ಇನ್ಮುಂದೆ ಹೆಣ್ತಿಗೂ ಸಂಬಳ ಕೊಡ್ಬೇಕು!

masthmagaa.com:

ವಿಚ್ಛೇದನ ಕೇಸ್ ಒಂದರಲ್ಲಿ ಚೀನಾ ನ್ಯಾಯಾಲಯ ವಿಚಿತ್ರವಾದ ತೀರ್ಪು ನೀಡಿದೆ. ಬೀಜಿಂಗ್​ನಲ್ಲಿ ಕಳೆದ ವರ್ಷ ವ್ಯಕ್ತಿಯೊಬ್ಬ ತನ್ನ ಪತ್ನಿಯಿಂದ ಡಿವೋರ್ಸ್​​ಗಾಗಿ ಅರ್ಜಿ ಸಲ್ಲಿಸಿದ್ದ. ನಂತರದಲ್ಲಿ ಮಹಿಳೆ ನಾನು ಮದುವೆಯಾದ ಬಳಿಕ ಹೊರಗೆಲ್ಲೂ ಕೆಲಸಕ್ಕೆ ಹೋಗಿಲ್ಲ. ಮನೆ ಕೆಲಸವನ್ನೇ ಮಾಡಿಕೊಂಡು ಬಂದಿದ್ದೇನೆ.

ಹೀಗಾಗಿ ಮನೆ ಕೆಲಸ ಮಾಡಿದ್ದಕ್ಕೆ ನನಗೆ ಪರಿಹಾರ ಕೊಡಿಸಬೇಕೆಂದು ಕೋರ್ಟ್​​​ಗೆ ಮನವಿ ಮಾಡಿದ್ದರು. ಅದರಂತೆ ಕೋರ್ಟ್​ ಈಗ 5 ವರ್ಷ ಮನೆ ಕೆಲಸ ಮಾಡಿದ ಕಾರಣಕ್ಕಾಗಿ ಪತ್ನಿಗೆ 7,700 ಡಾಲರ್ ಅಂದ್ರೆ ಐದೂವರೆ ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರತಿತಿಂಗಳು ಮಕ್ಕಳ ನಿರ್ವಹಣೆಗೂ ದುಡ್ಡು ಕೊಡಬೇಕು.. ಈಗ ಇರುವ ಆಸ್ತಿಯಲ್ಲೂ ಅರ್ಧಭಾಗ ನೀಡಬೇಕು ಅಂತ ತೀರ್ಪು ನೀಡಿದೆ.

-masthmagaa.com

Contact Us for Advertisement

Leave a Reply