ಸದ್ಯದಲ್ಲೇ ಚಿತ್ರಮಂದಿರಗಳಿಗೆ ಬರಲಿದೆ “ಚಿ.ತು.ಸಂಘ”!

masthmagaa.com:

ಶರಣ್-ಚಿಕ್ಕಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಜನಪ್ರಿಯ ಚಿತ್ರ”ಅಧ್ಯಕ್ಷ”. ಈ ಚಿತ್ರದಲ್ಲಿ ತಮ್ಮ ಅವರಿಬ್ಬರೂ ಸೇರಿ ಕಟ್ಟಿದ್ದೇ ” ಚಿ.ತು.ಸಂಘ”.ಈಗ “ಚಿ.ತು.ಸಂಘ” ದ ಹೆಸರಿನ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

ನಾಯಕನಾಗಿ ನಟಿಸಿರುವ ಚೇತನ್ ಕುಮಾರ್ ಈ ಚಿತ್ರ ನಿರ್ದೇಶನ ಕೂಡ ಮಾಡಿದ್ದಾರೆ.ಹೊಸ ಹುಡುಗಿ ರೂಪ “ಚಿ.ತು.ಸಂಘ” ದ ನಾಯಕಿ. ಶಿವಣ್ಣ ನಂದಿಹಳ್ಳಿ, ಲಕ್ಷ್ಮೀಕಾಂತಯ್ಯ ಮತ್ತು ಪಾರ್ವತಿ ಹೊಳೆನರಸೀಪುರ ನಿರ್ಮಿಸಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗಿದೆ.

masthmagaa.com

Contact Us for Advertisement

Leave a Reply