ತಾಲಿಬಾನ್‌ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ಕೊಟ್ಟ ಚೀನಾ!

masthmagaa.com:

ತಾಲಿಬಾನ್‌ ಸರ್ಕಾರಕ್ಕೆ ರಾಜತಾಂತ್ರಿಕ ಮಾನ್ಯತೆ ಕೊಟ್ಟ ಮೊಟ್ಟಮೊದಲ ದೇಶ ಅಂತ ಇದೀಗ ಚೀನಾ ಕರೆಸಿಕೊಳ್ತಿದೆ. ತಾಲಿಬಾನ್‌-ಚುನಾಯಿತ ಅಧಿಕಾರಿಯನ್ನ ಇದೀಗ ಚೀನಾದ ಅಫ್ಘಾನ್‌ ರಾಯಭಾರಿಯಾಗಿ ನೇಮಿಸಲಾಗಿದೆ. ಈ ಮೂಲಕ ಅಫ್ಘಾನ್‌ನಲ್ಲಿ ಆಡಳಿತ ನಡೆಸ್ತಿರೋ ತಾಲಿಬಾನ್‌ ಸರ್ಕಾರ ಕಾನೂನುಬದ್ಧವಾಗಿದೆ ಅಂತ ಚೀನಾ ಮಾನ್ಯತೆ ನೀಡಿದೆ. ಈ ಕುರಿತು ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್ಬಿನ್‌, ʻಚೀನಾ ಅಫ್ಘಾನ್‌ನ ಮಿತ್ರ ರಾಷ್ಟ್ರವಾಗಿದೆ. ಅಂತಾರಾಷ್ಟ್ರೀಯ ಕಮ್ಯುನಿಟಿಯಿಂದ ಅಫ್ಘಾನ್‌ನ ಹೊರಗಿಡಬಾರ್ದು ಅಂತ ಚೀನಾ ನಂಬುತ್ತೆʼ ಎಂದು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply