ಟಿಕ್ ಟಾಕ್ ಸ್ಟಾರ್ ಗೆ ಬಿಜೆಪಿ ಟಿಕೆಟ್..! ಯಾರು ಆಕೆ..?

ಈಗ ಎಲ್ಲಿ ನೋಡಿದ್ರೂ ಟಿಕ್ ಟಾಕ್ ಹುಚ್ಚು ಜೋರಾಗಿದೆ. ಇತ್ತೀಚೆಗಷ್ಟೇ ಟಿಕ್ ಟಾಕ್ ಮಾಡು ಹೋಗಿ ಆಂಧ್ರಪ್ರದೇಶದಲ್ಲಿ ಓರ್ವ ಯುವಕ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳ ವಿಡಿಯೋ ಕೂಡ ಟಿಕ್‍ಟಾಕ್‍ನಲ್ಲಿ ವೈರಲ್ ಆಗುತ್ತೆ. ಇವರಲ್ಲಿ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಕೂಡ ಒಬ್ಬರಾಗಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಸೋನಾಲಿಗೆ ಟಿಕೆಟ್ ಕೊಟ್ಟಿದೆ. ಇದ್ರ ಬೆನ್ನಲ್ಲೆ ಟಿಕ್‍ಟಾಕ್‍ನಲ್ಲಿ ಸೋನಾಲಿ ಫಾಲೋವರ್ಸ್ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಈವರೆಗೆ ಟಿಕ್‍ಟಾಕ್‍ನಲ್ಲಿ ಸೋನಾಲಿ ಬೆಂಬಲಿಗರ ಸಂಖ್ಯೆ ಬರೋಬ್ಬರಿ 1 ಲಕ್ಷದ 18 ಸಾವಿರ ಇದೆ. ಅಲ್ಲದೆ ಸೋನಾಲಿ ಮಾಡಿರೋ ಟಿಕ್ ಟಾಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗ್ತಿದೆ.

 

Contact Us for Advertisement

Leave a Reply