CPEC, BRI ಮೇಲೆ ಚೀನಾದ ಕಣ್ಣು! ಭಾರತ ಕೆಂಡ!

masthmagaa.com:

ಭಾರತದ ಜೊತೆಗಿನ ವ್ಯಾಪಾರ ವಹಿವಾಟನ್ನ ದೊಡ್ಡ ಮಟ್ಟದಲ್ಲಿ ಹೆಚ್ಚಿಗೆ ಮಾಡ್ತೀವಿ ಅಂತ ಚೀನಾ ಹೇಳಿದೆ. ಆದ್ರೆ ಇದೇ ಸಂದರ್ಭದಲ್ಲಿ BRI ಅಥ್ವಾ ಬಾರ್ಡರ್‌ ಆಂಡ್‌ ರೋಡ್‌ ಇನಿಶಿಯೇಟಿವ್‌, ಚೀನಾ-ಪಾಕಿಸ್ತಾನ್‌ ಎಕನಾಮಿಕ್‌ ಕಾರಿಡಾರ್‌ (CPEC), ಶ್ರೀಲಂಕಾದ ಹಂಬನ್‌ತೋತಾ ಬಂದರಿನ ಸಂಪರ್ಕಗಳ ಮೇಲೂ ಫೋಕಸ್‌ ಮಾಡಲಾಗುತ್ತೆ ಅಂತ ಚೀನಾ ಹೇಳಿದೆ. ಚೀನಾದ ಈ ಹೇಳಿಕೆಗಳು ಭಾರತವನ್ನ ಕೆರಳಿಸಿವೆ. ಯಾಕಂದ್ರೆ ಪಿಒಕೆ ಮೂಲಕ ಹಾದುಹೋಗೊ ಹಾಗೂ ಭಾರತದ ಸಾರ್ವಭೌಮತ್ವವನ್ನ ಉಲ್ಲಂಘಿಸೊ CPEC ಅಥವಾ ಬಿಆರ್‌ಐಗೆ ಭಾರತ ಅನುಮೋದನೆ ನೀಡಿಲ್ಲ. ಹಾಗೂ ಅಪಾರದರ್ಶಕತೆಯಿಂದ ಕೂಡಿರೊ ಅಂದ್ರೆ ಸ್ಪಷ್ಟವಾದ ಮಾಹಿತಿ ಇರದ BRI ಯೋಜನೆ ಪಾಕ್‌, ಶ್ರೀಲಂಕಾದಂತ ದೇಶಗಳನ್ನ ಸಾಲದ ಬಲೆಗೆ ತಳ್ಳಿದೆ ಅಂತ ಭಾರತ ಆರೋಪಿಸ್ತಾ ಬರ್ತಿದೆ. ಈ ಮಧ್ಯೆ ಚೀನಾ ಮತ್ತೆ ಈ ಯೋಜನೆಗಳ ಮೇಲೆ ಫೋಕಸ್‌ ಮಾಡ್ತೀನಿ ಅಂದಿರೋದು ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಅಂದ್ಹಾಗೆ ಈ ವರ್ಷದ ಮೊದಲ 9 ತಿಂಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ 103.6 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 8.44 ಲಕ್ಷ ಕೋಟಿ ರೂಪಾಯಿಗೆ ರೀಚ್‌ ಆಗಿದೆ ಅಂತ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply