ಮುಂದುವರೆದ ಚೀನಾದ ಅತಿಕ್ರಮಣ ನೀತಿ! ನೇಪಾಳದ 89 ಎಕರೆ ಪ್ರದೇಶ ಗುಳುಂ!

masthmagaa.com:

ಕೊರೊನಾ, ಆರ್ಥಿಕ ತೊಂದರೆ, ತೈವಾನ್‌ ಬಿಕ್ಕಟ್ಟು ಹೀಗೆ ಹಲವು ಸಮಸ್ಯೆಗಳನ್ನ ಎದುರಿಸ್ತಿರೊ ಚೀನಾ ತನ್ನ ದುರ್ಬುದ್ದಿಯನ್ನ ಮಾತ್ರ ಬಿಟ್ಟಿಲ್ಲ. ನೆರೆಯ ದೇಶಗಳ ಭೂ ಭಾಗಗಳನ್ನ ಕಬಳಿಸೋದನ್ನ ಮುಂದುವರೆಸಿದೆ. ಇದೀಗ ನೆರೆಯ ನೇಪಾಳದ 10 ಸ್ಥಳಗಳಲ್ಲಿ ಒಟ್ಟು 36 ಹೆಕ್ಟೇರ್‌ ಅಂದ್ರೆ ಸುಮಾರು 89 ಎಕರೆಗಳಷ್ಟು ಜಾಗವನ್ನ ಅತಿಕ್ರಮಣ ಮಾಡಿಕೊಂಡಿದೆ ಅಂತ ವರದಿಯಾಗಿದೆ. ನೇಪಾಳದ ಉತ್ತರ ಗಡಿಯಲ್ಲಿ ಈ ಅತಿಕ್ರಮಣ ನಡೆದಿದೆ ಅಂತ ನೇಪಾಳದ ಕೃಷಿ ಸಚಿವಾಲಯ ಬಿಡುಗಡೆ ಮಾಡಿದ ಸರ್ವೇ ಡಾಕುಮೆಂಟ್‌ನಲ್ಲಿ ತಿಳಿದು ಬಂದಿದೆ. ಈ ಸರ್ವೇಯನ್ನ ನೇಪಾಳ ಗೃಹ ಸಚಿವಾಲಯ ಮಾಡಿದ್ದು, ಗಡಿ ಸಮಸ್ಯೆಯನ್ನ ತಮ್ಮ ʻರಾಜ್ಯ ನೀತಿʼಯಲ್ಲಿ ಸೇರಿಸಬೇಕು ಅಂತ ನಿರ್ಧರಿಸಿದೆ ಎನ್ನಲಾಗಿದೆ. ಅಂದ್ಹಾಗೆ ಚೀನಾ ಬೇರೆ ದೇಶಗಳ ಜಾಗವನ್ನ ಅತಿಕ್ರಮಣ ಮಾಡಿ, ಅಲ್ಲಿ ಮೂಲ ಸೌಕರ್ಯಗಳ ಘಟಕಗಳನ್ನ ನಿರ್ಮಾಣ ಮಾಡೋದು. ಕ್ರಮೇಣ ಆ ಪ್ರದೇಶವನ್ನ ತನ್ನ ಟೆರಿಟರಿ ಅಂತ ಹೇಳೋದು ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಈ ಮೊದಲು 2016ರಲ್ಲಿ ನೇಪಾಳದ ಜಿಲ್ಲೆಯೊಂದ್ರಲ್ಲಿ ಚೀನಾ ಪ್ರಾಣಿಗಳಿಗೆ ಆಸ್ಪತ್ರೆಯೊಂದನ್ನ ನಿರ್ಮಿಸಿತ್ತು. ಆದರೆ ಇದಕ್ಕೆ ನೇಪಾಳ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು ನೇಪಾಳದ ಗಡಿಗಳಲ್ಲಿ ಕಣ್ಗಾವಲು ಚಟುವಟಿಕೆಗಳನ್ನ ಮಾಡ್ತಿದೆ ಅಂತಾನೂ ಚೀನಾ ಮೇಲೆ ಆರೋಪಗಳು ಕೇಳಿ ಬರ್ತಿವೆ. ಅಂದ್ಹಾಗೆ 2020ರ ಸೆಪ್ಟಂಬರ್‌ನಲ್ಲಿ ಕೂಡ ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ 11 ಕಟ್ಟಡಗಳನ್ನ ನಿರ್ಮಿಸಿರೊ ವಿಷಯ ಬೆಳಕಿಗೆ ಬಂದಿತ್ತು.

-masthmagaa.com

Contact Us for Advertisement

Leave a Reply