಾಗಿ ಹೀಗೆ ಮಾಡಿದ್ವಿ. ಎಲ್ಲರಿಗೂ ನಮ್ಮ ನಡುವೆ ಪ್ರೀತಿ ಇದೆ ಅಂತ ಅನುಮಾನ ಇತ್ತು. ಅದನ್ನು ಸರಿಪಡಿಸಿದ್ದೇವೆ ಅಷ್ಟೆ ಅಂದ್ರು.

Contact Us for Advertisement

Leave a Reply