ಭಾರತದೊಳಗೆ ನುಗ್ಗಿ ಗ್ರಾಮ ನಿರ್ಮಿಸಿದ ಚೀನಾ! ಉಪಗ್ರಹ ತೆಗೆದ ಶಾಕಿಂಗ್ ಚಿತ್ರ

masthmagaa.com:

ದೆಹಲಿ: ಚೀನಾ ಅರುಣಾಚಲ ಪ್ರದೇಶದಲ್ಲಿ ಹೊಸದೊಂದು ಗ್ರಾಮವನ್ನೇ ನಿರ್ಮಿಸಿಬಿಟ್ಟಿದ್ಯಂತೆ.. ಹೀಗಂತ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ನವೆಂಬರ್ 1ರಂದು ತೆಗೆಯಲಾದ ಉಪಗ್ರಹ ಚಿತ್ರಗಳಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ವಾಸ್ತವಿಕ ಗಡಿ ರೇಖೆಯಿಂದ ನಾಲ್ಕೂವರೆ ಕಿಲೋಮೀಟರ್ ಒಳಭಾಗದಲ್ಲಿ ಈ ಗ್ರಾಮವನ್ನು ನಿರ್ಮಿಸಲಾಗಿದ್ದು, ಇದ್ರಲ್ಲಿ 101 ಮನೆಗಳಿವೆ ಅಂತ ತಜ್ಞರು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ತುಂಬಾ ದೀರ್ಘಕಾಲದಿಂದ ವಿವಾದ ಇರೋ ಸುಬನ್​ಸಿರಿ ಜಿಲ್ಲೆಯ ತ್ಸಾರಿ ಚೂ ನದಿ ದಡದಲ್ಲಿ ಈ ಗ್ರಾಮ ನಿರ್ಮಾಣವಾಗಿದೆ. ಇದೊಂದು ಸಶಸ್ತ್ರ ಯುದ್ಧಕ್ಕೆ ಬಳಸಲ್ಪಡುವ ಜಾಗವಾಗಿ ಕೂಡ ಗುರುತಿಸಿಕೊಂಡಿದೆ.

2019ರ ಆಗಸ್ಟ್​ನಲ್ಲಿ ತೆಗೆಯಲಾದ ಚಿತ್ರದಲ್ಲಿ ನೀವು ಗಮನಿಸಬಹುದು.. ಇಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆದಿಲ್ಲ.. ಖಾಲಿ ಖಾಲಿಯಾಗಿವೆ.. ಅದೇ 2020ರ ನವೆಂಬರ್​ನಲ್ಲಿ ತೆಗೆಯಲಾದ ಚಿತ್ರದಲ್ಲಿ ಮನೆಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ, ಚೀನಾ ಗಡಿ ಭಾಗದಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ತಿರೋ ಬಗ್ಗೆ ನಾವು ವರದಿಗಳನ್ನು ನೋಡಿದ್ದೇವೆ. ಈಗಂತ ಅಲ್ಲ.. ಚೀನಾ ಗಡಿ ಭಾಗದಲ್ಲಿ ಅಲ್ಲಿನ ಜನರಿಗಾಗಿ ಕಳೆದ ಕೆಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸ್ತಿದೆ. ಅದೇ ರೀತಿ ನಾವು ಕೂಡ ಗಡಿಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸ್ತಿದ್ದೇವೆ ಅಂತ ಹೇಳಿದೆ. ಆದ್ರೆ ಈ ಭಾಗದಲ್ಲಿ ಭಾರತ ರಸ್ತೆಗಳನ್ನು ಅಭಿವೃದ್ಧಿಪಡಿಸ್ತಿರೋದಕ್ಕೆ ಯಾವುದೇ ಕುರುಹುಗಳು ಸಿಕ್ಕಿಲ್ಲ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದು ವಿಚಾರ ಅಂದ್ರೆ ಈ ಬಗ್ಗೆ ನವೆಂಬರ್ 2020ರಲ್ಲಿ ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಪಿರ್ ಗಾವ್ ಸಂಸತ್​​ನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ರು. ಚೀನಾ ಈಗಾಗಲೇ ಸುಬನ್​ಸಿರಿ ಜಿಲ್ಲೆಯಲ್ಲಿ 70ರಿಂದ 80 ಕಿಲೋಮೀಟರ್​​ವರೆಗೆ ಒಳಗೆ ಬಂದಿದ್ದು, ಅಲ್ಲಿ ಲೆನ್ಸಿ ನದಿ ತೀರದುದ್ದಕ್ಕೂ ನಿರಂತರವಾಗಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ತಿದೆ ಅಂತ ಹೇಳಿದ್ರು. ಈಗ ನಾವು ನೋಡ್ತಿರೋ ಚೀನಾ ನಿರ್ಮಿತ ಗ್ರಾಮದ ಚಿತ್ರ ಕೂಡ ಅದೇ ನವೆಂಬರ್​​​​​​​​​ 2020ರಲ್ಲಿ ತೆಗೆದಿರೋದು ಅನ್ನೋದು ಗಮನಿಸಬೇಕಾಗಿರುವ ಸಂಗತಿ..

ಅಷ್ಟೇ ಅಲ್ಲ.. ಭಾರತ ಸರ್ಕಾರದ ಅಧಿಕೃತ ಮ್ಯಾಪ್​​​​​​ ಆಗಿರೋ ಸರ್ವೇಯರ್ ಜನರಲ್ ಆಫ್ ಇಂಡಿಯಾದ ಭೂಪಟದ ಪ್ರಕಾರ ಚೀನಾ ಗ್ರಾಮ ನಿರ್ಮಿಸಿರುವ ಈ ಪ್ರದೇಶ ಭಾರತದ ಭೂಪ್ರದೇಶವಾಗಿದೆ. ಸೋ ಈಗಾಗಲೇ ದೂರದ ಹಿಮಾಲಯನ್ ರೇಂಜ್​​ನಲ್ಲಿ, ಲಡಾಕ್​ನಲ್ಲಿ ಭಾರತದೊಂದಿಗೆ ಕುಸ್ತಿ ಮುಂದುವರಿಸಿರುವ ಚೀನಾ ಈಗ ಮತ್ತೊಂದು ದಿಕ್ಕಿನಿಂದ ಸಮಸ್ಯೆ ಒಡ್ಡಲು ಪ್ರಯತ್ನ ಪಡುತ್ತಿದೆ. ಈಗ ಚೀನಾ ಗ್ರಾಮ ನಿರ್ಮಿಸಿರುವ ಅರುಣಾಚಲ ಪ್ರದೇಶದ ಈ ಭಾಗ 1959ರಿಂದಲೂ ಭಾರತ-ಚೀನಾ ಸೇನೆ ನಡುವೆ ಘರ್ಷಣೆಗೆ ಕಾರಣವಾಗಿರುವ ಸ್ಥಳವಾಗಿದೆ. 1962ರ ಭಾರತ ಚೀನಾ ಯುದ್ಧದ ವೇಳೆಯೂ ಇಲ್ಲಿ ಸಂಘರ್ಷ ಸಂಭವಿಸಿತ್ತು.

-masthmagaa.com

Contact Us for Advertisement

Leave a Reply