ಸಂಚಾರಿ ವಿಜಯ್ ಹೆಸರಿನಲ್ಲಿ ಗಿಳಿ ದತ್ತುಪಡೆದ ಚಕ್ರವರ್ತಿ ಚಂದ್ರಚೂಡ್!!

masthmagaa.com:

ಅಪಘಾತದಿಂದ ಮೃತಪಟ್ಟ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​ ಹೆಸರಿನಲ್ಲಿ ಪತ್ರಕರ್ತ ಹಾಗೂ ಕನ್ನಡ ಬಿಗ್​ ಬಾಸ್​ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಗಿಣಿಯನ್ನು ದತ್ತು ಪಡೆದಿದ್ದಾರೆ.

ಸಂಚಾರಿ ವಿಜಯ್ ಜೊತೆಗಿನ 10 ವರ್ಷಗಳ ಸ್ನೇಹದ ಗುರುತಾಗಿ ಹಾಗೂ ಅವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚೂಡ್​ ಮೃಗಾಲಯದಿಂದ ಗಿಳಿಯನ್ನು ದತ್ತು ಪಡೆದಿದ್ದಾರೆ. ಅವರೇ ಹೇಳುವ ಹಾಗೆ ಸಂಚಾರಿ ವಿಜಯ್ ಗೆ ಗಿಳಿ ನೆಚ್ಚಿನ ಪ್ರಾಣಿಯಂತೆ. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯದ ಗಿಣಿಯನ್ನು ದತ್ತು ಪಡೆದ ಚಂದ್ರಚೂಡ್, 1 ವರ್ಷಗಳ ಕಾಲ ಅದರ ಆರೈಕೆ ನಡೆಸಲಿದ್ದಾರೆ.

– masthmagaa.com

Contact Us for Advertisement

Leave a Reply