ಚಂದನ್-ನಿವೇದಿತಾ ಎಂಗೇಜ್..! ಯುವ ದಸರಾದಲ್ಲಿ ನಡೆದಿದ್ದೇನು..?

ಯುವ ದಸರಾದ ವೇದಿಕೆಯಲ್ಲೇ ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡಿದ್ದಾರೆ. ಉಂಗುರವನ್ನು ತೋರಿಸಿ ಮದುವೆಯಾಗುತ್ತೀಯಾ ಎಂದು ಕೇಳಿದ್ದಾರೆ. ಈ ವೇಳೆ ನಿವೇದಿತಾ ಕೂಡ ಐ ಲವ್ ಯೂ ಟೂ ಚಂದನ್ ಎಂದಿದ್ದಾರೆ. ಅಲ್ಲದೆ ನನಗೆ ಪ್ರಪೋಸ್ ಮಾಡಿದಾಗ ತುಂಬಾ ಶಾಕ್ ಆಯ್ತು ಎಂದಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯ ಈ ಜೋಡಿ ಎಂಗೇಜ್ ಆಗಿದೆ.

ಇನ್ನು ಕಾರ್ಯಕ್ರಮ ಬಳಿಕ ಈ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, ಈ ಬಗ್ಗೆ ಕರ್ನಾಟಕ ಜನತೆಗೆ ತಿಳಿಸಬೇಕೆಂದು ತುಂಬಾ ಪ್ರಯತ್ನ ಪಟ್ಟಿದ್ದೆ. ಇವತ್ತು ನನ್ನ ಪಾಲಿಗೆ ಒಳ್ಳೆಯ ದಿನ. ನಾನು ದಸರಾದಲ್ಲಿ ಕಾರ್ಯಕ್ರಮ ನೀಡಬೇಕು ಎಂದು ಕಾಲೇಜು ದಿನಗಳಿಂದಲೂ ಕನಸು ಇಟ್ಟುಕೊಂಡಿದ್ದೆ. ಆ ಕನಸು ಇವತ್ತು ಈಡೇರಿದೆ. ಹೀಗಾಗಿ ಇದೇ ಒಳ್ಳೆಯ ದಿನ ಎಂದುಕೊಂಡು ಪ್ರಪೋಸ್ ಮಾಡಿದ್ದೇನೆ ಅಂದ್ರು. ನಿವೇದಿತಾ ತಂದೆ ಮಾತನಾಡಿ, ನನಗೇನೂ ಬೇಸರವಿಲ್ಲ. ತುಂಬಾ ಖುಷಿಯಾಗಿದೆ ಅಂದ್ರು.

Contact Us for Advertisement

Leave a Reply