ದೇಶದ ಮೊದಲ ಖಾಸಗಿ ರೈಲಿಗೆ ಹಸಿರು ಬಾವುಟ…!

ದೇಶದ ಮೊದಲ ಖಾಸಗಿ ರೈಲು ತೇಜಸ್ ಹಳಿ ಮೇಲೆ ಇಳಿದು ಓಡಲು ಆರಂಭಿಸಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೈಲಿಗೆ ಹಸಿರು ಬಾವುಟ ತೋರಿಸಿದ್ರು. ಇದೇ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್, ಇದು ದೇಶದ ಮೊದಲ ಕಾರ್ಪೋರೇಟ್ ರೈಲು. ಇದರಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ದೇಶದ ಇತರೆ ನಗರಗಳಿಗೂ ಈ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಅಂದ್ರು.

ಇನ್ನು ಈ ರೈಲಿನಲ್ಲಿ ಫುಲ್ ಏಸಿ ಇದ್ದು ಹಲವಾರು ಸೌಲಭ್ಯಗಳಿವೆ. ಅಲ್ಲದೆ ದೇಶದ ಅತೀ ವೇಗದ ಸೂಪರ್ ಎಕ್ಸ್‍ಪ್ರೆಸ್ ಟ್ರೇನ್ ಕೂಡ ಇದಾಗಿದೆ. ಪ್ರಯಾಣಿಕರನ್ನು ಆಕರ್ಷಿಸುವ ಸಲುವಾಗಿ 1 ಗಂಟೆ ತಡವಾದ್ರೆ 100 ರೂಪಾಯಿ, 2 ಗಂಟೆ ತಡವಾದ್ರೆ 250 ರೂಪಾಯಿ ನೀಡೋದಾಗಿ ಘೋಷಿಸಲಾಗಿದೆ.

Contact Us for Advertisement

Leave a Reply