ಅರವಿಂದ್‌ ಕೇಜ್ರಿವಾಲ್‌ ʻಚೋಟಾ ರೀಚಾರ್ಜ್‌ʼ ಎಂದು ವಾಗ್ದಾಳಿ ಮಾಡಿದ ಓವೈಸಿ!

masthmagaa.com:

ಪ್ರಧಾನಿ ಮೋದಿಯವರಿಗೆ ಕಾಂಪಿಟೇಶನ್‌ ಕೊಡೋಕೆ ಅರವಿಂದ್‌ ಕೇಜ್ರಿವಾಲ್‌ ಕೂಡ ಮುಂದಾಗಿದ್ದಾರೆ.. ಕೇಜ್ರಿವಾಲ್‌ ಚೋಟಾ ರೀಚಾರ್ಜ್‌ ಅಂತ ಅಂತ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಮೋದಿ ಮತ್ತು ಕೇಜ್ರಿವಾಲ್‌ ಇಬ್ಬರೂ ದೊಡ್ಡಣ್ಣ ಚಿಕ್ಕಣ್ಣನ ರೀತಿ ಅಂತ ಹೇಳಿದ್ದಾರೆ. ದೆಹಲಿಯ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಓವೈಸಿ, ದೆಹಲಿಯಲ್ಲಿ ಗಲಭೆ ನಡೆದಾಗ ಕೇಜ್ರಿವಾಲ್‌ ನಾಪತ್ತೆಯಾಗಿದ್ರು. ಪೌರತ್ವ ತಿದ್ದುಪಡಿಯನ್ನ ವಿರೋಧಿಸಿದಾಗ ಪ್ರತಿಭಟನಾಕಾರನ್ನ ಬೈದಿದ್ರು. ಕೊರೊನಾ ವೈರಸ್‌ ತಬ್ಲಿಘಿಗಳಿಂದ ಹರಡ್ತಿದೆ ಅಂತ ವಿಷ ಉಗುಳಿದ್ರು. ಇದರಿಂದ ಇಡೀ ದೇಶದಲ್ಲಿ ಮುಸ್ಲಿಮರನ್ನ ಸಂಶಯದಿಂದ ನೋಡೋಕೆ ಶುರು ಆಯ್ತು.. ಅದಕ್ಕೆಲ್ಲಾ ದೆಹಲಿ ಸಿಎಂ ಕಾರಣ..ಈಗ ನೋಟಿನಲ್ಲಿ ಲಕ್ಷ್ಮೀ ಗಣೇಶರ ಫೋಟೋ ಹಾಕಿ ಅಂತ ಹೇಳ್ತಿದಾರೆ. ದೊಡ್ಡಣ್ಣನ ದಾರಿಯಲ್ಲೇ ಚಿಕ್ಕಣ್ಣ ಕೂಡ ಹೋಗ್ತಿದ್ದಾರೆ. ಇದರಿಂದ ದೊಡ್ಡಣ್ಣನಿಗೆ ಖುಷಿಯಾಗಿದೆ ಅಂತ ವ್ಯಂಗ್ಯವಾಡಿದ್ದಾರೆ. ಇತ್ತ ದೆಹಲಿಯ ಕೇಜ್ರಿವಾಲ್ ಸರ್ಕಾರದ ವೈಫಲ್ಯಗಳನ್ನು ತೋರಿಸ್ತೀವಿ ಅಂತ ಬಿಜೆಪಿ ಕೂಡ ‘ದಿಲ್ಲಿ ಕಾ ಲಡ್ಕಾ’ ಅನ್ನೋ ಕಾರ್ಟೂನ್ ಸರಣಿಯನ್ನು ಬಿಡುಗಡೆ ಮಾಡಿದೆ

-masthmagaa.com

Contact Us for Advertisement

Leave a Reply